ಅ.25ಕ್ಕೆ PRKStarFandom ಆ್ಯಪ್‌ ಅನಾವರಣ; ಪುನೀತ್​ರ ಪ್ರಯಾಣಕ್ಕೆ ಧ್ವನಿ ನೀಡಿದ ನಟ ಸುದೀಪ್​

Untitled design - 2025-10-18T172829.313
Published on

Bangalore: ಕನ್ನಡದ ಪ್ರತಿ ಮನೆ, ಮನದಲ್ಲೂ ಅಜರಾಮರವಾಗಿರುವ ನಟ ಡಾ. ಪುನೀತ್ ರಾಜ್‌ಕುಮಾರ್ ನಮ್ಮನ್ನೆಲ್ಲಾ ಅಗಲಿ ಅಕ್ಟೋಬರ್​ 29ಕ್ಕೆ ನಾಲ್ಕು ವರ್ಷಗಳಾಗುತ್ತಿದ್ದು, ಈ ಹಿನ್ನಲೆಯಲ್ಲಿ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಭಾರತದ ಮೊದಲ ಫ್ಯಾನ್​​ ಡಮ್​ ಪ್ಲಾಟ್‌ಫಾರ್ಮ್ (PRKStarFandom) ಆದ ಪಿಆರ್‌ಕೆ ಸ್ಟಾರ್ ಫ್ಯಾನ್​​ ಡಮ್​ ಆ್ಯಪ್‌ನ ಟ್ರೇಲರ್ ಅನ್ನು ಶನಿವಾರ(ಅ 18) ಅನಾವರಣಗೊಳಿಸಿದರು.

ಈ ಆ್ಯಪ್‌ ಅಕ್ಟೋಬರ್ 25 ರಂದು ಬೆಂಗಳೂರಿನಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗಾಗಿ ಬಿಡುಗಡೆಯಾಗಲಿದ್ದು. ಪುನೀತ್​ ಬಾಲ ನಟನಾಗಿನಿಂದ ಹಿಡಿದು, ತಮ್ಮ ಕೊನೆಯ ದಿನಗಳವರೆಗಿನ ವೃತ್ತಿಜೀವನವನ್ನು ಸಂಭ್ರಮಿಸಲು ಅಭಿಮಾನಿ ಕಥೆಗಳು, ವಿಶೇಷ ವಿಷಯ ಮತ್ತು ಸಮುದಾಯ ನಿರ್ಮಾಣದಂತಹ ಸಂವಾದಾತ್ಮಕ ಅಂಶಗಳನ್ನು ಈ ಅಪ್ಲಿಕೇಶನ್ ಒಳಗೊಂಡಿದೆ.

ಈ ವಿಷಯವನ್ನು ಪುನೀತ್​ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಪ್ರತಿ ಅಭಿಮಾನಿಯ ಹೃದಯದಿಂದ, ಪ್ರತಿಯೊಂದು ಮನೆಯವರೆಗೂ ಅಪ್ಪುವಿನ ನೆನಪು ಅಜರಾಮರ...

ಪ್ರೀತಿಸುವ ಹೃದಯಗಳಿಂದ ನಿರ್ಮಾಣವಾದ ವಿಶ್ವದ ಮೊಟ್ಟಮೊದಲ ಫ್ಯಾನ್‌ಡಮ್‌ ಆ್ಯಪ್‌ ಇದೇ ಅಕ್ಟೋಬರ್‌ 25ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ. ನಿಜವಾದ ಪ್ರೀತಿ ಎಂದಿಗೂ ಮಾಸುವುದಿಲ್ಲ ಎಂದು ನಂಬುವ ಪ್ರತಿಯೊಬ್ಬ ಅಭಿಮಾನಿಗೆ ಇದು ಸಮರ್ಪಿತ ಎಂದು ಬರೆದುಕೊಂಡಿದ್ದಾರೆ.

ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಮೂರು ನಿಮಿಷಗಳ ಟ್ರೇಲರ್‌ಗೆ ಧ್ವನಿ ನೀಡಿದ್ದು, ಇದು ಅಪ್ಪುವಿನ ಅಪೂರ್ವ ಮತ್ತು ಸುಧೀರ್ಘ ಪ್ರಯಾಣವನ್ನು ಪ್ರತಿಯೊಬ್ಬರ ಕಣ್ಣಮುಂದೆ ತಂದಿಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net