ಸ್ವಾತಂತ್ರ್ಯೋತ್ಸವ ಪದಬಂಧ ಸ್ಪರ್ಧೆ; ಹತ್ತು ವಿಜೇತರಿಗೆ ನಗದು ಬಹುಮಾನ

73A8449.JPG
Published on

ಬೆಳಗಾವಿ: ‌ಕನ್ನಡದ ನಂ.1 ದಿನ ಪತ್ರಿಕೆ ವಿಜಯವಾಣಿ ಸ್ವಾತಂತ್ಯೋತ್ಸವದ ನಿಮಿತ್ತ ಈ ಬಾರಿ ಆ.14ರಂದು ಕಾಲೇಜು ವಿದ್ಯಾರ್ಥಿಗಳಿಗಾಗಿ ‘ಸ್ವಾತಂತ್ರ್ಯೋತ್ಸವ ಪದಬಂಧ ಸ್ಪರ್ಧೆ’ಗೆ ವಿವಿಧ ಕಾಲೇಜು ವಿದ್ಯಾರ್ಥಿಗಳಿಂದ ವ್ಯಾಪಕ ಸ್ಪಂದನೆ ವ್ಯಕ್ತವಾಯಿತು. ಸ್ಪರ್ಧೆ ವಿಜೇತ ಹತ್ತು ವಿದ್ಯಾರ್ಥಿಗಳಿಗೆ ಗಣ್ಯರು ತಲಾ ಒಂದು ಸಾವಿರ ನಗದು ಹಾಗೂ ಪ್ರಮಾಣ ಪತ್ರ ವಿತರಿಸಿದರು.

ಸೋಮವಾರ ಬೆಳಗ್ಗೆ ಗಂಟೆಗೆ ಸ್ಪರ್ಧೆ ನಿಗದಿಪಡಿಸಿದ್ದರೂ, ನೂರಾರು ವಿದ್ಯಾರ್ಥಿಗಳು ಬೆಳಗ್ಗೆ 10ಕ್ಕೆ ಸಂಗೊಳ್ಳಿ ರಾಯಣ್ಣ ಗಟಕ ಮಹಾವಿದ್ಯಾಲಯದಲ್ಲಿ ಸೇರಿದ್ದರು. ಅರ್ಧ ಗಂಟೆಯ ಪದಬಂಧ ಸ್ಪರ್ಧೆಯಲ್ಲಿ ಒಟ್ಟು 230 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸ್ಪರ್ಧಿಸಿದ್ದರು.

ಪದಬಂಧದ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಿದ, ಕನ್ನಡ ಭಾಷೆಯ ಸಂಪನ್ಮೂಲ ಶಿಕ್ಷಕರಾದ ಮಹೇಶ ಮುಗಳಿ, ಅಶ್ವಿನಿ ಕಡಬಿ, ಜಯಶ್ರೀ ಗುರವ ಹಾಗೂ ಶೈಲಜಾ ಅವರು ತೀರ್ಪುಗಾರರಾಗಿ ವಿಜೇತ ಹತ್ತು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದರು.

ಕನ್ನಡ ಭಾಷೆಯ ಸಂಪನ್ಮೂಲ ಶಿಕ್ಷಕರು ಸ್ಪರ್ಧೆಯ ಮೌಲ್ಯಮಾಪನ ಮಾಡಿದರು.
ಕನ್ನಡ ಭಾಷೆಯ ಸಂಪನ್ಮೂಲ ಶಿಕ್ಷಕರು ಸ್ಪರ್ಧೆಯ ಮೌಲ್ಯಮಾಪನ ಮಾಡಿದರು.

ಪ್ರಶಸ್ತಿ ವಿಜೇತರು
ಹರ್ಷಾಲಿ ಮಹಾದೇವ ಹೋಗಾಡೆ, ಲಕ್ಷ್ಮೀ ಪರಸನ್ನವರ, ಅಕ್ಷತಾ ಬಡಿಗೇರ, ಸೋನಿ ಹಂಚಿನಾಳ, ಸಾವಿಯಾ ಹವಾಲ್ದಾರ್, ಸ್ವಾತಿ ಗಡಕಲಿ, ರೂಪಾ ನರಗುಂದ, ರೇಣುಕಾ ಕೋಳಿಕೊಪ್ಪ, ರೇಖಾ ಕರೇಗಾರ, ನೇತ್ರಾವತಿ ಪತ್ತಾರ. 

ಸ್ವಾತಂತ್ರ್ಯೋತ್ಸವ ಪದಬಂಧ ಸ್ಪರ್ಧೆ ವಿಜೇತರಿಗೆ ಸೋಮವಾರ ಬಹುಮಾನ ವಿತರಿಸಲಾಯಿತು. ಪಾಲಿಕೆ ಸದಸ್ಯ ಹಣಮಂತ ಕೊಂಗಾಲಿ, ಪ್ರಾಚಾರ್ಯ ಡಾ.ಶಂಕರ ತೇರದಾಳ, ಡಾ.ಅರ್ಜುನ ಜಂಬಗಿ, ಅಭಿಜಿತ್ ನಂದಿ, ಮಹೇಶ ಮುಗಳಿ, ಅಶ್ವಿನಿ ಕಡಬಿ, ಜಯಶ್ರೀ ಗುರವ ಹಾಗೂ ಶೈಲಜಾ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net