ಇಬ್ಬರು ಟಾಪ್​ ನಟರ ಸಿನಿಮಾಗೆ ಪ್ರಿಯಾಂಕಾ ಮೋಹನ್ ನಾಯಕಿ​!

Untitled design (37)
Published on

ತಮಿಳುನಾಡು: ತಮಿಳು ಮತ್ತು ತೆಲುಗು ಚಿತ್ರರಂಗದ ಯುವ ನಟಿ ಪ್ರಿಯಾಂಕಾ ಮೋಹನ್ ಮುಂದಿನ ಸಿನಿಮಾಗಳ ಬಗ್ಗೆ ಮಾಹಿತಿ ತಿಳಿಯಲು ಕಾತರದಿಂದ ಕಾಯುತ್ತಿದ್ದ ಅವರ ಅಭಿಮಾನಿಗಳಿಗೆ ಇದೀಗ ಸಿಹಿ ಸುದ್ದಿಯೊಂದು ಲಭಿಸಿದೆ.

ಪ್ರಸ್ತುತ ಟಾಲಿವುಡ್​ನ ಪವರ್​ ಸ್ಟಾರ್​ ಪವನ್ ಕಲ್ಯಾಣ್ ಅವರ ಮುಂಬರುವ ಆಕ್ಷನ್-ಥ್ರಿಲ್ಲರ್ ಜಾನರ್​​ನ 'ದೆ ಕಾಲ್ ಹಿಮ್ ಓಜಿ' ಚಿತ್ರದಲ್ಲಿ ಪ್ರಿಯಾಂಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಮಧ್ಯೆ ಮತ್ತೊಬ್ಬ ಸ್ಟಾರ್​ ನಟನ ಚಿತ್ರಕ್ಕೆ ಪ್ರಿಯಾಂಕಾ ನಟಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ತಮಿಳು ಚಿತ್ರರಂಗದ ವಲಯಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ.

ಇತ್ತೀಚಿಗೆ ಕೇಳಿಬಂದ ಮಾಹಿತಿ ಪ್ರಕಾರ, ಪ್ರಿಯಾಂಕಾ ಮೋಹನ್​ ಮತ್ತೊಂದು ಬಿಗ್​ ಪ್ರಾಜೆಕ್ಟ್​ ಪಡೆದುಕೊಂಡಿದ್ದು, ದಳಪತಿ ವಿಜಯ್ ನಟಿಸಲಿರುವ ಮುಂದಿನ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಇಬ್ಬರು ಹೀರೋಯಿನ್​ ಇದ್ದು, ಅವರಲ್ಲಿ ಪ್ರಿಯಾಂಕಾ ಕೂಡ ಒಬ್ಬರು ಎಂದು ಹೇಳಲಾಗಿದೆ. ಶೀಘ್ರವೇ ಚಿತ್ರತಂಡ ಈ ಬಗ್ಗೆ ಅಧಿಕೃತ ಮಾಹಿತಿ ಪ್ರಕಟಿಸಲಿದೆ.

ವೆಂಕಟ್ ಪ್ರಭು ನಿರ್ದೇಶನದ ದಳಪತಿ ವಿಜಯ್​ ಅವರ 68ನೇ ಚಿತ್ರದಲ್ಲಿ ಪ್ರಥಮ ನಾಯಕಿಯಾಗಿ ನಟಿ ಜ್ಯೋತಿಕಾ ಕಾಣಸಿಕೊಳ್ಳಲಿದ್ದಾರೆ ಎಂದು ಈ ಹಿಂದೆಯೇ ತಿಳಿಸಲಾಗಿತ್ತು. ಇದೀಗ ಪ್ರಿಯಾಂಕಾ ಎರಡನೇ ಹೀರೋಯಿನ್​ ಎಂದು ಹೇಳಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net