

ಪಾಟ್ನಾ: ಚುನಾವಣಾ ಭಾಷಣಗಳಲ್ಲಿ ಕಟ್ಟಾ ಎಂಬ ಪದ ಬಳಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ತಮ್ಮ ಹುದ್ದೆಯ ಘನತೆಯನ್ನು ಕಳೆಯುತ್ತಿದ್ದಾರೆ ಎಂದು ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ( Priyanka Gandhi) ಶನಿವಾರ (ನ 8) ಆರೋಪಿಸಿದ್ದಾರೆ ಎಂದು ವರದಿಯಾಗಿದೆ.
ಬಿಹಾರದ ಕತಿಹಾರ್ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಿಯಾಂಕಾ, ಕಾಂಗ್ರೆಸ್ ಮಹಾತ್ಮಾ ಗಾಂಧಿಯವರು ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟದಂತೆಯೇ ಇಂದು ನಾವು ಹೋರಾಟ ನಡೆಸುತ್ತಿದ್ದೇವೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಜನರನ್ನು ಹತ್ತಿಕ್ಕುವ ಮೂಲಕ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದೆ, ಒಂದು ಕಡೆ ಅಹಿಂಸೆಯ ಸಂಕೇತವಾದ ವಂದೇ ಮಾತರಂ ಗೀತೆಯನ್ನು ಹೊಗಳುವ ಪ್ರಧಾನಿ ಇತ್ತ ದೇಶೀಯ ನಿರ್ಮಿತ ಪಿಸ್ತೂಲ್ ಕಟ್ಟಾವನ್ನು ಉಲ್ಲೇಖಿಸಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಮತ್ತು ಮಹಾಘಟಬಂಧನ್ ನಡೆಸುತ್ತಿರುವ ಹೋರಾಟ ಕೇವಲ ರಾಜಕೀಯಕ್ಕೆ ಸೀಮಿತವಾಗಿಲ್ಲ, ಇದು ನಾಗರಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಹೋರಾಟವಾಗಿದೆ, ಮತದಾನದ ಹಕ್ಕು ಕೂಡ ಸಧ್ಯ ಅಪಾಯದಲ್ಲಿದೆ, ಯುವಜನರಿಗೆ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿರುವ ಸರ್ಕಾರ, ಸಾರ್ವಜನಿಕ ವಲಯದ ಉದ್ಯಮಗಳನ್ನು ಇಬ್ಬರು ಕಾರ್ಪೊರೇಟ್ ಸ್ನೇಹಿತರಿಗೆ ವರ್ಗಾಯಿಸುತ್ತಿದೆ. ಚುನಾವಣೆ ಸಮಯದಲ್ಲಿ ಮಹಿಳೆಯರಿಗೆ 10,000 ರೂ. ಲಂಚ ನೀಡಿ ಮತಗಳನ್ನು ಪಡೆಯಬಹುದು ಎಂದು ಬಿಜೆಪಿ ಭಾವಿಸಿದೆ ಎಂದು ಇದೇ ವೇಳೆ ಆರೋಪಿಸಿದರು.
ಬಿಜೆಪಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದು, ಮಹಾತ್ಮ ಗಾಂಧಿ ಹೋರಾಡಿದ ಹಕ್ಕುಗಳು ಅಪಾಯದಲ್ಲಿವೆ, ಇದರಲ್ಲಿ ಅತ್ಯಂತ ಮುಖ್ಯವಾದ ಮತದಾನದ ಹಕ್ಕು ಕೂಡ ಸೇರಿದೆ, ಈ ಹಿಂದೆ ಸಂವಿಧಾನವನ್ನು ಬದಲಾಯಿಸುವ ಆಲೋಚನೆಯಲ್ಲಿದ್ದ ಬಿಜೆಪಿ, ಇದಕ್ಕಾಗಿ ಕೈಲಾದ ಪ್ರಯತ್ನಗಳನ್ನು ಮಾಡಿದೆ ಎಂದರು.
ವಿಪಕ್ಷ ನಾಯಕರುಗಳು ತಮ್ಮ ಮಕ್ಕಳನ್ನು ಮುಖ್ಯಮಂತ್ರಿ, ಮಂತ್ರಿಗಳು, ಸಂಸದರು ಮತ್ತು ಶಾಸಕರನ್ನಾಗಿ ಮಾಡಲು ಇಚ್ಛೆ ಪಡುತ್ತಾರೆ, ಇತ್ತ ನಿಮ್ಮ ಮಕ್ಕಳಿಗೆ ಗೂಂಡಾಗಳನ್ನು ಮಾಡಲು ಬಯಸುತ್ತಾರೆ. ಬಿಹಾರ ಇದನ್ನು ಒಪ್ಪಿಕೊಳ್ಳುವುದಿಲ್ಲ. ರಾಜ್ಯದಲ್ಲಿ ಮತ್ತೆ ಪಿಸ್ತೂಲುಗಳು, ಕ್ರೌರ್ಯ, ಭ್ರಷ್ಟಾಚಾರ ಮತ್ತು ದ್ವೇಷದ ಆಳ್ವಿಕೆ ನಡೆಯದಂತೆ ನೋಡಿಕೊಳ್ಳುತ್ತೇವೆ ಎಂಬ ಭರವಸೆ ನೀಡಿದರು.
ಆರ್ಜೆಡಿಯ ಪ್ರಚಾರ ಗೀತೆಗಳು ಮತ್ತು ಘೋಷಣೆಗಳನ್ನು ಕೇಳಿದರೆ ಜನ ನಡುಗುತ್ತಾರೆ. ಬಿಹಾರದ ಮಕ್ಕಳಿಗಾಗಿ ಆರ್ಜೆಡಿಯ ಕಲ್ಪನೆ ಏನು ಎನ್ನುವುದು ಆ ಪಕ್ಷದ ನಾಯಕರ ಚುನಾವಣಾ ಪ್ರಚಾರಂದಿದಲೇ ಸ್ಪಷ್ಟವಾಗುತ್ತಿದೆ. ಆರ್ಜೆಡಿ ಅಭ್ಯರ್ಥಿಯ ಸಮ್ಮುಖದಲ್ಲಿ ಚುನಾವಣಾ ಪ್ರಚಾರದ ವೇದಿಕೆಯ ಮೇಲೆ 10 ವರ್ಷದ ಬಾಲಕನೊಬ್ಬ ಪಿಸ್ತೂಲುಗಳು ಮತ್ತು ರಂಗದಾರಿ ಬಗ್ಗೆ ಮಾತನಾಡುತ್ತಿರುವ ವಿಡಿಯೋವನ್ನು ಮೋದಿ ಈ ಸಂದರ್ಭದಲ್ಲಿ ಉಲ್ಲೇಖಿಸಿದರು. ಬಿಹಾರಕ್ಕೆ ಈಗ ಬೇಕಾಗಿರುವುದು ನವೋದ್ಯಮಗಳ ಕನಸುಗಾರರು ಎಂದ ಮೋದಿ, "ನಯಿ ಚಾಹಿಯೇ ಕಟ್ಟಾ ಸರ್ಕಾರ, ಫಿರ್ ಏಕ್ ಬಾರ್ ಎನ್ಡಿಎ ಸರ್ಕಾರ್ (ನಮಗೆ ಬಂದೂಕು ಹಿಡಿದ ಸರ್ಕಾರ ಬೇಡ, ಮತ್ತೊಮ್ಮೆ ಎನ್ಡಿಎ ಸರ್ಕಾರ) ಎಂಬ ಹೊಸ ಘೋಷಣೆಯನ್ನು ಈ ವೇಳೆ ಪರಿಚಯಿಸಿದರು.
ಜಂಗಲ್ ರಾಜ್ ಎಂದರೆ ಕಟ್ಟಾ, ಕ್ರೂರ್ತ, ಕಟುಟ, ಕುಸಂಸ್ಕರ್ ಮತ್ತು ಭ್ರಷ್ಟಾಚಾರ. ವಿಪಕ್ಷದ ನಾಯಕರು ಕೆಟ್ಟ ಮೌಲ್ಯಗಳನ್ನು ಹೊಂದಿದ್ದು, ಅದೇ ರೀತಿಯ ಆಡಳಿತ ನೀಡಬೇಕು ಎಂಬ ಆಲೋಚನೆಯಲ್ಲಿದ್ದಾರೆ, ಈ ಹಿಂದೆ ಜಂಗಲ್ ರಾಜ್ ಆಳ್ವಿಕೆ ಬಂದ ತಕ್ಷಣ, ಬಿಹಾರದ ಪತನದ ಯುಗ ಪ್ರಾರಂಭವಾಯಿತು. ಆರ್ಜೆಡಿ ಬಿಹಾರದಲ್ಲಿ ಎಲ್ಲಾ ಅಭಿವೃದ್ಧಿಯನ್ನು ಕೊನೆಗೊಳಿಸಿತು. ಈಗ ಅವರಾಡುವ ಎಲ್ಲ ಅಭಿವೃದ್ಧಿಯ ಮಾತುಗಳು ಹಸಿ ಸುಳ್ಳು ಎಂದರು.(ಏಜೆನ್ಸೀಸ್)