ಇದು ವಿರೋಧ ಪಕ್ಷಗಳನ್ನು ಹತ್ತಿಕ್ಕುವ ತಂತ್ರ: ಕೇಂದ್ರದ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ! Priyanka Gandhi

Priyanka Gandhi
Published on

Priyanka Gandhi: ಛತ್ತೀಸ್​ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್​ ಬಘೇಲ್​(Bhupesh Baghel) ಪುತ್ರ ಚೈತನ್ಯ ಬಘೇಲ್(Chaitanya Baghel)​ರನ್ನು ಇಡಿ ಬಂಧಿಸಿದ ಪ್ರಕರಣಕ್ಕೆ ಸಂಬಧಿಸಿದಂತೆ ಕಾಂಗ್ರೆಸ್​ ಸಂಸದೆ ಪ್ರಿಯಾಂಕಾ ಗಾಂಧಿ(Priyanka Gandhi) ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.

ಈ ವಿಚಾರವಾಗಿ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಸಂಸದೆ ಪ್ರಿಯಾಂಕಾ ಗಾಂಧಿ,'' ಕಳೆದ 11 ವರ್ಷಗಳಲ್ಲಿ, ಇವು ಜನರ ಧ್ವನಿಯನ್ನು ಹತ್ತಿಕ್ಕುವ ಮತ್ತು ವಿರೋಧ ಪಕ್ಷಗಳನ್ನು ದಮನಿಸುವ ತಂತ್ರ ಎಂದು ದೇಶವು ಸ್ಪಷ್ಟವಾಗಿ ಅರ್ಥಮಾಡಿಕೊಂಡಿದೆ. ಅದರೆ, ಇಂತಹ ತಂತ್ರಗಳಿಂದ ಸತ್ಯವನ್ನು ನಿಗ್ರಹಿಸುವುದು ಅಥವಾ ವಿರೋಧ ಪಕ್ಷಗಳನ್ನು ಬೆದರಿಸುವುದು ಅಸಾಧ್ಯ. ಪ್ರತಿಯೊಬ್ಬ ಕಾಂಗ್ರೆಸ್​ ಕಾರ್ಯಕರ್ತನೂ ಬಘೇಲ್​ ಅವರ ಜತೆ ದೃಢವಾಗಿ ನಿಲ್ಲುತ್ತಾರೆ ಎಂದು ಬರೆದುಕೊಂಡಿದ್ದಾರೆ.''

ಅಲ್ಲದೇ, ಕೇಂದ್ರ ಸರ್ಕಾರವು ಛತ್ತೀಸ್​ಗಢದ ಎಲ್ಲಾ ಕಾಡುಗಳನ್ನು ಅದಾನಿ ಗ್ರೂಪ್​(Adani Group)ನ ಗೌತಮ್​ ಅದಾನಿ(Gautam Adani)ಗೆ ಅರ್ಪಿಸಿದೆ ಎಂದು ಆರೋಪಿಸಿದ್ದಾರೆ.

ಇದಕ್ಕೂ ಒಂದು ದಿನ ಮುಂಚೆ ಇಡಿಯು ಛತ್ತೀಸ್​ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್​ ಬಘೇಲ್​ರ ಪುತ್ರನನ್ನು ಚೈತನ್ಯ ಬಾಘೇಲ್​ರನ್ನು ರಾಜ್ಯದಲ್ಲಿ ನಡೆದ ಬಹುಕೋಟಿ ಮದ್ಯ ಹಗರಣದ ತನಿಖೆಗೆ ಸಂಬಂಧಿಸಿದಂತೆ ಬಂಧಿಸಿದ್ದೇವೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್ ​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net