ಸಿ.ಟಿ. ರವಿಗೆ ಟಾಂಗ್​ ಕೊಡೋ ಭರದಲ್ಲಿ ಪ್ರಿಯಾಂಕ ಖರ್ಗೆಯಿಂದ ಮಾಜಿ ಪ್ರಧಾನಿ ವಾಜಪೇಯಿ ಅವಹೇಳನ

Priyanka Kharge
Published on

ಕಲಬುರಗಿ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರಿಗೆ ಟಾಂಗ್​ ಕೊಡುವ ಭರದಲ್ಲಿ ಕಾಂಗ್ರೆಸ್​ ಶಾಸಕ ಪ್ರಿಯಾಂಕ ಖರ್ಗೆ ಅವರು ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ನೆಹರು ಅವರು ಹುಕ್ಕಾ ಬಾರ್ ಸೇವಿಸುತ್ತಿದ್ದರು ಎಂಬ ಸಿಟಿ ರವಿ ಹೇಳಿಕೆಗೆ ಕಲಬುರಗಿಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ ಖರ್ಗೆ ವಾಜಪೇಯಿವರು ಹೇವಿ ಡ್ರಿಂಕರ್ ಅಂತೆ. ಸಂಜೆಗೆ ಎರಡು ಪೇಗ್ ಡ್ರಿಂಕ್ ಬೇಕಾಗಿತ್ತು ಅಂತೆ. ಹಾಗಂತ ಎಲ್ಲಾ ಬಾರ್​ಗಳಿಗೂ ವಾಜಪೇಯಿ ಬಾರ್ ಅಂತಾ ಹೆಸರಿಡ್ತೀರಾ ಎಂದು ಕೇಳುವ ಮೂಲಕ ದೇಶದ ಮಾಜಿ ಪ್ರಧಾನಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.

ಬಿಜೆಪಿಯವರು ಎಲ್ಲರು ಸಾಚಾಗಳೇ ಅಂತಾ ಭಾವಿಸುತ್ತಿದ್ದಾರೆ. ಸಿಡಿ ಪ್ರಕರಣದಿಂದ ದೇಶದಲ್ಲಿ ಮರ್ಯಾದೆ ಹೋಗಿದೆ. ನೆಹರು ಬಗ್ಗೆ ರವಿ ಮಾತಾಡೋದ್ರಿಂದ ನೆಹರು ಘನತೆ ಏನು ಕಡಿಮೆ ಆಗೋದಿಲ್ಲ. ನಾನು ವಾಜಪೇಯಿ ಅವರ ಬಗ್ಗೆ ಮಾತಾಡೋದ್ರಿಂದ ವಾಜಪೇಯಿ ಘನತೆ ಕಡಿಮೆ ಆಗಲ್ಲ ಎಂದರು.

ರಾಜ್ಯದಕ್ಕೆ ಸಾವರ್ಕರ್ ಕೊಡುಗೆ ಏನಿದೆ ಅಂತಾ ಪ್ಲೈ ಓವರ್​ಗೆ ಅವರು ಹೆಸರು ಇಡ್ತಾರೆ? ಗೋಡ್ಸೆಯನ್ನ ನಂಬುತ್ತಾರೆ, ಆದರೆ ಗಾಂಧಿಯನ್ನ ನಂಬೋದಿಲ್ಲ. ಇತಿಹಾಸ ಗೊತ್ತಿಲ್ಲದವರು ಮಂತ್ರಿಯಾದ್ರೆ ಹಿಂಗೆ ಮಾತಾಡೋದು. ಅವಿವೇಕಿಗಳು ಇವರು, ಅವಿವೇಕಿತನದ ಪರಮಾವಧಿ ಇದು ಎಂದು ಪ್ರಿಯಾಂಕ್ ಖರ್ಗೆ ಸಿಟಿ ರವಿ ವಿರುದ್ದ ವಾಗ್ದಾಳಿ ನಡೆಸಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net