ಅಭಿವೃದ್ಧಿ ವಿಚಾರದಲ್ಲಿ ಖಾಸಗಿ ಅಸ್ತಿ ಹಕ್ಕುಗಳಿಗೆ ಧಕ್ಕೆ

kurki press meet
ಕೋಲಾರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಎಪಿಎಂಸಿ ಮಾಜಿ ಅಧ್ಯೆ ಕುರ್ಕಿ ರಾಜೇಶ್ವರಿ ಮಾತನಾಡಿದರು. ಬ್ತುನ್ನೀಸಾ ಇದ್ದರು.
Published on

ಕೋಲಾರ: ವಿವಿಧ ಇಲಾಖಾಧಿಕಾರಿಗಳು ಖಾಸಗಿ ಅಸ್ತಿ ಹಕ್ಕುಗಳಿಗೆ ಧಕ್ಕೆಯುಂಟು ಮಾಡುವ ನಿಟ್ಟಿನಲ್ಲಿ ರಸ್ತೆ ಅಭಿವೃದ್ಧಿ ಕೈಗೆತ್ತಿಕೊಂಡಿದ್ದು, ಬಡವರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಕುರ್ಕಿ ರಾಜೇಶ್ವರಿ ಆರೋಪಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ಅಸ್ತಿಯನ್ನು ಸ್ವಾಧಿನಪಡಿಸಿಕೊಳ್ಳುವ ಮೊದಲು ನೋಟಿಸ್​ ನೀಡಬೇಕು. ಅಭಿಪ್ರಾಯ ಸಂಗ್ರಹಿಸಿ ಕ್ರಮಕೈಗೊಳ್ಳಬೇಕಿತ್ತು. ಆದರೆ, ಇದ್ಯಾವುದನ್ನು ಮಾಡದೆ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ದೂರಿದರು.

ಅಭಿವೃದ್ಧಿ ವಿಚಾರದಲ್ಲಿ ನಮ್ಮ ವಿರೋಧವಿಲ್ಲ, ಆದರೆ ಅದು ಕಾನೂನು ಪ್ರಕಾರ ಆಗಬೇಕು, ಸಮಾಜದಲ್ಲಿ ಉಳ್ಳವರಿಗೊಂದು ನ್ಯಾಯ, ಬಡವರಿಗೊಂಡು ನ್ಯಾಯ ಇರಬಾರದು. ನರಸಾಪುರ&ಕೋಲಾರ ರಸ್ತೆ ಅಭಿವೃದ್ಧಿಯನ್ನು ಲೋಕೋಪಯೋಗಿ ಇಲಾಖೆಯಿಂದ ಕೈಗೆತ್ತಿಕೊಂಡಿದ್ದು, ರಸ್ತೆಯ ಮಧ್ಯಭಾಗದಿಂದ ಅಳತೆ ಮಾಡುವುದು ಬಿಟ್ಟು, ಮನಸ್ಸೊ ಇಚ್ಛೆ ಮಾಡಿದ್ದಾರೆ ಎಂದು ಕಿಡಿ ಕಾರಿದರು.

ರಸ್ತೆಯ ಉತ್ತರ ಭಾಗದಲ್ಲಿ ಸರ್ಕಾರಿ ಜಾಗವಿದೆ, ದಣ ಭಾಗದಲ್ಲಿ ಖಾಸಗಿ ಜಮೀನುಗಳು ಇವೆ, ರಸ್ತೆಯ ಮಧ್ಯ ಭಾಗದಿಂದ ಅಳತೆ ಮಾಡದೆ ಅವೈಜ್ಞಾನಿಕವಾಗಿ ದಣ ಭಾಗಕ್ಕೆ ಹೆಚ್ಚುವರಿ ಅಳತೆ ತೆಗೆದುಕೊಂಡಿದ್ದಾರೆ. ಇದರಿಂದ ಖಾಸಗಿ ಅಸ್ತಿಗಳ ಸಂಬಂಧ ದಾಖಲೆಗಳನ್ನು ತಿರುಚಿದ್ದು ಮಾಲೀಕರಿಗೆ ಮೋಸ ಮಾಡಲು ಹೊರಟ್ಟಿದ್ದಾರೆ ಎಂದರು.

ಸುಮಾರು 15ಕ್ಕೂ ಹೆಚ್ಚು ಮಂದಿ ಅಸ್ತಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ, ಆ ಪೈಕಿ ಕೆಲವರ ಅಸ್ತಿಗಳನ್ನು ತೆರವುಗೊಳಿಸದಂತೆ ನ್ಯಾಯಾಲಯದ ತಡೆಯಾಜ್ಞೆಯು ಇದೆ. ಗ್ರಾಮ ಪಂಚಾಯಿತಿ ಪಿಡಿಒ ಮುನಿರಾಜು ಹಾಗೂ ತಾಪಂ ಇಒ ಮಂಜುನಾಥ್​ ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಖಾತೆಗಳನ್ನು ರದ್ದುಗೊಳಿಸಿದ್ದಾರೆ. ಯಾರನ್ನು ಮೆಚ್ಚಿಸಲು ಈ ಕೆಲಸ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಈ ಬಗ್ಗೆ ಶಾಸಕ ಕೊತ್ತೂರು ಮಂಜುನಾಥ್​, ಎಂಎಲ್ಸಿ ಅನಿಲ್​ ಕುಮಾರ್​ ಅವರ ಗಮನಕ್ಕೂ ತರಲಾಗಿದೆ. ಆದರೆ ಇದುವರೆಗೂ ಯಾವುದೇ ರೀತಿ ಪ್ರಯೋಜನ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಸ್ತೆ ವಿಸ್ತರಣೆ ವಿಚಾರದಲ್ಲಿ ತಾರತಮ್ಯ ಮಾಡಿರುವ ಲೋಕೋಪಯೋಗಿ ಇಲಾಖೆ ಎಇಇ ಮಂಜುನಾಥ್​, ಪಿಡಿಒ ಮುನಿರಾಜು, ಇಒ ಮಂಜುನಾಥ್​ ಅವರನ್ನು ಜಿಲ್ಲಾಧಿಕಾರಿ ಅವರು ಅಮಾನತ್ತುಪಡಿಸಿ, ಬಡವರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಸದ್ಯಕ್ಕೆ ರಾಜಕೀಯದಿಂದ ತಟಸ್ಥ

2024ರ ಚುನಾವಣೆಯ ನಂತರ ರಾಜಕೀಯದಿಂದ ಸದ್ಯಕ್ಕೆ ತಟಸ್ಥವಾಗಿದ್ದೇನೆ, ಸ್ಥಳಿಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧೆ ಮಾಡುವ ಅಸ್ತಿಯಿಲ್ಲ, ಕಳೆದ ಚುನಾವಣೆಯಲ್ಲೇ ಟಿಕೆಟ್​ಗಾಗಿ ವರಿಷ್ಠರ ಬಳಿ ಬೇಡಿಕೆ ಇಟ್ಟೆದೆ, ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕಿದೆ ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳಲಾಗುವುದು ಎಂದು ರಾಜೇಶ್ವರಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net