ಬೆಂಗಳೂರು:ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ (ಒಎಂಎಸ್ಎಸ್) ಇ-ಹರಾಜು ಮೂಲಕ ಅಕ್ಕಿ, ಗೋಧಿ ಖರೀದಿಸಲು ಭಾರತೀಯ ಆಹಾರ ನಿಗಮವು( ಎಫ್ಸಿಐ) ವ್ಯಾಪಾರಿಗಳು, ತಯಾರಿಕರು, ಚಿಲ್ಲರೆ ವ್ಯಾಪಾರಿಗಳು ಸೇರಿ ಖಾಸಗಿಯವರಿಗೆ ಮತ್ತೆ ಅವಕಾಶ ಮಾಡಿಕೊಟ್ಟಿದೆ.
ಸುದ್ದಿಗೋಷ್ಠಿಯಲ್ಲಿ ಎಫ್ಸಿಐ ಕರ್ನಾಟಕ ಶಾಖೆ ಪ್ರಧಾನ ವ್ಯವಸ್ಥಾಪಕ ಬಿ.ಒ.ಮಹೇಶ್ವರಪ್ಪ ಮಾತನಾಡಿ, ಸಣ್ಣ, ಮಧ್ಯಮ ಖರೀದಿದಾರರು ಸೇರಿ ಆಸಕ್ತಿ ಇರುವವರು ಎಂಜಕ್ಷನಲ್ ಪೋರ್ಟಲ್ನಲ್ಲಿ ನೋಂದಾಯಿಸಿಕೊಂಡು ಪ್ರತಿ ಶುಕ್ರವಾರ ನಡೆಯುವ ಹಾಗೂ ಪ್ರತಿ ಬುಧವಾರ ನಡೆಯುವ ಬಿಡ್ಡಿಂಗ್ನಲ್ಲಿ ಭಾಗಿಯಾಗಬಹುದು. ಒಬ್ಬರು ಕನಿಷ್ಠ 10 ಕ್ವಿಂಟಾಲ್ (1 ಟನ್), ಗರಿಷ್ಠ 20 ಸಾವಿರ ಕ್ವಿಂಟಾಲ್ ( 200 ಟನ್)ವರೆಗೆ ಖರೀದಿಸುವ ಅವಕಾಶ ಸಿಗಲಿದೆ. ಪ್ರತಿ ಕೆಜಿ ಅಕ್ಕಿಗೆ 28 ರೂ.ನಂತೆ ಮಾರಾಟ ಮಾಡಲಾಗುವುದು. ಸಾಗಾಣಿಕೆ ವೆಚ್ಚ ಪ್ರತ್ಯೇಕವಾಗಿ ಇರಲಿದೆ ಎಂದರು. ನಿಗಮ ವ್ಯಾಪ್ತಿಯ ರಾಜ್ಯದ ಗೋದಾಮುಗಳಲ್ಲಿ 7.02 ಲಕ್ಷ ಮೆಟ್ರಿಕ್ ಟನ್ ಅಕ್ಕಿ, 1.23 ಲಕ್ಷ ಮೆಟ್ರಿಕ್ ಟನ್ ಗೋಧಿ ಸೇರಿ ಒಟ್ಟು 8.25 ಲಕ್ಷ ಮೆಟ್ರಿನ್ ಆಹಾರ ಪದಾರ್ಥ ದಾಸ್ತಾನು ಇದೆ ಎಂದರು.
ಪ್ರತಿ ಕ್ವಿಂಟಾಲ್ ಅಕ್ಕಿಗೆ 2,800 ರೂ.ನಿಗದಿಪಡಿಸಲಾಗಿದೆ. ಬಲವರ್ಧಿತ ಅಕ್ಕಿ ಕ್ವಿಂಟಾಲ್ಗೆ 2,932 ರೂ.ನಿಂದ ಆರಂಭವಾಗುವ ದರ, 3,287 ರೂ.ವರೆಗೆ ಇರಲಿದೆ. ಪಂಜಾಬ್ನಿಂದ ಬರುವ ಅಕ್ಕಿಯು ಸ್ವಲ್ಪ ದುಬಾರಿ ಇರಲಿದೆ. ಆಂಧ್ರಪ್ರದೇಶ, ತೆಲಂಗಾಣ ಬರುವ ಅಕ್ಕಿಯು ದರ ಕಡಿಮೆ ಇದೆ. ಅದೇರೀತಿ, ಬಲವರ್ಧಿತವಲ್ಲದ ಅಕ್ಕಿ ಕ್ವಿಂಟಾಲ್ಗೆ 2,859 ರೂ.ನಿಂದ ಆರಂಭವಾಗುವ ದರವು 3,214 ರೂ.ವರೆಗೆ ಇರಲಿದೆ. ಮೊದಲ ಬಾರಿ ನಡೆದ ಟೆಂಡರ್ನಲ್ಲಿ 740 ಟನ್ , 2ನೇ ಬಾರಿ ಟೆಂಟರ್ನಲ್ಲಿ 210 ಟನ್ ಸೇರಿ ಒಟ್ಟು 950 ಟನ್ ಅಕ್ಕಿ ಮಾರಾಟವಾಗಿತ್ತು ಎಂದು ಮಹೇಶ್ವರಪ್ಪ ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಭಾರತೀಯ ಆಹಾರ ನಿಗಮದ ಉಪ ಪ್ರಧಾನ ವ್ಯವಸ್ಥಾಪಕರಾದ ಹರೀಶ್, ಕೆ.ಕೆ.ಗೌತಮ್, ಉದಯ್ಬೀರ್ ಸಿಂಗ್, ರಮೇಶ್ ನಾಯ್ಕ್ ಇದ್ದರು.
ಹಣ್ಣು ಮಾರುತ್ತಿದ್ದವರ ಮಗ ಹುಟ್ಟುಹಾಕಿದ್ದು ಅತೀ ದೊಡ್ಡ ಸಂಸ್ಥೆ! ಹೆಸರು, ಹಣವಿದ್ದರೂ ಕಂಡಿದ್ದು ಮಾತ್ರ ದುರಂತ ಅಂತ್ಯ
ಒಬ್ಬ ಬಿಡ್ದಾರರು ಭಾಗವಹಿಲ್ಲ
ಒಎಂಎಸ್ಎಸ್ ಮೂಲಕ ಅಕ್ಕಿ ಖರೀದಿಸುವ ಸಂಬಂಧ ಕೇಂದ್ರ ಸಚಿವರು 2-3 ಬಾರಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದರೂ ಬುಧವಾರ ನಡೆದ ಬಿಡ್ನಲ್ಲಿ ಯಾರೊಬ್ಬರೂ ಭಾಗವಹಿಸಲಿಲ್ಲ.ಮಾರುಕಟ್ಟೆಗಿಂತ ಕಡಿಮೆ ದರದಲ್ಲಿ ಅಕ್ಕಿ ಮಾರಾಟ ಮಾಡಲಾಗುತ್ತಿದೆ. ಆದರೆ, ಯಾವ ಕಾರಣಕ್ಕಾಗಿ ಬಿಡ್ದಾರರು ಭಾಗವಹಿಸಲಿಲ್ಲ ಎಂಬುದರ ಬಗ್ಗೆ ನನಗೆ ತಿಳಿದಿಲ್ಲ ಎಂದು ಎಂದು ಬಿ.ಒ. ಮಹೇಶ್ವರಪ್ಪ ಮಾಹಿತಿ ನೀಡಿದರು. ಪ್ರತಿ ತಿಂಗಳು ರಾಜ್ಯಕ್ಕೆ 2.36 ಲಕ್ಷ ಮೆಟ್ರಿಕ್ ಟನ್ ಅಕ್ಕಿ ನೀಡುವಂತೆ ಬೇಡಿಕೆ ಬಂದಿದೆ. ಈ ಬಾರಿ ಗೋದಾಮುಗಳಲ್ಲಿ ಬೇಡಿಕೆಗಿಂತ ಹೆಚ್ಚು ಗುಣಮಟ್ಟ ಅಕ್ಕಿಯನ್ನು ದಾಸ್ತಾನು ಮಾಡಲಾಗಿದೆ. ಕಳೆದ ವರ್ಷ ಮಳೆ ಕೊರತೆಯಿಂದಾಗಿ ಆಹಾರ ಉತ್ಪಾದನೆ ಕುಸಿತವಾಗಿತ್ತು. ಹಾಗಾಗಿ, ನಿಗದಿತಗಿಂತ ಹೆಚ್ಚು ಪಡಿತರ ದಾಸ್ತಾನು ಇಲ್ಲದಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಗೆ ತೊಂದರೆಯಾಗಬಹುದೆಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರ, ಒಎಂಎಸ್ಎಸ್ ಹಿಂಪಡೆದಿತ್ತು. ಆದರೆ, ಈ ಬಾರಿ ಅಂತಹ ಪರಿಸ್ಥಿತಿ ಬಂದಿಲ್ಲ. ನಿರೀಕ್ಷೆ ಮಾಡಿದ್ದಗಿಂತ ಹೆಚ್ಚು ಅಕ್ಕಿ, ಗೋಧಿ ಉತ್ಪಾದನೆಯಾಗಿದೆ. ದಾಸ್ತಾನು ಸಹ ಚೆನ್ನಾಗಿದೆ. ಆದ್ದರಿಂದ, ರಾಜ್ಯದ ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡುವಂತೆ ಕೇಂದ್ರದಿಂದ ನಮಗೆ ಸೂಚನೆ ಬಂದಿದೆ ಎಂದು ಹೇಳಿದರು.
595 ಲಕ್ಷ ಮೆಟ್ರಿಕ್ ಟನ್ ದಾಸ್ತಾನು
ದೇಶಾದ್ಯಂತ 327 ಲಕ್ಷ ಮೆಟ್ರಿಕ್ ಟನ್ ರಾಗಿ, 268 ಲಕ್ಷ ಮೆಟ್ರಿಕ್ ಟನ್ ಗೋಧಿ ಸೇರಿ ಒಟ್ಟು 595 ಲಕ್ಷ ಮೆಟ್ರಿಕ್ ಆಹಾರ ಪದಾರ್ಥ ದಾಸ್ತಾನು ಇದೆ. ನಿಗಮ ವ್ಯಾಪ್ತಿಯ ರಾಜ್ಯದ ಗೋ-ದಾ-ಮು-ಗ-ಳಲ್ಲಿ 7.02 ಲಕ್ಷ ಮೆಟ್ರಿಕ್ ಟನ್ ಅಕ್ಕಿ, 1.23 ಲಕ್ಷ ಮೆಟ್ರಿಕ್ ಟನ್ ಗೋಧಿ ಸೇರಿ ಒಟ್ಟು 8.25 ಲಕ್ಷ ಮೆಟ್ರಿನ್ ಆಹಾರ ಪದಾರ್ಥ ದಾಸ್ತಾನು ಇದೆ. ಬಲವರ್ಧಿತ ಅಕ್ಕಿಗೆ ಪ್ರತಿ ಕ್ವಿಂಟಾಲ್ಗೆ 73 ರೂ.ಮೀಸಲು ಬೆಲೆ ಸೇರಿಸಲಾಗಿದೆ. ಈ ಬಾರಿ ಒಎಂಎಸ್ಎಸ್ಡಿ ಹರಾಜಿನಲ್ಲಿ ಏಕಕಾಲದಲ್ಲಿ ಗರಿಷ್ಠ 2 ಸಾವಿರ ಟನ್ಗಳಷ್ಟು ಅಕ್ಕಿ,ಗೋಧಿ ಹರಾಜಿನಲ್ಲಿ ಖರೀದಿಸಬಹುದು. ಇದ-ರಿಂದ ಸಣ್ಣ, ಮಧ್ಯಮ ಖರೀದಿದಾರರು ಹೆಚ್ಚಿ-ನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಹಾಗೂ ಈ ಯೋಜನೆಯು ಹೆಚ್ಚು ಜನರನ್ನು ತಲುಪಲು ಸಾಧ್ಯವಾಗಲಿದೆ ಎಂದು ಪ್ರಧಾನ ವ್ಯವಸ್ಥಾಪಕರು ಮಾಹಿತಿ ನೀಡಿದರು.