

ಕೊಚ್ಚಿ: ಮೋಹನ್ ಲಾಲ್ ಅಭಿನಯದ 'ಲೂಸಿಫರ್' ಮೂಲಕ ನಿರ್ದೇಶಕರಾದವರು ಮಲಯಾಳಂ ನಟ ಮೋಹನ್ ಲಾಲ್. ಆ ಚಿತ್ರದ ನಂತರ ನಟನೆಯಲ್ಲೇ ಬ್ಯುಸಿಯಾಗಿರುವ ಅವರಿಗೆ, ಹೊಸ ಚಿತ್ರದ ನಿರ್ದೇಶನ ಯಾವಾಗ ಎಂದು ಅವರ ಅಭಿಮಾನಿಗಳು ಕೇಳುತ್ತಲೇ ಇದ್ದರು. ಈ ಪ್ರಶ್ನೆ ಎದುರಾದಾಗಲೆಲ್ಲ ಪೃಥ್ವಿರಾಜ್, 'ಹೇಳ್ತೀನಿ ತಡೀರಪ್ಪಾ ...' ಅಂತ ಉತ್ತರ ಕೊಡುತ್ತಲೇ ಇದ್ದರು. ಈಗ ಪೃಥ್ವಿರಾಜ್, ಕೊನೆಗೂ ನಿರ್ದೇಶನಕ್ಕೆ ಮರಳುವ ಹಿಂಟ್ ಕೊಟ್ಟಿದ್ದಾರೆ.
ಈ ಕುರಿತು ಪೃಥ್ವಿರಾಜ್ ಸೋಷಿಯಲ್ ಮೀಡಿಯಾದಲ್ಲೊಂದು ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ನಲ್ಲಿ ರೈಟಿಂಗ್ ಟ್ಯಾಬ್ವೊಂದರ ಫೋಟೋ ಹಂಚಿಕೊಂಡಿರುವ ಅವರು, ಅದು ತಮ್ಮ ಏಳು ವರ್ಷದ ಮಗಳು ಅಲಂಕೃತಾ ಅಲಿಯಾಸ್ ಆಲಿ ಬರೆದ ಕಥೆ ಎಂದು ಹೇಳಿಕೊಂಡಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಕೇಳಿದ ಅದ್ಭುತ ಕಥೆ ಅದಾಗಿದ್ದು, ಅದನ್ನು ತೆರೆಯ ಮೇಲೆ ತರುವ ಆಸೆ ಇದೆ ಎಂದು ಹೇಳಿದ್ದಾರೆ.
ಇಷ್ಟಕ್ಕೂ ಆ ಕಥೆ ಏನು ಎಂಬ ಪ್ರಶ್ನೆ ಬರುವುದು ಸಹಜ. ಅಮೆರಿಕಾದಲ್ಲಿ ಅಪ್ಪ-ಮಗ ಇರುತ್ತಾರೆ. ಆಗ ಎರಡನೇ ವಿಶ್ವಯುದ್ಧ ಶುರುವಾಗುತ್ತದೆ. ಅವರಿಬ್ಬರನ್ನೂ ರೆಫ್ಯೂಜಿ ಕ್ಯಾಂಪ್ಗಳಿಗೆ ಸ್ಥಳಾಂತರಿಸಲಾಗುತ್ತದೆ. ಎರಡು ವರ್ಷಗಳ ನಂತರ ವಾಪಸ್ಸು ಮನೆಗೆ ಹೋಗಿ, ಅಲ್ಲಿ ಸುಖವಾಗಿ ಬದುಕುತ್ತಾರೆ ... ಎಂದು ಅಲಂಕೃತಾ ಬರೆದುಕೊಂಡಿದ್ದು, ಈ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡುವುದಾಗಿ ಪೃಥ್ವಿರಾಜ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಲಾಕ್ಡೌನ್ ಸಂದರ್ಭದಲ್ಲಿ ಈ ತರಹದ ಚಿತ್ರ ಚಿತ್ರೀಕರಣ ಮಾಡುವುದಕ್ಕೆ ಕಷ್ಟವಾಗಿರುವುದರಿಂದ, ಬೇರೆ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ನಿರ್ದೇಶನಕ್ಕೆ ವಾಪಸ್ಸಾಗುವ ಆಸೆ, ಸದ್ಯದಲ್ಲೇ ಈ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ನೀಡುತ್ತೇನೆ' ಎಂದು ಅವರು ಹೇಳಿಕೊಂಡಿದ್ದಾರೆ.
ಸದ್ಯ ಮೋಹನ್ ಲಾಲ್ ನಿರ್ದೇಶನದ 'ಬ್ಯಾರೋಜ್' ಚಿತ್ರದಲ್ಲಿ ಪೃಥ್ವಿರಾಜ್ ನಟಿಸುತ್ತಿದ್ದು, ಮಿಕ್ಕಂತೆ 'ಕುರುತ್ತಿ', 'ಆಡುಜೀವಿತಂ' ಮತ್ತು 'ಕೋಲ್ಡ್ ಕೇಸ್' ಚಿತ್ರಗಳಲ್ಲಿ ಬಿಡುಗಡೆಯಾಗಬೇಕಿವೆ. ಈ ಪೈಕಿ, 'ಕೋಲ್ಡ್ ಕೇಸ್' ಚಿತ್ರವು ಜೂನ್ 30ರಂದು ಅಮೇಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಲಿದೆ.