ಪ್ರಿನ್ಸೆಸ್ ರಸ್ತೆ ಅಧಿಕೃತವಾಗಿ ನಾಮಕರಣಗೊಂಡಿಲ್ಲ : ಮೈಸೂರು ನಗರ ಪಾಲಿಕೆ ಆಯುಕ್ತರ ಸ್ಪಷ್ಟನೆ

Mysuru City Corporation (MCC) Commissioner Ashaad ur Rahman Shariff
Published on

ಮೈಸೂರು: ನಗರ ಪಾಲಿಕೆಯಲ್ಲಿರುವ 1999 ರಿಂದ 2004ರವರೆಗಿನ ಕಡತಗಳ ಪರಿಶೀಲನೆ ನಡೆಸಲಾಗಿದ್ದು, ಕೆಆರ್‌ಎಸ್ ಕಡೆಗೆ ಸಾಗುವ ರಸ್ತೆಗೆ ಯಾವುದೇ ಅಧಿಕೃತ ಹೆಸರು ಇನ್ನೂ ನಾಮಕರಣವಾಗಿಲ್ಲ ಎಂದು ನಗರ ಪಾಲಿಕೆ ಆಯುಕ್ತ ಆಸಾದ್ ಉರ್ ರೆಹಮಾನ್ ಷರೀಫ್ ಹೇಳಿದರು.

ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸದ್ಯಕ್ಕಿರುವ ಮಾಹಿತಿ ಪ್ರಕಾರ ಆ ರಸ್ತೆಗೆ ಯಾವುದೇ ಹೆಸರು ಇಲ್ಲ. 1964 ರಿಂದ 1999ರವರೆಗಿನ ಕಡತಗಳನ್ನೂ ಸಹ ಪರಿಶೀಲನೆ ನಡೆಸಲಾಗುತ್ತಿದ್ದು, ಆ ಪರಿಶೀಲನೆ ಕಾರ್ಯವೂ ಸಹ ಬಹುತೇಕ ಮುಕ್ತಾಯಗೊಂಡಿದೆ. ಈಗ ಪರಿಶೀಲನೆ ಮಾಡಿರುವ ಕಡತಗಳಲ್ಲಿ ಎಲ್ಲಿಯೂ ಕೂಡ ಪ್ರಿನ್ಸೆಸ್ ಹೆಸರು ಪ್ರಸ್ತಾಪ ಆಗಿಲ್ಲ. ಕೆ.ಆರ್.ರಸ್ತೆಗೆ ಅಧಿಕೃತವಾಗಿ ಯಾವ ಹೆಸರು ಇಲ್ಲ. ನಾವು ಮೈಸೂರು ಪಾಲಿಕೆಯ 9 ವಲಯಗಳ ಆಯುಕ್ತರಿಂದ ಮಾಹಿತಿ ಪಡೆದಿದ್ದೇವೆ. ಅವರು ಸಹ ಪ್ರಿನ್ಸೆಸ್ ಹೆಸರು ಅಧಿಕೃತವಾಗಿ ಇಲ್ಲ ಎಂದು ತಿಳಿಸಿದ್ದಾರೆ ಎಂದರು.

ನಮ್ಮ ವ್ಯಾಪ್ತಿಯ ದಾಖಲೆ ಪರಿಶೀಲನೆ ಬಹುತೇಕ ಮುಕ್ತಾಯವಾಗಿದೆ. ಗೆಜೆಟಿಯರ್‌ನಲ್ಲಿ ಆ ಹೆಸರು ಇದಿಯೋ ಇಲ್ಲವೋ ಎಂಬುದು ನನಗೆ ಮಾಹಿತಿ ಇಲ್ಲ. ಆ ದಾಖಲೆ ಪಾಲಿಕೆ ವ್ಯಾಪ್ತಿಗೆ ಬರುವುದಿಲ್ಲ. ಪಾಲಿಕೆಯ ಕೌನ್ಸಿಲ್ ವ್ಯಾಪ್ತಿಯಲ್ಲಿ ಪ್ರಿನ್ಸೆಸ್ ಹೆಸರಂತೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net