

ಕಾಸರಗೋಡು: ಐಸಿಎಆರ್- ಸಿಪಿಸಿಆರ್ಐ ಕಾಸರಗೋಡು ಮತ್ತು ಕಾಯಂಕುಲಂನಲ್ಲಿರುವ ಕೃಷಿ ವಿಜ್ಞಾನ ಕೇಂದ್ರಗಳ ಸಹಯೋಗದೊಂದಿಗೆ ಪ್ರಧಾನ ಮಂತ್ರಿ ಕಿಸಾನ್ ಉತ್ಸವ ದಿವಸ್ ಕಾರ್ಯಕ್ರಮ ಕಾಸರಗೋಡು ಸಿಪಿಸಿಆರ್ಐ ಸಭಾಂಗಣದಲ್ಲಿ ಜರುಗಿತು.
ಕಾಸರಗೋಡಿನ ಸಿಪಿಸಿಆರ್ಐನಲ್ಲಿ ಸಂವಾದ ಕಾರ್ಯಕ್ರಮವನ್ನು ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿ, ಹವಾಮಾನ ಬದಲಾವಣೆಯಿಂದ ಉಂಟಾಗುವ ಸವಾಲುಗಳು, ಆಗಾಗ ಕೃಷಿ ನಷ್ಟಗಳಿಗೆ ಕಾರಣವಾಗುತ್ತಿರುವ ಕಾಲಘಟ್ಟದಲ್ಲಿ ರೈತರನ್ನು ಬೆಂಬಲಿಸುವ ರೀತಿಯಲ್ಲಿ ಕೃಷಿ ತಂತ್ರಜ್ಞಾನಗಳ ಪಾತ್ರ ಮಹತ್ವದ್ದಾಗಿದೆ ಎಂದರು.
ಸಿಪಿಸಿಆರ್ಐ ನಿರ್ದೇಶಕ ಡಾ.ಕೆ.ಬಿ.ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ‘ಆತ್ಮಾ’ ಉಪನಿರ್ದೇಶಕಿ ಸುಮಾ, ಕೆವಿಕೆಯ ಎಸ್ಎಂಎಸ್ನ ಡಾ.ಬೆಂಜಮಿನ್ ಮ್ಯಾಥ್ಯೂ ಅವರು ರೈತರು ಮತ್ತು ವಿದ್ಯಾರ್ಥಿಗಳೊಂದಿಗೆ ‘ಕಾಸರಗೋಡು ಜಿಲ್ಲೆಯಲ್ಲಿ ನೈಸರ್ಗಿಕ ಕೃಷಿಯ ವ್ಯಾಪ್ತಿ’ ಕುರಿತು ಸಂವಾದ ನಡೆಸಿದರು. ಜೀವಾಮೃತ, ನೀಮಾಸ್ತ್ರ ಮತ್ತು ಬ್ರಹ್ಮಾಸ್ತ್ರದಂತಹ ಜಮೀನಿನಲ್ಲಿ ನೈಸರ್ಗಿಕ ಕೃಷಿ ಉತ್ಪನ್ನಗಳ ತಯಾರಿಕೆಯ ಪ್ರಾತ್ಯಕ್ಷಿಕೆಯನ್ನು ರೈತರಿಗಾಗಿ ಮಾಡಲಾಯಿತು. ಸಮಾಜ ವಿಜ್ಞಾನ ವಿಭಾಗ ಮುಖ್ಯಸ್ಥ ಡಾ.ಕೆ.ಪೊನ್ನುಸ್ವಾಮಿ ಸ್ವಾಗತಿಸಿದರು. ಕೆವಿಕೆ ಕಾಸರಗೋಡಿನ ಮುಖ್ಯಸ್ಥ ಡಾ.ಟಿ.ಎಸ್.ಮನೋಜ್ಕುಮಾರ್ ವಂದಿಸಿದರು.