

UP: ಟ್ರಾನ್ಸ್‌ಫಾರ್ಮ‌್ರನಲ್ಲಿ ವಿದ್ಯುತ್ ಕಡಿತಗೊಂಡಿದ್ದರಿಂದ ನಾಲ್ವರು ಮಹಿಳೆಯರು ಮೊಬೈಲ್ ( Mobile) ಫೋನ್‌ಗಳ ಟಾರ್ಚ್ ಬೆಳಕಿನಲ್ಲಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ಉತ್ತರ ಪ್ರದೇಶದ ಬಲ್ಲಿಯಾದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಬೇರೂರ್ಬರಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ, ಅದೇ ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಹಿಳೆಯೊಬ್ಬರು ನೆಲದ ಮೇಲೆ ಮಗುವಿಗೆ ಜನ್ಮ ನೀಡುವ ವಿಡಿಯೋ ವೈರಲ್ ಆದ ಕೆಲವೇ ದಿನಗಳಲ್ಲಿ ಈ ಆರೋಪಗಳು ಬಂದಿವೆ.
ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಟ್ರಾನ್ಸ್‌ಫಾರ್ಮರ್ ಸ್ಫೋಟಗೊಂಡ ನಂತರ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಯಿತು. ಆ ವೇಳೆ ಜನರೇಟರ್ ಸಹ ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ವರದಿಯಾಗಿದೆ. ಈ ಘಟನೆಗೆ ಕುರಿತು ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಪ್ರಕರಣದ ಕುರಿತು ವಿಚಾರಣೆಗೆ ಆದೇಶ ನೀಡಲಾಗಿದೆ.
"ನಾನು ಈ ಘಟನೆಯ ಬಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಉಸ್ತುವಾರಿ ಮತ್ತು ಅಧಿಕಾರಿಗಳಿಂದ ತಿಳಿದಿದ್ದೇನೆ, ಆಸ್ಪತ್ರೆಯ ಟ್ರಾನ್ಸ್‌ಫಾರ್ಮರ್ ಹಾನಿಗೊಳಗಾಗಿರುವುದು ಸ್ಪಷ್ಟವಾದಾಗ, ಅದನ್ನು ಬದಲಾಯಿಸಲಾಯಿತು. ಆದರೆ ಜನರೇಟರ್ ಕೂಡ ಉತ್ತಮ ಸ್ಥಿತಿಯಲ್ಲಿ ಕಂಡುಬಂದಿದೆ. ತನಿಖಾ ವರದಿಯ ನಂತರ ಕ್ರಮ ಕೈಗೊಳ್ಳಲಾಗುವುದು" ಎಂದು ಬಲ್ಲಿಯಾ ಮುಖ್ಯ ವೈದ್ಯಾಧಿಕಾರಿ ಹೇಳಿದರು.
ಈ ವಿಷಯದ ಬಗ್ಗೆ ತನಿಖೆ ನಡೆಸಲು 3 ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಸೋಮವಾರ ರಾತ್ರಿ ಬೇರೂರ್ಬರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಈ ಹೆರಿಗೆಗೆಳು ನಡೆದಿದೆ ಎಂದು ವರದಿ ಮಾಡಲಾಗಿದೆ. (ಏಜೆನ್ಸೀಸ್)