ಪುತ್ತೂರು: ಕಣ್ಣೂರು ಜಿಲ್ಲೆಯ ಚಪ್ಪಾರಪಡವಿನಲ್ಲಿ ಜನವರಿ ೩೦ರಿಂದ ನಾಲ್ಕು ದಿನ ನಡೆಯಲಿರುವ ೩೩ನೇ ವಾರ್ಷಿಕ ೨೨ನೇ ಸನದುದಾನ ಮಹಾಸಮ್ಮೇಳನದ ಪ್ರಚಾರಾರ್ಥವಾಗಿ ಡಿ.೩ರಂದು ಕುದ್ದುಪದವು ಕೆದಿಲ ಕಾಂಪ್ಲೆಕ್ಸ್‌ನಲ್ಲಿ ಉದ್ಘಾಟನಾ ಕಾರ್ಯಕ್ರಮ ಹಾಗೂ ಆಹ್ವಾನಿತ ತಂಡಗಳ ಬುರ್ದಾ ಮತ್ತು ಖವಾಲಿ ಸ್ವರ್ಧೆ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಜಂಯಿತುಲ್ ಇರ್ಫಾನಿಯ್ಯೀನ್ ಅಧ್ಯಕ್ಷ ಶೇಖ್ ಮಹಮ್ಮದ್ ಇರ್ಫಾನಿ ಹೇಳಿದರು.
ಸಮ್ಮೇಳನದಲ್ಲಿ ಬಾಯಾರಿನ ಅಲ್ ಹಾಜ್ ಉಸ್ತಾದ್ ಅಬ್ದುಲ್ ರಝ್ಝಾಕ್ ದುಆಃ ನೆರವೇರಿಸಲಿದ್ದಾರೆ. ಕೂರ್ನಡ್ಕ ಖಾಝಿ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಉದ್ಘಾಟಿಸಲಿದ್ದು, ಪ್ರಮುಖ ಭಾಷಣವನ್ನು ಪ್ರೊಫೆಸರ್ ಸಯ್ಯದ್ ಶರೀಫ್ ತಂಙಳ್ ಇರ್ಫಾನಿ ನಡೆಸಲಿದ್ದಾರೆ. ಕೇಂದ್ರ ಜಂಇಯ್ಯತ್ತುಲ್ ಇರ್ಫಾನಿಯ್ಯೀನ್ ಅಧ್ಯಕ್ಷ ನಸ್ವೀರ್ ಫೈಝಿ ಇರ್ಫಾನಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಮುಖರಾದ ತ್ವಾಹಾ ಫೈಜಿ ಇರ್ಪಾನಿ, ಯೂಸುಫ್ ಹೈದರ್ ಇರ್ಪಾನಿ, ಮಹಮ್ಮದ್ ಆಸಿಫ್ ಉಪಸ್ಥಿತರಿದ್ದರು.