

ಕಡಬ: ಸಮಾಜದ ಆಶಯಕ್ಕೆ ಪತ್ರಕರ್ತರು ಧ್ವನಿಯಾಗಬೇಕು, ನಿರಂತರ ಅಧ್ಯಯನದ ಮೂಲಕ ವರದಿಯಲ್ಲಿ ನೈಜ ಸ್ಥಿತಿಗೆ ಒತ್ತು ನೀಡಿ ಆಡಳಿತದ ಗಮನ ಸೆಳೆಯಬೇಕು ಎಂದು ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಹೇಳಿದರು.
ಸೋಮವಾರ ಆಲಂಕಾರು ಶ್ರೀ ದುರ್ಗಾಂಬಾ ಪದವಿಪೂರ್ವ ಕಾಲೇಜಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಡಬ ತಾಲೂಕು ಘಟಕದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಡಬ ತಾಲೂಕು ಅಧ್ಯಕ್ಷ ನಾಗರಾಜ್ ಎನ್.ಕೆ.ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಸಂಚಾಲಕ ದಯಾನಂದ ರೈ ಮನವಳಿಕೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದ.ಕ.ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಕಾಲೇಜಿನ ಆಡಳಿತಾಧಿಕಾರಿ ಶ್ರೀಪತಿ ರಾವ್, ಸಂಘದ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಪೆರ್ಲ, ಸದಸ್ಯರಾದ ಪ್ರವೀಣ್‌ರಾಜ್ ಕೊಲ, ಪ್ರವೀಣ್ ಚೆನ್ನಾವರ, ಸುಧಾಕರ ಕಾಣಿಯೂರು, ಪ್ರಕಾಶ್ ಕೋಡಿಂಬಾಳ, ದಿವಾಕರ್ ಮುಂಡಾಳ, ಲೋಕೇಶ್ ಸುಬ್ರಹ್ಮಣ್ಯ, ಸ್ವಾತಿ ಬಾಳ್ತಿಲ್ಲಾಯ ಕೊಕ್ಕಡ, ನಾಗೇಶ್ ಬಳ್ಪ, ಪ್ರಕಾಶ್ ಸುಬ್ರಹ್ಮಣ್ಯ, ಸಂತೋಷ್ ಸುಬ್ರಹ್ಮಣ್ಯ, ತಸ್ಲಿಂ ಮರ್ದಾಳ ಉಪಸ್ಥಿತರಿದ್ದರು.
ಪತ್ರಕರ್ತ ಸುಧಾಕರ ಸುವರ್ಣ ತಿಂಗಳಾಡಿ ಉಪನ್ಯಾಸ ನೀಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಐಡಿ ಕಾರ್ಡನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಡಬ ತಾಲೂಕಿನ ಸದಸ್ಯರಿಗೆ ಜಿಲ್ಲಾ ಪತ್ರಕರ್ತ ಸಂಘ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ವಿತರಿಸಿದರು. ಆಲಂಕಾರು ಪರಿಸರದ ಹಿರಿಯ ಪತ್ರಿಕಾ ವಿತರಕಿ ನಾರಾಯಣಿ ಭಟ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಸ್ಥಾಪಕಾಧ್ಯಕ್ಷ ಕೆ.ಎಸ್.ಬಾಲಕೃಷ್ಣ ಕೊಲ ಸ್ವಾಗತಿಸಿ. ಸದಸ್ಯ ಹರೀಶ್ ಬಾರಿಂಜ ಸನ್ಮಾನ ಪತ್ರ ವಾಚಿಸಿದರು. ಪ್ರಾಂಶುಪಾಲೆ ರೂಪಾ ಎಂ.ಟಿ. ವಂದಿಸಿದರು.