ಜೂ.14ರಂದು ರಾಜ್ಯಮಟ್ಟದ ವಿಚಾರ ಸಂಕಿರಣ: ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್.ಭರತ್‌ರಾಜ್ ಮಾಹಿತಿ

Press conference on the symposium Mandya
Published on

ಮಂಡ್ಯ: ಸಾಮ್ರಾಜ್ಯಶಾಹಿ ದೇಶಗಳ ಆಮದು ಸುಂಕ ಕಡಿತದ ಒತ್ತಡ ಮತ್ತು ರಾಜ್ಯದ ರೈತರ ಮೇಲಿನ ದುಷ್ಪರಿಣಾಗಳ ಕುರಿತು ನಗರದ ಕರ್ನಾಟಕ ಸಂಘದ ಆವರಣದಲ್ಲಿ ಜೂ.14ರಂದು ಬೆಳಗ್ಗೆ 10.30ಕ್ಕೆ ರಾಜ್ಯಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್.ಭರತ್‌ರಾಜ್ ತಿಳಿಸಿದರು.

ಕೇಂದ್ರ ಸರ್ಕಾರ ಅಮೆರಿಕಾ ಸೇರಿದಂತೆ ಮುಂತಾದ ಸಾಮ್ರಾಜ್ಯಶಾಹಿ ರಾಷ್ಟ್ರಗಳ ಒತ್ತಡಕ್ಕೆ ಮಣಿಯುತ್ತಿರುವುದು ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ವಿಚಾರ ಸಂಕಿರಣದ ಮೂಲಕ ರೈತರ ಮೇಲೆ ವಿನಾಶಕಾರಿ ಪರಿಣಾಮಗಳು ಹಾಗೂ ರಾಜ್ಯದ ಕೃಷಿ ಉತ್ಪನ್ನಗಳ ರಫ್ತಿಗೆ ತೊಂದರೆ ಉಂಟುಮಾಡುವುದು ಸಾಮ್ರಾಜ್ಯಶಾಹಿ ದೇಶಗಳ ಪಿತೂರಿ ಬಗ್ಗೆ ಚರ್ಚಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವಿಚಾರ ಸಂಕಿರಣವನ್ನು ಅಖಿಲ ಭಾರತ ಕಿಸಾನ್ ಸಭಾದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಹಾಗೂ ಅಖಿಲ ಭಾರತ ಕಬ್ಬು ಬೆಳಿಗಾರರ ಸಂಘದ ರಾಷ್ಟ್ರೀಯ ಅಧ್ಯಕ್ಷ ಕಾಂ.ಡಿ.ರವೀಂದ್ರನ್ ಉದ್ಘಾಟಿಸಲಿದ್ದು, ಕೃಷಿ ಅರ್ಥಶಾಸ್ತ್ರಜ್ಞ ಡಾ.ಪ್ರಕಾಶ್ ಕಮ್ಮರಡಿ, ಕೆಪಿಆರ್‌ಎಸ್ ರಾಜ್ಯಾಧ್ಯಕ್ಷ ಕಾಂ.ಯು.ಬಸವರಾಜ್, ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂ.ಟಿ.ಯಶವಂತ ವಿಷಯದ ಕುರಿತು ಮಾತನಾಡಿಲಿದ್ದಾರೆ. ಇದೇ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿ ಸಭೆ ಇರಲಿದೆ ಎಂದು ವಿವರಿಸಿದರು.

ಸಂಘದ ಎನ್.ಲಿಂಗರಾಜಮೂರ್ತಿ, ಸತೀಶ್, ಗುರುಸ್ವಾಮಿ, ಕುಳ್ಳೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net