
ಮಂಡ್ಯ: ಕೆಂಪೇಗೌಡ ಒಕ್ಕಲಿಗರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ದೇಶದ ಮೊದಲ ರೈತರ ಶಾಲೆಯನ್ನು ಕೆರಗೋಡು ಹೋಬಳಿಯ ಆಲಕೆರೆ ಗ್ರಾಮದಲ್ಲಿ ಜೂ.16ರಂದು ಬೆಳಗ್ಗೆ 10.30ಕ್ಕೆ ಉದ್ಘಾಟಿಸಲಾಗುವುದು ಎಂದು ಸಂಘದ ಕಾರ್ಯದರ್ಶಿ ಸತ್ಯಮೂರ್ತಿ ತಿಳಿಸಿದರು.
ರೈತರ ಸಬಲೀಕರಣದ ದೃಷ್ಠಿಯಿಂದ ಹಾಗೂ ಸರಿಯಾದ ಮಾರ್ಗದರ್ಶನ ಮಾಹಿತಿ ನೀಡುವ ಸಲುವಾಗಿ ರೈತ ಶಾಲೆ ಆರಂಭಿಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆದಿಚುಂಚನಗಿರಿ ಪೀಠಾಧಿಪತಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ ಶಾಸಕ ರವಿಕುಮಾರ್ ಗಣಿಗ ರೈತರ ಶಾಲೆ ಉದ್ಘಾಟಿಸಲಿದ್ದು, ಆಲಕೆರೆ ಗ್ರಾ.ಪಂ ಅಧ್ಯಕ್ಷ ಆರ್.ಶಶಿಧರ್ ಅಧ್ಯಕ್ಷತೆ ವಹಿಸುವರು. ಸಂಘದ ಖಜಾಂಚಿ ಪ್ರದೀಪ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಜಿಲ್ಲಾಧಿಕಾರಿ ಡಾ.ಕುಮಾರ, ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ, ಕೃಷಿ ವಿವಿಯ ವಿಶೇಷಾಧಿಕಾರಿ ಕೆ.ಎಂ.ಹರಿಣಿಕುಮಾರ್, ಪಿಇಟಿ ಅಧ್ಯಕ್ಷ ವಿಜಯಾನಂದ, ಮನ್‌ಮುಲ್ ಅಧ್ಯಕ್ಷ ಶಿವಪ್ಪ, ನಿರ್ದೇಶಕರಾದ ರಘುನಂದನ್, ಬಿ.ಆರ್.ರಾಮಚಂದ್ರು, ಬಿಜೆಪಿ ಮುಖಂಡ ಸಚ್ಚಿದಾನಂದ ಸೇರಿದಂತೆ ಹಲವು ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ಸಂಘದ ನಂದೀಶ್, ಜಗದೀಶ್, ಕಿರಣ್‌ಕುಮಾರ್, ಚೇತನ್‌ಕುಮಾರ್ ಇದ್ದರು.