ಬೆಂಗಳೂರು: ರಾಜ್ಯ ಮಾಹಿತಿ ಆಯೋಗದ ಆಯುಕ್ತರಾಗಿ ನೇಮಕವಾಗಿರುವ ನಾಲ್ವರು ಪತ್ರಕರ್ತರಿಗೆ ಪ್ರೆಸ್ಕ್ಲಬ್ ಆಫ್ ಬೆಂಗಳೂರು ವತಿಯಿಂದ ಸನ್ಮಾನಿಸಲಾಯಿತು. ಸರ್ಕಾರ ನೀಡಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಹುದ್ದೆಗೆ ನ್ಯಾಯ ಸಲ್ಲಿಸುವ ಕೆಲಸ ಮಾಡುತ್ತೇನೆ ಎಂದು ಮಾಹಿತಿ ಆಯುಕ್ತ “ವಿಜಯವಾಣಿ’ ಸಹಾಯಕ ಸಂಪಾದಕ ರುದ್ರಣ್ಣ ಹರ್ತಿಕೋಟೆ ಹೇಳಿದರು.
ವೃತ್ತಿ ಗೆಳೆಯರ ಸಹಕಾರ, ಹಿರಿಯರ ಮಾರ್ಗದರ್ಶನದಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ. ಪ್ರತಿಕೋದ್ಯಮದಲ್ಲಿ ನನಗೆ ಸಿಕ್ಕಿರುವ ಹುದ್ದೆಗಳಿಗೆ ನ್ಯಾಯ ಸಲ್ಲಿಸಿದ್ದೇನೆ. ಅದೇ ಮಾದರಿಯಲ್ಲಿ ಮಾಹಿತಿ ಆಯುಕ್ತರ ಹುದ್ದೆಗೂ ನ್ಯಾಯ ಸಲ್ಲಿಸಲು ಶ್ರದ್ಧೆಯಿಂದ ಕಾರ್ಯನಿರ್ವಹಿಸುವೆ ಎಂದರು.
ಮತ್ತೊಬ್ಬ ಮಾಹಿತಿ ಆಯುಕ್ತ ಕೆ. ಬದ್ರುದ್ದೀನ್ ಮಾತನಾಡಿ, ಈ ಹಂತಕ್ಕೆ ಬರುತ್ತೇನೆ ಎಂದು ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಸಹೋದರರಂತೆ ಕಂಡಿರುವ ವೃತ್ತಿ ಬಾಂಧವರಿಗೆ ನಾನು ಚಿರಋಣಿಯಾಗಿದ್ದೇನೆ. ಪತ್ರಿಕಾ ವೃತ್ತಿಗೆ ಚ್ಯುತಿ ಬಾರದಂತೆ ಕೆಲಸ ಮಾಡಿದ್ದೇನೆ. ಮಾಹಿತಿ ಆಯುಕ್ತರ ಹುದ್ದೆಯಲ್ಲಿಯೂ ನಿಷ್ಠುರನಾಗಿ ಕರ್ತವ್ಯ ನಿರ್ವಹಿಸುತ್ತೇನೆ. ವೃತ್ತಿ ಬಾಂಧವರು ಹಾದಿ ತಪ್ಪದಂತೆ ನನ್ನನ್ನು ನೋಡಿಕೊಳ್ಳಬೇಕು ಮತ್ತು ಬೆನ್ನುತಟ್ಟಿ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ಇದೇ ಹುದ್ದೆಗೆ ನೇಮಕವಾಗಿದ್ದ ‘ಎಸ್. ರಾಜಶೇಖರ್ ಸಹಿತ ಮೂವರು ಪತ್ರಕರ್ತರು ಹಾಗೂ ಐಎಎಸ್ ನಿವೃತ್ತ ಅಧಿಕಾರಿ ಡಾ. ಮಮತಾ ಅವರನ್ನು ಪ್ರೆಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.ಪ್ರೆಸ್ಕ್ಲಬ್ ಅಧ್ಯಕ್ಷ ಆರ್. ಶ್ರೀಧರ್, ಉಪಾಧ್ಯಕ್ಷ ವಿ.ಎನ್.ಮೋಹನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ, ಕಾರ್ಯದರ್ಶಿ ಜಿ.ವೈ. ಮಂಜುನಾಥ್, ಜಂಟಿ ಕಾರ್ಯದರ್ಶಿ ಧರಣೀಶ್ ಬೂಕನಕೆರೆ, ಖಜಾಂಚಿ ಶರಣಬಸಪ್ಪ ಮತ್ತಿತರರಿದ್ದರು.
ಪ್ರತಿಕೋದ್ಯಮಕ್ಕೆ ಬಾರದಿದ್ದರೆ ನಾನು ಅಧಿಕಾರಿ ಮಾತ್ರ ಆಗಿರುತ್ತಿದ್ದೆ. ಇಷ್ಟೊಂದು ಖುಷಿ ನನಗೆ ಇರುತ್ತಿಲ್ಲ. ಪತ್ರಕರ್ತರ ಸಹಪಾಠಿಗಳಿಂದ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು. ವೃತ್ತಿಯಲ್ಲಿರುವಾಗ ಮಾಹಿತಿ ಕೇಳುತ್ತಿದ್ದೆವು. ಇನ್ನು ಮುಂದೆ ಸಾರ್ವಜನಿಕರಿಗೆ ಬೇಕಾದ ಮಾಹಿತಿಯನ್ನು ನೀಡುವ ಜವಾಬ್ದಾರಿ ನಮ್ಮ ಮೇಲಿದೆ. ಹಿಂದೆ ಮಾಹಿತಿ ಹಕ್ಕು ಕಾಯ್ದೆ ಕರಡು ರಚಿಸುವ ತಂಡದಲ್ಲಿ ನಾನು ಕಾರ್ಯನಿರ್ವಹಿಸಿದ್ದು, ಆಯೋಗದ ಕಾರ್ಯಕ್ಕೆ ಸಹಕಾರಿಯಾಗಲಿದ್ದೆ.
| ಬಿ.ಆರ್.ಮಮತಾ. ರಾಜ್ಯ ಮಾಹಿತಿ ಆಯೋಗದ ಆಯುಕ್ತೆ.

ದೇಶದಲ್ಲಿ ಹಿಂದೂ ಎಂಬ ಪದವೇ ಇರಲಿಲ್ಲ ಅದನ್ನು ತಂದಿದ್ದೆ ಕಾಂಗ್ರೆಸ್: Santosh Lad