

ಪಡುಬಿದ್ರಿ: ಹೊಸ ಮಾರಿಗುಡಿಯ ಜೀರ್ಣೋದ್ಧಾರ ಮತ್ತು ಜೀರ್ಣೋದ್ಧಾರದ ಪ್ರಯುಕ್ತ ಸಿದ್ಧಪಡಿಸಲಾದ ಗ್ರಂಥದ ಮೂಲಕವಾಗಿ ಕಾಪುವಿನ ಇತಿಹಾಸವನ್ನು ಕಾಪಾಡುವ ಪ್ರಯತ್ನಕ್ಕೆ ಚಾಲನೆ ನೀಡಲಾಗಿದೆ ಎಂದು ಜಾನಪದ ವಿದ್ವಾಂಸ ಕೆ.ಎಲ್. ಕುಂಡಂತಾಯ ಹೇಳಿದರು. ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀಮಾತಾ ಸಭಾಭವನ ಉದ್ಘಾಟನೆ ಮತ್ತು ‘ಮಹಾಮಾತೆ ಮಾರಿಯಮ್ಮ’ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಮಂಗಳವಾರ ಮಾತನಾಡಿದರು. ಕಾಪು ಮಾರಿಯಮ್ಮಳಾಗಿ ಭಕ್ತರನ್ನು ಪೊರೆಯುತ್ತಿರುವ ಜಗನ್ಮಾತೆಯ ಪುರಾಣದ ವೈಭವ ಮತ್ತು ಚಿತ್ರಣಗಳನ್ನು ಪೋಣಿಸಿ ಮಹಾಮಾತೆ ಮಾರಿಯಮ್ಮ ಗ್ರಂಥ ತಯಾರಿಸಲಾಗಿದೆ ಎಂದರು. ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ ಮಾತನಾಡಿ, ಕಾಪು ಮಾರಿಯಮ್ಮನ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವದ ಬಳಿಕ ಕ್ಷೇತ್ರ ನಿತ್ಯ ಅನ್ನದಾಸೋಹ ಆರಂಭಿಸಲಾಗುತ್ತಿದೆ ಎಂದರು. ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ, ಪ್ರಧಾನ ತಂತ್ರಿ ಕೆ.ಪಿ.ಕುಮಾರಗುರು ತಂತ್ರಿ ಕೊರಂಗ್ರಪಾಡಿ, ಕಾರ್ಯ ನಿರ್ವಹಣಾಧಿಕಾರಿ ರವಿಕಿರಣ್, ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ಕಲ್ಯ, ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷರಾದ ಲಾಲಾಜಿ ಆರ್.ಮೆಂಡನ್, ಅನಿಲ್ ಬಲ್ಲಾಳ್ ಕಾಪು ಬೀಡು, ನವದುರ್ಗಾ ಲೇಖನ ಯಜ್ಞ ಸಮಿತಿ ಅಧ್ಯಕ್ಷ ಕೆ.ರಘುಪತಿ ಭಟ್, ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ, ಪ್ರಮುಖರಾದ ದೇವಿಪ್ರಸಾದ್ ಶೆಟ್ಟಿ ಬೆಳಪು, ಕಾಪು ದಿವಾಕರ ಶೆಟ್ಟಿ, ಮಾಧವ ಆರ್.ಪಾಲನ್, ಉದಯ ಸುಂದರ್ ಶೆಟ್ಟಿ, ಯೋಗೀಶ್ ಶೆಟ್ಟಿ ಬಾಲಾಜಿ, ಶೇಖರ್ ಸಾಲ್ಯಾನ್, ಮನೋಹರ ರಾವ್ ಕಲ್ಯ, ರವೀಂದ್ರ ಮಲ್ಲಾರು, ಹರಿಣಾಕ್ಷಿ ದೇವಾಡಿಗ ಉಪಸ್ಥಿತರಿದ್ದರು. ದಾಮೋದರ್ ಶರ್ಮ, ಕಿರಣ್ ಆಳ್ವ, ಸತೀಶ್ ಶೆಟ್ಟಿ ಗುಡ್ಡೆಚ್ಚಿ ನಿರೂಪಿಸಿದರು.
ಶ್ರೀಮಾತಾ ಸಭಾಭವನ ಉದ್ಘಾಟನೆ ಮತ್ತು ಘಂಟಾನಾದ ಸೇವೆಗೆ ಚಾಲನೆ ಪ್ರಯುಕ್ತ ಶ್ರೀಮಾತಾ ಸುವರ್ಣ ಪುಷ್ಪಾಂಜಲಿ ಸಮರ್ಪಣಾ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮ ಸಂಪನ್ನಗೊಂಡಿತು. ಮಹಾಮಾತೆ ಮಾರಿಯಮ್ಮ ಗ್ರಂಥದ ಸಂಪಾದಕೀಯ ಮಂಡಳಿ, ಸಮಗ್ರ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ ಸಂದರ್ಭ ಸಹಕರಿಸಿದವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಭಕ್ತರ ಸಹಕಾರವೇ ಕ್ಷೇತ್ರದಲ್ಲಿನ ಈವರೆಗಿನ ಎಲ್ಲ ಜೀರ್ಣೋದ್ಧಾರ ಕೆಲಸಗಳಿಗೂ ಸ್ಫೂರ್ತಿಯಾಗಿದ್ದು, ಮಂದಿನ ಹಂತದ ಜೀರ್ಣೋದ್ಧಾರ ಕಾರ್ಯಗಳಿಗೂ ಈಗಾಗಲೇ ಚಾಲನೆ ನೀಡಲಾಗಿದೆ. ಭಕ್ತರ ಸಹಕಾರ ಯಾಚಿಸುತ್ತಿದ್ದೇವೆ. ಕೆ.ವಾಸುದೇವ ಶೆಟ್ಟಿ, ಅಧ್ಯಕ್ಷ, ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ https://www.vijayavani.net/tehsildar-visits-kota-kotathattu-areas https://www.vijayavani.net/dilapidated-hanadi-link-bridge