ಯಲಹಂಕ ವಾಯು ನೆಲೆಯಲ್ಲಿ ಏರ್ ಶೋಗೆ ಸಿದ್ಧತೆ; ಫೆ.10ರಿಂದ 14ರವರೆಗೆ ಪ್ರದರ್ಶನ

Airshow
Published on

ಬೆಂಗಳೂರು: ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಅಂತರಾಷ್ಟ್ರೀಯ ವಯಮಾನಿಕ ಪ್ರದರ್ಶನಕ್ಕೆ ಒಂದು ತಿಂಗಳು ಬಾಕಿ ಉಳಿದಿದ್ದು, ಯಲಹಂಕದ ವಾಯುನೆಲೆಯಲ್ಲಿ ಸಿದ್ಧತಾ ಕಾರ್ಯ ಆರಂಭವಾಗಿದೆ.

ಫೆ.10ರಿಂದ 14 ರವರೆಗೆ ನಡೆಲಯಿರುವ ಏರ್ ಶೋ ನಲ್ಲಿ ದೇಶ ವಿದೇಶಗಳ ಹಲವು ಸಂಸ್ಥೆಗಳು ಭಾಗಿಯಾಗಲಿದ್ದು, ದೇಶದ ವಿಮಾನಯಾನ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಗೆ ಕೂಡಾ ಕಾರಣವಾಗಲಿದೆ. ಈ ಹಿನ್ನೆಲೆಯಲ್ಲಿ ವೈಮಾನಿಕ ಪ್ರದರ್ಶನಕ್ಕೆ ಅಗತ್ಯವಿರುವ ಮೂಲಭೂತ ಸೌಲಭ್ಯ ಹಾಗೂ ಮತ್ತಿತರ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಈ ಹಿಂದೆ 14 ಏರ್ ಶೋಗಳು ಬೆಂಗಳೂರಿನಲ್ಲಿ ನಡೆದಿದ್ದು ಈ ಬಾರಿ ನಡೆಯುತ್ತಿರುವ ಏರ್ ಶೋ 15ನೇ ಆವೃತ್ತಿಯಾಗಿದೆ. ವಿವಿಧ ವಿದೇಶಿ ಸಂಸ್ಥೆಗಳೊಂದಿಗಿನ ಹೂಡಿಕೆ ಮತ್ತು ಒಪ್ಪಂದಗಳಿಗೆ ಸಂಬಂಧಪಟ್ಟಂತೆ ವೈಮಾನಿಕ ಪ್ರದರ್ಶನವು ಮಹತ್ವ ಪಡೆದುಕೊಂಡಿದ್ದು, ಮೇಕ್ ಇನ್ ಇಂಡಿಯಾ ಪರಿಕಲ್ಪನೆಗೆ ಮತ್ತಷ್ಟು ವೇಗ ಉದ್ದೇಶವನ್ನು ಹೊಂದಿದೆ.

‘ರನ್ ವೇ ಟು ಎ ಬಿಲಿಯನ್ ಆಪರ್ಚುನಿಟೀಸ್’ ಎಂಬ ಧ್ಯೇಯ ವಾಕ್ಯದೊಂದಿಗೆ ರೂಪಿಸಿರುವ 2025ರ ಏರ್ ಶೋದಲ್ಲಿ ಮೊದಲ ಮೂರು ದಿನಗಳು ವ್ಯಾಪಾರ, ವಹಿವಾಟು ವೃದ್ಧಿಗೆ ಮೀಸಲಾಗಿರುತ್ತವೆ. ನಂತರದ ಕೊನೆಯ ಎರಡು ದಿನಗಳ ಏರ್ ಶೋ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿರುತ್ತದೆ.

ಮಹತ್ವದ ಒಪ್ಪಂಧಗಳಿಗೆ ವೇದಿಕೆ:

ಭಾರತದ ರಕ್ಷಣಾ ಕ್ಷೇತ್ರದಲ್ಲಿ ಆಗುತ್ತಿರುವ ಹಲವು ಆವಿಷ್ಕಾರಗಳನ್ನು ಈ ಏರ್ ಶೋ ನಲ್ಲಿ ಪ್ರದರ್ಶಿಸಲಾಗುವುದು. ಏರ್ ಶೋ ಸಂದರ್ಭದಲ್ಲಿ ರಕ್ಷಣಾ ಸಚಿವರ ಸಮಾವೇಶವನ್ನು ಕೂಡಾ ಆಯೋಜಿಸಲಾಗಿದ್ದು, ಮಿತ್ರ ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಮಾತುಕತೆ ಹಿರಿಯ ತಜ್ಞರೊಂದಿಗೆ ಸಮಾಲೋಚನೆ ಹಾಗೂ ಹಲವು ಒಪ್ಪಂದಗಳಿಗೆ ವೇದಿಕೆ ನಿರ್ಮಿಸಲಾಗುತ್ತಿದೆ. ರಷ್ಯಾ, ಅಮೆರಿಕಾ, ಬ್ರಿಟನ್ ಮತ್ತಿತರ ಐರೋಪ್ಯ ರಾಷ್ಟ್ರಗಳು ಸೇರಿ 40ಕ್ಕೂ ಹೆಚ್ಚಿನ ರಾಷ್ಟ್ರಗಳು ವೈಮಾನಿಕ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿದ್ದು, 100 ಕ್ಕೂ ಹೆಚ್ಚಿನ ದೇಶೀಯ ವಿಮಾನಯಾನಕ್ಕೆ ಸಂಬಂಧಪಟ್ಟ ಸಂಸ್ಥೆಗಳು ಪ್ರದರ್ಶನಲ್ಲಿ ಪಾಲ್ಗೊಂಡ ಹೊಸ ಆವಿಷ್ಕಾರಗಳನ್ನು ಪ್ರದರ್ಶಿಸಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net