ಸುಳ್ಯ: ರಾಷ್ಟ್ರೀಯ ಗೋಸೇವಾ ಸಂಸ್ಥಾನದ ನಂದಿ ರಥಯಾತ್ರೆ ಮಾರ್ಚ್ 15ರಂದು ಸುಳ್ಯಕ್ಕೆ ಆಗಮಿಸಲಿದ್ದು, ಪೂರ್ವಭಾವಿ ಸಭೆ ಸುಳ್ಯ ಕೇರ್ಪಳದಲ್ಲಿ ನಡೆಯಿತು. ಆರೆಸ್ಸೆಸ್ ತಾಲೂಕು ಸಂಘಚಾಲಕ್ ತಳೂರು ಚಂದ್ರಶೇಖರ, ಪ್ರಾಂತ ಸಹ ಸೇವಾ ಪ್ರಮುಖ್ ನ.ಸೀತಾರಾಮ್, ವಿಭಾಗ ಸಹಕಾರ್ಯವಾಹ ಸುಭಾಶ್ಚಂದ್ರ ಕಳಂಜ ಮಾಹಿತಿ ನೀಡಿದರು.
ರಥಯಾತ್ರೆ ಸ್ವಾಗತ ಸಮಿತಿ ರಚಿಸಲಾಗಿದ್ದು, ಅಧ್ಯಕ್ಷರಾಗಿ ಅಕ್ಷಯ್ ಕೆ.ಸಿ. ಮತ್ತು ಕಾರ್ಯಾಧ್ಯಕ್ಷರಾಗಿ ಪತಂಜಲಿ ಭಾರಧ್ವಾಜ ಅವರನ್ನು ಆಯ್ಕೆ ಮಾಡಲಾಯಿತು. ಗೌರವ ಸಲಹೆಗಾರರಾಗಿ ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವ ಎಸ್.ಅಂಗಾರ, ಡಾ.ಕೇಶವ ಸುಳ್ಳಿ, ಸುಧಾಕರ ಕಾಮತ್, ಡಾ.ಪುನೀತ್ ಸೋಣಂಗೇರಿ, ಡಾ.ನಿತಿನ್ ಪ್ರಭು, ಡಾ.ಸೂರ್ಯನಾರಾಯಣ ಬೆಳ್ಳಾರೆ, ಡಾ.ಮೇಘಶ್ರೀ ಕಳಂಜ, ಪ್ರಧಾನ ಕಾರ್ಯದರ್ಶಿಗಳಾಗಿ ಜಗದೀಶ್ ಡಿ.ಪಿ, ವಿಕ್ರಂ ಅಡ್ಪಂಗಾಯ, ಕೋಶಾಧಿಕಾರಿಯಾಗಿ ಸನತ್ ಪಿ.ಆರ್, ಸಮಿತಿ ಗೌರವ ಸದಸ್ಯರನ್ನು ಘೋಷಿಸಲಾಯಿತು.
ನಂದಿ ರಥಯಾತ್ರೆ ತಾಲೂಕು ಸಂಚಾಲಕ ಅವಿನಾಶ್ ಕುರುಂಜಿ ಮತ್ತು ಸಹ ಸಂಚಾಲಕ ರಾಜೇಶ್ ಶೆಟ್ಟಿ ಮೇನಾಲ ಪೂರ್ವಭಾವಿ ಸಭೆ ಸಂಯೋಜಿಸಿದ್ದರು. ಮಾಜಿ ಸಚಿವ ಎಸ್.ಅಂಗಾರ, ನಗರ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಕ್ಯಾಂಪ್ಕೊ ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲ, ಬಿಜೆಪಿ ಪ್ರಮುಖರಾದ ಹರೀಶ್ ಕಂಜಿಪಿಲಿ, ಉದ್ಯಮಿ ಸುಧಾಕರ ಕಾಮತ್, ಬೆಳ್ಳಾರೆ ಸಹಕಾರಿ ಅಧ್ಯಕ್ಷ ಆರ್.ಕೆ.ಭಟ್, ಸುಳ್ಯ ಸಹಕಾರಿ ವಿಕ್ರಮ್ ಅಡ್ಪಂಗಾಯ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ, ಜಯಪ್ರಕಾಶ್ ಮೊಗ್ರ, ಕುಸುಮಾಧರ ಎ.ಟಿ, ಹೇಮಂತ್ ಕಂದಡ್ಕ, ಹೇಮಂತ್ ಮಠ, ಶಿವಪ್ರಸಾದ್ ಉಗ್ರಾಣಿಮನೆ, ಕಿಶನ್ ಜಬಳೆ, ರಜತ್ ಅಡ್ಕಾರು, ಜಗದೀಶ್ ಡಿ.ಪಿ, ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು.