ಶನೀಶ್ವರ ದೇಗುಲದಲ್ಲಿ ಪೂರ್ವಭಾವಿ ಸಭೆ

poorvabhavi
Published on

ಕೋಟ: ಶಾಂತಮೂರ್ತಿ ಶನೀಶ್ವರ ದೇಗುಲದ ಅನ್ನಛತ್ರ, ಸಭಾಂಗಣ ಲೋಕಾರ್ಪಣೆ ಪೂರ್ವಭಾವಿ ಸಭೆ ಭಾನುವಾರ ಜರುಗಿತು.

ದೇಗುಲದ ಪಾತ್ರಿ ಭಾಸ್ಕರ್ ಸ್ವಾಮಿ ಮಾತನಾಡಿ ದೇಗುಲದಲ್ಲಿ ಸುಸಜ್ಜಿತ ಸಭಾಂಗಣ, ಅನ್ನಛತ್ರದ ಕಾಮಗಾರಿ ಶೇ.90 ಪೂರ್ಣಗೊಂಡಿದ್ದು, ಫೆ.12ರಿಂದ 15ರವರೆಗೆ ಧಾರ್ಮಿಕ ಕಾರ್ಯಕ್ರಮದ ಸಂದರ್ಭ ಲೋಕಾರ್ಪಣೆಗೊಳ್ಳಲಿದೆ ಎಂದರು.

ಸಾಮಾಜಿಕ ಕಾರ್ಯಕರ್ತ ಕೆ.ದಿನೇಶ್ ಗಾಣಿಗ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು. ಪಂಚವರ್ಣ ಯುವಕ ಮಂಡಲ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲ ಅಧ್ಯಕ್ಷೆ ಲಲಿತಾ ಪೂಜಾರಿ, ಕೋಟ ಮೊಗವೀರ ಯುವ ಸಂಘ ಅಧ್ಯಕ್ಷ ರಂಜೀತ್ ಕುಮಾರ್, ಸ್ಥಳೀಯರಾದ ತಿಮ್ಮ ಕಾಂಚನ್, ಚಂದ್ರ ನಾಯ್ಕ, ಶಾರದಾ, ವಿಠೋಭಾ ಭಜನಾ ಮಂದಿರ ಅಧ್ಯಕ್ಷ ಪ್ರಭಾಕರ್ ಬಂಗೇರ ಮತ್ತಿತರರು ಉಪಸ್ಥಿತರಿದ್ದರು. ಅರ್ಚಕ ಜಯರಾಜ್ ನಿರೂಪಸಿದರು. ಪ್ರವೀಣ್ ಕುಂದರ್ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net