ಗುರು ಮಠದ ಲೋಕಾರ್ಪಣೆ ಪೂರ್ವಭಾವಿ ಸಭೆ : ನವೆಂಬರ್ 3ರಂದು ನೀಲೇಶ್ವರದ ಬಂಗಳಂನಲ್ಲಿ ಉದ್ಘಾಟನೆ

19-math
Published on

ಕಾಸರಗೋಡು: ನೀಲೇಶ್ವರದ ಬಂಗಳಂನಲ್ಲಿ ಶಿವಗಿರಿ ಮಠದ ಅಧೀನದಲ್ಲಿ ಕೋಟಪುನ್ನದಲ್ಲಿ ನಿರ್ಮಿಸಲಾಗಿರುವ ಶ್ರೀನಾರಾಯಣ ಗುರು ಮಠದ ಲೋಕಾರ್ಪಣಾ ಸಮಾರಂಭ ನ.3ರಂದು ನಡೆಯಲಿದ್ದು, ಸ್ವಾಗತ ಸಮಿತಿ ರಚಿಸಲಾಯಿತು.

ಮಡಿಕೈ ಗ್ರಾಪಂ ಅಧ್ಯಕ್ಷೆ ಎಸ್.ಪ್ರೀತಾ ಉದ್ಘಾಟಿಸಿದರು. ಶಿವಗಿರಿ ಮಠದ ಸ್ವಾಮಿ ಸುರೇಶ್ವರಾನಂದ ಅಧ್ಯಕ್ಷತೆ ವಹಿಸಿದ್ದರು. ಸ್ವಾಮಿ ಪ್ರೇಮಾನಂದ ಆಶೀರ್ವಚನ ನೀಡಿದರು. ಪಯ್ಯನ್ನೂರು ಸ್ವಾಮಿ ಆನಂದ ತೀರ್ಥ ಸ್ಮಾರಕ ಟ್ರಸ್ಟ್ ಅಧ್ಯಕ್ಷ ವಸುಮಿತ್ರನ್ ಎಂ.ಜಿ, ಹೊಜದುರ್ಗ ಎಸ್‌ಎನ್‌ಡಿಪಿ ಯೂನಿಯನ್ ಕಾರ್ಯದರ್ಶಿ ಪಿ.ವಿ.ವೇಣುಗೋಪಾಲನ್, ಯೋಗಂ ನಿರ್ದೇಶಕ ಸಿ.ನಾರಾಯಣನ್, ಕೆ. ಪ್ರಭಾಕರನ್, ಗುರುಧರ್ಮ ಪ್ರಚಾರ ಸಭಾ ಸಂಯೋಜಕ ಸುಧೀಂದ್ರ ಬಾಬು, ಕಾಸರಗೋಡು ಜಿಲ್ಲಾಧ್ಯಕ್ಷ ವಕೀಲ ಕೆ.ಸಿ.ಶಶೀಂದ್ರನ್, ಜಿಲ್ಲಾ ಸಂಯೋಜಕ ಉದಿನೂರು ಸುಕುಮಾರನ್, ಪ್ರಸಾದ್ ಶಾಂತಿ ಮೊದಲಾದವರು ಉಪಸ್ಥಿತರಿದ್ದರು. ಜಿಡಿಪಿಎಸ್ ಜಿಲ್ಲಾ ಸಂಚಾಲಕ ವಿನೋದ ಆಟ್ಟಿಪ್ಪಿಲ್ ಸ್ವಾಗತಿಸಿದರು. ಮಧು ಬಂಗಳಂ ವಂದಿಸಿದರು.

ಲೋಕಾರ್ಪಣಾ ಸಮಾರಂಭ ನ.3ರಂದು ನಡೆಯಲಿದೆ. ಸಚಿವ ಒ.ಆರ್.ಕೇಳು ಸಮಾರಂಭ ಉದ್ಘಾಟಿಸುವರು. ಶಿವಗಿರಿ ಧರ್ಮ ಸಂಘ ಟ್ರಸ್ಟ್‌ನ ಅಧ್ಯಕ್ಷ ಸ್ವಾಮಿ ಸಚ್ಚಿದಾನಂದ ಮಠದ ಲೋಕಾರ್ಪಣೆ ನೆರವೇರಿಸುವರು. ಧರ್ಮ ಸಂಗಮ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸುಭಂಗಾನಂದ ಸ್ವಾಮಿ ಪ್ರಾರ್ಥನಾ ಮಂದಿರ ಉದ್ಘಾಟಿಸುವರು. ಶಾಸಕ ಇ.ಚಂದ್ರಶೇಖರನ್ ದಿಕ್ಸೂಚಿ ಭಾಷಣ ಮಾಡುವರು. ತ್ರಿಕರಿಪುರ ಶಾಸಕ ಎಂ.ರಾಜಗೋಪಾಲನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸರ್ವಧರ್ಮ ಸಭೆಯನ್ನು ಸಂಸದ ರಾಜಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಸನ್ಯಾಸಿ ಸಂಗಮ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net