ನಂಬಿಕೆ, ಭಕ್ತಿಯಿಂದ ದೇವರ ಪ್ರಾರ್ಥನೆ

daru
Published on

ಕುಂದಾಪುರ: ಎಲ್ಲ ಕಡೆ ಭಗವಂತನ, ದೈವ ದೇವತೆಗಳ ಅಸ್ತಿತ್ವ ಇದೆ. ನಂಬಿಕೆ, ಭಕ್ತಿಯಿಂದ ಪ್ರಾರ್ಥನೆ ಮಾಡುವವರಿಗೆ ದೇವರ ಅಸ್ತಿತ್ವದ ಅನುಭವ ಆಗುತ್ತದೆ ಎಂದು ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಕಟ್‌ಬೇಲ್ತೂರು ಶ್ರೀ ಭದ್ರಮಹಾಕಾಳಿ ದೈವಸ್ಥಾನದಲ್ಲಿ ಶುಕ್ರವಾರ ಶ್ರೀ ಭದ್ರಮಹಾಕಾಳಿ ದೇವಿಯ ರಕ್ತಚಂದನದ ನೂತನ ದಾರುಬಿಂಬ ಪ್ರತಿಷ್ಠಾಪನೆ ಹಾಗೂ ಸಪರಿವಾರ ದೈವಗಳ ಪುನಃ ಪ್ರತಿಷ್ಠಾಪನೆ ಮತ್ತು ಬ್ರಹ್ಮಕುಂಭಾಭಿಷೇಕ ಮಹೋತ್ಸವ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಬ್ರಹ್ಮಶ್ರೀ ಕೆ.ಎಸ್.ಲಕ್ಷ್ಮೀನಾರಾಯಣ ಸೋಮಯಾಜಿ ಧಾರ್ಮಿಕ ಉಪನ್ಯಾಸ ನೀಡಿದರು. ದೈವಸ್ಥಾನ ಆಡಳಿತ ಸಮಿತಿ ಗೌರವಾಧ್ಯಕ್ಷ ಕೆ.ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಕೋಟೇಶ್ವರ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಟಿ.ಬಾಬು ಶೆಟ್ಟಿ, ಸದಸ್ಯ ರಾಜೇಶ ಕಾರಂತ್, ಡಾ.ಭಾಸ್ಕರ ಶೆಟ್ಟಿ, ನಿವೃತ್ತ ಸೀನಿಯರ್ ಮ್ಯಾನೇಜರ್ ಕೆ.ವಿಠಲ ಶೆಟ್ಟಿ, ಶಿವಮೊಗ್ಗ ಡಿಎಫ್‌ಒ ಸತೀಶ್, ಉದ್ಯಮಿ ಪಾಂಡುರಂಗ ಪೂಜಾರಿ, ಶಂಕರ ಶೆಟ್ಟಿ, ಸತೀಶ ಶೆಟ್ಟಿ ಹೆಗ್ಡೆಯವರ ಮನೆ, ದಿನೇಶ ಹೆಗ್ಡೆ ಮೊಳಹಳ್ಳಿ, ದಾನಿಗಳಾದ ಸುರೇಶ ಪೂಜಾರಿ, ಮಾಧವ ಪೂಜಾರಿ, ಅನಿಟ್ ಶೆಟ್ಟಿ, ಸುನೀಲ್ ಶೆಟ್ಟಿ, ಕಟ್‌ಬೇಲ್ತೂರು ಗ್ರಾಪಂ ಮಾಜಿ ಉಪಾಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಪ್ರಭಾಕರ ಪೂಜಾರಿ, ಸಂದೀಪ ಪೂಜಾರಿ, ಸಂಜಯ್, ಸುರೇಶ್, ಡಾ.ರಾಮಕೃಷ್ಣ ಕುಲಾಲ್, ಜಗದೀಶ ಶ್ರೀಯಾನ್, ಉದಯ ನಾರಾಯಣ ಪೂಜಾರಿ, ಚಂದ್ರಶೇಖರ ಶೆಟ್ಟಿ ನಾಗಯ್ಯ ಶೆಟ್ರಮನೆ, ಬಿ.ಭಾಸ್ಕರ ಶೆಟ್ಟಿ ವಾಸ ಶೆಟ್ರಮನೆ, ಹಾಗುಳಿ ಪಾತ್ರಿ ರವಿ ನಾಯ್ಕ, ಅಮ್ಮನವರ ಪಾತ್ರಿ ಗೋವಿಂದ ಪೂಜಾರಿ, ಅರ್ಚಕ ದೊಟ್ಟ ಪೂಜಾರಿ, ಜೋಗಿ ಕುಟುಂಬಸ್ಥ ಶೇಖರ ಬಳೆಗಾರ್ ಮೊದಲಾದವರು ಉಪಸ್ಥಿತರಿದ್ದರು. ವಿನೂತ ಆಚಾರ್ಯ ಪ್ರಾರ್ಥಿಸಿ, ಆಡಳಿತ ಸಮಿತಿ ಅಧ್ಯಕ್ಷ ಕೆ.ಆನಂದ ಶೆಟ್ಟಿ ಸ್ವಾಗತಿಸಿದರು. ಆಡಳಿತ ಸಮಿತಿ ಉಪಾಧ್ಯಕ್ಷ ಬಿ.ಸೀತಾರಾಮ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಾಪಕ ಡಾ.ಕಿಶೋರ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸಮಿತಿ ಕಾರ್ಯದರ್ಶಿ ಚಂದ್ರ ನಾಯ್ಕ ವಂದಿಸಿದರು.

ಪುಣ್ಯದ ಕೆಲಸ ಮಾಡಲು ನಮ್ಮ ಮನಸ್ಸು ಉದ್ರಿಕ್ತವಾಗುದಿಲ್ಲ. ಪಾಪದ ಫಲವಾಗಿ ದುಖಃ ಬರಬಾರದು, ಪುಣ್ಯದ ಫಲವಾಗಿ ಸುಖ ಬರಬೇಕೆಂದರೆ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬೇಕು. ಅದಕ್ಕಾಗಿ ಮನುಷ್ಯನಿಗೆ ವಿಶೇಷ ಸಂಸ್ಕಾರ, ಪ್ರಯತ್ನ ಬೇಕು. ಭಗವಂತನನ್ನು ಅನನ್ಯ ಭಕ್ತಿಯಿಂದ ಸೇವೆ ಮಾಡಬೇಕು. ಪರಿಪೂರ್ಣ ಕಷ್ಟ ಪರಿಹರಿಸಲು ಭದ್ರಮಹಾಕಾಳಿಯೇ ಪರಿಪೂರ್ಣ. ಅವಳ ಅನುಗ್ರಹಕ್ಕೆ ಪಾತ್ರರಾದರೆ ಮಾತ್ರ ಜನ್ಮದ ಸಾರ್ಥಕತೆ ಪಡೆಯಬಹುದು. -ಕೆ.ಎಸ್.ಲಕ್ಷ್ಮೀನಾರಾಯಣ ಸೋಮಯಾಜಿ https://www.vijayavani.net/childrens-festival-at-kokkarne-school https://www.vijayavani.net/mutual-cooperation-in-happiness-and-sorrow

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net