ಅಂಕತಡ್ಕದಲ್ಲಿ ಪ್ರವೀಣ್ ನೆಟ್ಟಾರು ಸಂಸ್ಮರಣೆ

New Project (25)
Published on

ಕಡಬ: ಪಾಲ್ತಾಡಿ ಗ್ರಾಮದ ಅಂಕತಡ್ಕದಲ್ಲಿರುವ ದಿ.ಪ್ರವೀಣ್ ನೆಟ್ಟಾರು ಸ್ಮಾರಕ ವೀರ ಸಾವರ್ಕರ್ ವೃತ್ತದಲ್ಲಿ ದಿ.ಪ್ರವೀಣ್ ನೆಟ್ಟಾರು ಅವರ ಪುಣ್ಯತಿಥಿ ಅಂಗವಾಗಿ ಬಿಜೆಪಿ ಪಾಲ್ತಾಡಿ ಶಕ್ತಿಕೇಂದ್ರ ಬೂತ್ ವತಿಯಿಂದ ಪ್ರವೀಣ್ ನೆಟ್ಟಾರು ಸಂಸ್ಮರಣೆ ನಡೆಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ರಾಕೇಶ್ ರೈ, ರವೀಂದ್ರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಯತೀಶ್, ಬಿಜೆಪಿ ಸುಳ್ಯ ಮಂಡಲ ಕಾರ್ಯದರ್ಶಿ ಗಣೇಶ, ಪುತ್ತೂರು ಮಂಡಲ ಪ್ರಧಾನ ಕಾರ್ಯದರ್ಶಿ ನಿತೀಶ್, ಸುಳ್ಯ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ.ಕೆ., ಸವಣೂರು ಗ್ರಾಪಂ ಅಧ್ಯಕ್ಷೆ ಸುಂದರಿ ಬಿ.ಎಸ್., ಸದಸ್ಯರಾದ ವಿನೋದಾ ರೈ, ಭರತ್ ರೈ, ಬೂತ್ ಅಧ್ಯಕ್ಷರಾದ ಸತೀಶ್, ಶಿವಾನಂದ, ಸವಣೂರು ಸಿಎ ಬ್ಯಾಂಕ್ ಉಪಾಧ್ಯಕ್ಷ ಚೇತನ್ ಕುಮಾರ್, ಚೆನ್ನಾವರ ಅಭ್ಯುದಯ ಯುವಕ ಮಂಡಲ ಅಧ್ಯಕ್ಷ ಪುಟ್ಟಣ್ಣ ನಾಯ್ಕ, ರಿಕ್ಷಾ ಚಾಲಕ ಮಾಲೀಕ ಸಂಘದ ಚಂದ್ರಹಾಸ, ಆಶೀತ್ ರೈ, ದಯಾಕರ, ಸುಂದರ, ದೀಕ್ಷಿತ್, ಸಮೃದ್ಧಿ ಕಿಶೋರ್ ಕುಮಾರ್ ಎಂ.ಡಿ., ಸುರೇಶ್, ಸುಂದರ ಬಿ.ಎಂ., ಜಯಪ್ರಶಾಂತ್, ರಾಜೇಶ್ ಪಾಲ್ತಾಡಿ, ಸಂದೀಪ್ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net