Paralympics: ಹೈಜಂಪ್ ಸ್ಪರ್ಧೆಯಲ್ಲಿ ಬಂಗಾರ ಗೆದ್ದ ಪ್ರವೀಣ್ ಕುಮಾರ್! ಭಾರತದ ಪದಕಗಳ ಸಂಖ್ಯೆ 26ಕ್ಕೆ ಏರಿಕೆ!

praveen
Published on

ಪ್ಯಾರಿಸ್​:  ಫ್ರಾನ್ಸ್​ನಲ್ಲಿ ನಡೆಯುತ್ತಿರುವ ಪ್ಯಾರಿಸ್ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತ ಆರನೇ ಪದಕವನ್ನು ಪಡೆದುಕೊಂಡಿದೆ. ಹೈಜಂಪ್​-ಟಿ64 ಸ್ಪರ್ಧೆಯಲ್ಲಿ ಭಾರತದ ಪ್ರವೀಣ್ ಕುಮಾರ್ ಚಿನ್ನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಪುರುಷರ ಹೈಜಂಪ್ ಟಿ-64 ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಪ್ರವೀಣ್ ಚಿನ್ನದ ಪದಕ್ಕೆ ಕೊರಳೊಡ್ಡಿದ್ದರು. ಇದು ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತ ಗೆದ್ದಿರುವ 26 ನೇ ಪದಕ ಮತ್ತು ಆರನೇ ಚಿನ್ನದ ಪದಕ ಆಗಿದೆ.

21 ವರ್ಷದ ನೋಯ್ಡಾ ಮೂಲದ ಪ್ರವೀಣ್ ಕುಮಾರ್ ಅವರು 2.08 ಮೀಟರ್ ಎತ್ತರಕ್ಕೆ ಜಿಗಿಯುವ ಮೂಲಕ ಏಷ್ಯನ್ ದಾಖಲೆಯೊಂದಿಗೆ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು. ಚಿನ್ನದ ಸಾಧನೆಯೊಂದಿಗೆ ಪ್ಯಾರಾ ಅಥ್ಲೀಟ್ ಪ್ರವೀಣ್ ಕುಮಾರ್ ಪ್ಯಾರಾಲಿಂಪಿಕ್ಸ್​ನ ಎತ್ತರ ಜಿಗಿತ ಸ್ಪರ್ಧೆಯಲ್ಲಿ 21 ವರ್ಷದ ಮರಿಯಪ್ಪನ್ ತಂಗವೇಲು ನಂತರ ಚಿನ್ನ ಗೆದ್ದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಸ್ಪರ್ಧೆಯಲ್ಲಿ ಅಮೆರಿಕ ಡೆರೆಕ್ ಲೊಸಿಡೆಂಟ್ ಬೆಳ್ಳಿ ಮತ್ತು ಉಜ್ಬೇಕಿಸ್ತಾನದ ಟೆಮುರ್ಬೆಕ್ ಗಿಯಾಜೊವ್​ ಕಂಚಿಕ ಪದಕ ಗೆದ್ದರು.

21 ವರ್ಷದ ಭಾರತದ ಪ್ರವೀಣ್ ಕುಮಾರ್ ಅವರು 2021ರ ಟೋಕಿಯಾ ಪ್ಯಾರಾಲಿಂಪಿಕ್ಸ್​ನಲ್ಲಿ ಕ್ರೀಡಾಕೂಟದಲ್ಲೂ ಬೆಳ್ಳಿ ಪದಕ ಗೆದ್ದಿದ್ದರು. ಆ ಮೂಲಕ ಸತತ ಎರಡನೇ ಪ್ಯಾರಾಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net