More

    ಗಾಂಧಿ ಪಾತ್ರದಲ್ಲಿ ಗಾಂಧಿ! ಒಂದೇ ಚಿತ್ರದಲ್ಲಿ ಪತಿ-ಪತ್ನಿ ಮಿಂಚಲು ರೆಡಿ

    “ಶಾಹಿದ್​’, “ಅಲಿಗಢ್​’ ಸಿನಿಮಾ ಮತ್ತು “ಸ್ಕ್ಯಾಮ್​​ 1992′, “ಸ್ಕ್ಯಾಮ್​​ 2003′ ಸೇರಿ ಹಲವು ಚಿತ್ರಗಳು ಮತ್ತು ವೆಬ್​ಸರಣಿಗಳಿಗೆ ಆ್ಯಕ್ಷನ್​-ಕಟ್​ ಹೇಳಿರುವ ಖ್ಯಾತಿ ಹನ್ಸಲ್​ ಮೆಹ್ತಾಗೆ ಸಲ್ಲುತ್ತದೆ. ಇದೀಗ ಅವರು ಮಹಾತ್ಮಾ ಗಾಂಧಿ ಜೀವನಾಧಾರಿತ ಸರಣಿಯ ಸಿದ್ಧತೆಯಲ್ಲಿದ್ದು, ಗಾಂಧಿ ಪಾತ್ರದಲ್ಲಿ ಪ್ರತಿಕ್​ ಗಾಂಧಿ ನಟಿಸಲಿದ್ದಾರೆ.

    ಗಾಂಧಿ ಪಾತ್ರದಲ್ಲಿ ಗಾಂಧಿ! ಒಂದೇ ಚಿತ್ರದಲ್ಲಿ ಪತಿ-ಪತ್ನಿ ಮಿಂಚಲು ರೆಡಿ

    ಕಳೆದ ಹಲವು ದಿನಗಳಿಂದ ಹನ್ಸಲ್​ ಮೆಹ್ತಾ ಮತ್ತು ತಂಡ ಕಸ್ತೂರಿ ಬಾಯಿ ಪಾತ್ರಕ್ಕಾಗಿ ನಟಿಯ ಹುಡುಕಾಟದಲ್ಲಿದ್ದರು. ಇದೀಗ ಪ್ರತಿಕ್​ ಪತ್ನಿ ಭಾಮಿನಿ ಓಜಾರನ್ನೇ ಕಸ್ತೂರಿ ಬಾಯಿ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಆ ಮೂಲಕ ಪ್ರತಿಕ್​ ಮತ್ತು ಭಾಮಿನಿ ದಂಪತಿ ಇದೇ ಮೊದಲ ಬಾರಿಗೆ ಸರಣಿಯೊಂದರಲ್ಲಿ ದಂಪತಿಯ ಪಾತ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ.

    ಗಾಂಧಿ ಪಾತ್ರದಲ್ಲಿ ಗಾಂಧಿ! ಒಂದೇ ಚಿತ್ರದಲ್ಲಿ ಪತಿ-ಪತ್ನಿ ಮಿಂಚಲು ರೆಡಿ

    ಇತ್ತೀಚೆಗಷ್ಟೇ ಭಾಮಿನಿಯ ಕಸ್ತೂರಿ ಬಾಯಿ ಲುಕ್​ ಬಿಡುಗಡೆಯಾಗಿದ್ದು, “ಹನ್ಸಲ್​ ಮೆಹ್ತಾ ಮತ್ತು ಅಪ್ಲಾಸ್​ ಎಂಟರ್​ಟೇನ್ಮೆಂಟ್​ ಜತೆ ಕೆಲಸ ಮಾಡುವ ಕನಸು ಇದೀಗ ನನಸಾಗಿದೆ. ರಂಗಭೂಮಿ ದಿನಗಳಿಂದಲೂ ಒಟ್ಟಿಗೆ ತೆರೆಹಂಚಿಕೊಳ್ಳುವ ಕನಸಿತ್ತು. ಅದೂ ಕೂಡ ಈಗ ನನಸಾಗಿದೆ. ಕಸ್ತೂರಿ ಬಾಯಿ ಪಾತ್ರ ನನ್ನ ಕರಿಯರ್​ಗೆ ಸಿಕ್ಕ ಒಂದು ಸುಂದರ ಟ್ವಿಸ್ಟ್​ ಎನ್ನಬಹುದು. ಪ್ರಾಮಾಣಿಕವಾಗಿ ಈ ಪಾತ್ರವನ್ನು ನಿಭಾಯಿಸುತ್ತೇನೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ​

    ಗಾಂಧಿ ಪಾತ್ರದಲ್ಲಿ ಗಾಂಧಿ! ಒಂದೇ ಚಿತ್ರದಲ್ಲಿ ಪತಿ-ಪತ್ನಿ ಮಿಂಚಲು ರೆಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts