ಹಾಸನ ಟಿಕೆಟ್​ ದಂಗಲ್​​; ಮತ್ತೊಬ್ಬ ಆಕಾಂಕ್ಷಿ ಮುನ್ನೆಲೆಗೆ

xhdk-1-1677463726.jpg.pagespeed.ic.GAon5gPUOU
Published on

ಬೆಂಗಳೂರು: ಜೆಡಿಎಸ್​ ಪಾಳಯದಲ್ಲಿ ತೀವ್ರ ತಲೆನೋವಾಗಿ ಪರಿಣಮಿಸಿರುವ ಹಾಸನ ಟಿಕೆಟ್​ ದಂಗಲ್​ಗೆ ಈಗ ಮತ್ತೊಂದು ಹೆಸರು ಸೇರ್ಪಡೆಯಾಗಿದ್ದು ಪ್ರಸಾದ್​ ಗೌಡ ಎಂಬುವವರು ತಮ್ಮಗೂ ಒಂದು ಅವಕಾಶ ಕೊಡಿ ಎಂದು ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದಾರೆ.

ಜೆಪಿ ಭವನದಲ್ಲಿ ಈ ಕುರಿತು ಮಾತನಾಡಿರುವ ಪ್ರಸಾದ್​ ಗೌಡ ನಾನು ಅನೇಕ ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ಕೋವಿಡ್​ ಸಂದರ್ಭದಲ್ಲಿ ಜನತೆಯ ಜೊತೆ ಇದ್ದೇನೆ ನಾನು ಕೂಡ ಹಾಸನ ವಿಧಾನಸಭಾ ಕ್ಷೇಥ್ರದ ಟಿಕೆಟ್​ ಆಕಾಂಕ್ಷಿ ಎಂದು ಹೇಳಿದ್ದಾರೆ.

ಭವಾನಿ ರೇವಣ್ಣ ಹಾಗೂ ಸ್ವರೂಪ್​ ಗೌಡ ಟಿಕೆಟ್​ ಆಕಾಂಕ್ಷಿಗಳಾಗಿದ್ದಾರೆ. ಮೂಲತಃ ನಾನು ಮುಳ್ಳು ಒಕ್ಕಲಿಗ ನನ್ನ ಪತ್ನಿ ದಾಸ ಒಕ್ಕಲಿಗ ನಮ್ಮ ಕುಟುಂಬದಲ್ಲಿ ಎರಡು ಪಂಗಡಗಳಿವೆ ಸಮುದಾಯದ ಬೆಂಬಲ ನನಗಿದೆ ಎಂದು ತಿಳಿಸಿದ್ದಾರೆ

ಸ್ವರೂಪ್​ ವಿರುದ್ದ ಹಾಸನದಲ್ಲಿ ಮೊದಲು ಧ್ವನಿ ಎತ್ತಿದವನು ನಾನು. ಟಿಕೆಟ್​ ವಿಚಾರವಾಗಿ ಈಗಾಗಲೇ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ, ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ, ರೇವಣ್ಣ ಅವರ ಜೊತೆಗೆ ಚರ್ಚಿಸಿದ್ದೇನೆ ವರಿಷ್ಠರು ಭರವಸೆ ನೀಡಿದ್ದಾರೆ ಪಕ್ಷ ಅವಕಾಶ ಕೊಟ್ಟರೆ ಪ್ರೀತಂ ಗೌಡರನ್ನ ಮಣಿಸೋದು ಶತಃಸಿದ್ದ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net