ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಯಾವಾಗ? ಕೇಂದ್ರ ಸಚಿವರ ಹೇಳಿಕೆ ಹೀಗಿದೆ

Pralhad Joshi
Published on

ಬೆಂಗಳೂರು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಗ್ಗೆ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭ ಅವರು ಟಿಕೆಟ್​ ಪಡೆದ ಆಕಾಂಕ್ಷಿಗಳ ವಿವರವನ್ನು ನಾಳೆ ಬಿಡುಗಡೆ ಮಾಡುವ ಸಾಧ್ಯತೆಯ ಬಗ್ಗೆ ಮಾತನಾಡಿದರು.

ಹೀಗಿದೆ ಬಿಜೆಪಿ ಪ್ಲಾನಿಂಗ್​

ಈ ಸಂದರ್ಭ ಪ್ರಲ್ಹಾದ್​ ಜೋಶಿ, "224 ಕ್ಷೇತ್ರಗಳ ಬಗ್ಗೆ ಚರ್ಚೆ ಆಗಿದೆ. ಇಂದು ಮಧ್ಯಾಹ್ನ ಇಡೀ ಪ್ರಚಾರದ ರೋಡ್ ಮ್ಯಾಪ್ ಚರ್ಚೆ ಕೂಡ ಆಗಿದೆ. ರಾಷ್ಟ್ರೀಯ ನಾಯಕರು ಯಾರ್ಯಾರು ಬರಬೇಕು, ಕೇಂದ್ರ ಸಚಿವರ ಟೂರ್ ಎಲ್ಲಿ ಆಗಬೇಕು, ಪಿಎಂ ಪ್ರವಾಸ, ರಕ್ಷಣಾ ಮಂತ್ರಿಗಳ ಪ್ರವಾಸ ಎಲ್ಲಿ ಆಗಬೇಕು ಎಂಬ ಬಗ್ಗೆ ಸಭೆ ಆಗಿದೆ. ನಾಳೆ ಪಟ್ಟಿ ಘೋಷಣೆ ಆಗುತ್ತದೆ" ಎಂದು ಹೇಳಿಕೆ ನೀಡಿದ್ದಾರೆ.

ಸಚಿವರು ಅಥವಾ ಶಾಸಕರಿಗೆ ಕೊಕ್​ ಕೊಡಲಾಗುತ್ತಾ?

ಇದೇ ವೇಳೆ ಅವರು "ನಮ್ಮ ಪಟ್ಟಿಯ ಅನಾಲಿಸಿಸ್ ಅನ್ನ ನಾವು ಮಾಡಿದ್ದೇವೆ. ನಾಳೆ ಅಮಿತ್ ಶಾ ಮತ್ತು ನಡ್ಡಾ ಅವರು ಎಲ್ಲದರ ಮರುಪರಿಶೀಲನೆ ಮಾಡ್ತಾರೆ. ಆಮೇಲೆ ನಾಳೆ ಅಥವಾ ನಾಡಿದ್ದು ಪಟ್ಟಿ ಬಿಡುಗಡೆ ಆಗುತ್ತೆ. ಇನ್ನು ಸಚಿವ ಅಥವಾ ಶಾಸಕರಿಗೆ ಕೊಕ್ ಕೊಡುವ ವಿಚಾರ ಎಲ್ಲವೂ ಊಹಾಪೋಹ. ಇದರ ಬಗ್ಗೆ ಈಗ ಹೇಳಲಾರೆ" ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net