

ತಿರುವನಂತಪುರಂ: 55 ನೇ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ವಿಜೇತರನ್ನು (National Film Awards) ನವೆಂಬರ್ 3 ರಂದು ಘೋಷಿಸಲಾಗಿದ್ದು, ಈ ವೇಳೆ ನಿರ್ದೇಶಕ ರಾಹುಲ್ ಸದಾಶಿವನ್ ಅವರ ಪಡೆದ ಹಾರರ್ ಥ್ರಿಲ್ಲರ್ ಬ್ರಹ್ಮಯುಗಂನಲ್ಲಿನ ಅದ್ಭುತ ನಟನೆಗಾಗಿ ಮಮ್ಮುಟ್ಟಿ ಅವರನ್ನು ಅತ್ಯುತ್ತಮ ನಟ ಎಂದು ಆಯ್ಕೆ ಮಾಡಲಾಗಿದೆ.
ಈ ವೇಳೆ ತೀರ್ಪುಗಾರರ ನೃತೃತ್ವ ವಹಿಸಿದ್ದ ಪ್ರಕಾಶ್ ರಾಜ್ ಮಾದ್ಯಮಗಳೊಂದಿಗೆ ಮಾತನಾಡಿದ್ದು, ಇತ್ತೀಚಿನ ವರ್ಷಗಳಲ್ಲಿ ಚಲನಚಿತ್ರಗಳಲ್ಲಿ ಅದ್ಭುತವಾಗಿ ಪ್ರದರ್ಶನ ನೀಡಿದರೂ, ಮಮ್ಮುಟಿ ಅವರನ್ನು ಕಡೆಗಣಿಸಲಾಗುತ್ತಿದೆ. ಇದು ಮಮ್ಮುಟಿಗೆ ಅರ್ಹವಲ್ಲ ಎಂದು ರಾಷ್ಟ್ರೀಯ ಪ್ರಶಸ್ತಿಗಳ ಪರಿಶೀಲನೆಯ ನ್ಯಾಯಯುತತೆಯನ್ನು ರಾಜ್ ಪ್ರಶ್ನಿಸಿದ್ದಾರೆ.
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಷಯದಲ್ಲಿ ರಾಜಿ ಮಾಡಿಕೊಳ್ಳಲಾಗಿದೆ ಎಂದು ಹೇಳುವುದರಲ್ಲಿ ನನಗೆ ಅಭ್ಯಂತರವಿಲ್ಲ. ಕೇರಳದ ತೀರ್ಪುಗಾರರ ಅಧ್ಯಕ್ಷರಾಗಲು ನನಗೆ ಬಹಳ ಸಂತೋಷವಿದೆ. ಏಕೆಂದರೆ ಅವರು ನನಗೆ ಕರೆ ಮಾಡಿದಾಗ ಅನುಭವಿ ಇರುವಂತಹ ವ್ಯಕ್ತಿಗಳು ಬೇಕು. ನಾವು ತೀರ್ಪಿನ ವಿಚಾರದಲ್ಲಿ ಕೈ ಹಾಕುವುದಿಲ್ಲ. ನಿಮಗೆ ಸಂಪೂರ್ಣ ತೀರ್ಪನ್ನು ತೆಗೆದುಕೊಳ್ಳುವುದಕ್ಕೆ ಬಿಡುತ್ತೇವೆ ಎಂದು ಹೇಳಿದ್ದರು ಎಂದು ರಾಜ್ ಬಹಿರಂಗಪಡಿಸಿದರು.
ಆದರೆ, ರಾಷ್ಟ್ರೀಯ ಪ್ರಶಸ್ತಿಗಳಲ್ಲಿ ಅದು ನಡೆಯುತ್ತಿಲ್ಲ, ಫೈಲ್ಗಳು ಮತ್ತು ರಾಶಿಗಳು ಪ್ರಶಸ್ತಿಗಳನ್ನು ಪಡೆಯುತ್ತಿರುವಾಗ ನಾವು ಅದನ್ನು ಗಮನಿಸಿದ್ದೇವೆ. ಅಂತಹ ತೀರ್ಪುಗಾರರು ಮತ್ತು ಸರ್ಕಾರ ಇದ್ದರೆ, ಅದು ಮಮ್ಮುಟ್ಟಿಗೆ ಅರ್ಹವಲ್ಲ ಎಂದು ತಿಳಿಸಿದ್ದಾರೆ.
55 ನೇ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ವಿಜೇತರನ್ನು ಸಾಂಸ್ಕೃತಿಕ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸಾಜಿ ಚೆರಿಯನ್ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು. ಪ್ರಕಾಶ್ ರಾಜ್ ನೇತೃತ್ವದ ತೀರ್ಪುಗಾರರ ಸಮಿತಿಯಲ್ಲಿ ಚಲನಚಿತ್ರ ನಿರ್ದೇಶಕ ರಂಜನ್ ಪ್ರಮೋದ್, ಚಲನಚಿತ್ರ ನಿರ್ಮಾಪಕ ಜಿಬು ಜಾಕೋಬ್, ಚಿತ್ರಕಥೆಗಾರ ಸಂತೋಷ್ ಎಚಿಕ್ಕನಂ, ಹಿನ್ನೆಲೆ ಗಾಯಕಿ ಗಾಯತ್ರಿ ಅಶೋಕನ್, ಧ್ವನಿ ವಿನ್ಯಾಸಕ ಮತ್ತು ನಿರ್ದೇಶಕ ನಿತಿನ್ ಲುಕೋಸ್ ಮತ್ತು ನಟ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದಾರೆ.
ಸ್ಪರ್ಧೆಯಲ್ಲಿ ಭಾಗವಹಿಸಿದ್ದ 128 ಚಲನಚಿತ್ರಗಳನ್ನು ಸಮಿತಿಯು ಪರಿಶೀಲನೆ ನಡೆಸಿದ್ದು, ಆಯ್ದ 38 ಚಲನಚಿತ್ರಗಳಲ್ಲಿ ವಿಜೇತರನ್ನು ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಶಸ್ತಿ ವಿಜೇತರಲ್ಲಿ ನಟಿ ಶಮ್ಲಾ ಹಮ್ಜಾ ಕೂಡ ಒಬ್ಬರಾಗಿದ್ದು, ನಿರ್ದೇಶಕ ಫಾಸಿಲ್ ಮುಹಮ್ಮದ್ ಅವರ 'ಫೆಮಿನಿಚಿ ಫಾತಿಮಾ' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇದು ಮಂಜುಮ್ಮೆಲ್ ಬಾಯ್ಸ್ ನಂತರ 2ನೇ ಅತ್ಯುತ್ತಮ ಚಲನಚಿತ್ರವಾಗಿ ಹೊರಹೊಮ್ಮಿದೆ. (ಏಜೆನ್ಸೀಸ್)