ಹುಡ್ಕೋ ನಿವಾಸಿಗಳ ಸಂಘಕ್ಕೆ ಪ್ರಕಾಶ್ ಅಧ್ಯಕ್ಷ: ಉಪಾಧ್ಯಕ್ಷರಾಗಿ ಕುಮಾರಯ್ಯ ಅವಿರೋಧ ಆಯ್ಕೆ

Prakash becomes president of HUDCO Residents Association Mandya
Published on

ಮಂಡ್ಯ: ನಗರದ ಹೌಸಿಂಗ್ ಬೋರ್ಡ್‌ನ ಹುಡ್ಕೋ ನಿವಾಸಿಗಳ ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷರಾಗಿ ನಗರಸಭಾ ಮಾಜಿ ಸದಸ್ಯ ಬಿ.ಪಿ.ಪ್ರಕಾಶ್ ಅಧ್ಯಕ್ಷರಾಗಿ ಹಾಗೂ ಕುಮಾರಯ್ಯ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಸಹಕಾರ ಸಂಘದ ಆಶ್ರಯದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿ ಸುಮಿತ್ರಾ ಅವಿರೋಧದ ಆಯ್ಕೆಯನ್ನು ೋಷಣೆ ಮಾಡಿದರು. ಸಂಘದ ಮಾಜಿ ಅಧ್ಯಕ್ಷ ಜಿ.ಟಿ.ವೀರಪ್ಪ ಮಾತನಾಡಿ, 40 ವರ್ಷದ ಇತಿಹಾಸವಿರುವ ನಮ್ಮ ಸಹಕಾರ ಸಂಘ ಈ ಹಿಂದೆ ಶಿಕ್ಷಣ ಸಂಸ್ಥೆ ನಡೆಸುವ ಮೂಲಕ ಬಹಳಷ್ಟು ಮಕ್ಕಳ ಭವಿಷ್ಯವನ್ನು ರೂಪಿಸಲಾಗಿತ್ತು. 100 ರೇಷನ್ ಕಾರ್ಡ್‌ಗಳ ಮೂಲಕ ಆರಂಭವಾದ ಸೊಸೈಟಿಯಲ್ಲಿ ಇಂದು 500ಕ್ಕೂ ಹೆಚ್ಚು ರೇಷನ್ ಕಾರ್ಡ್‌ಗಳನ್ನು ಹೊಂದಿದೆ. ಬಡಾವಣೆಯ ನಾಗರಿಕರಿಗೆ ಹತ್ತಿರದಲ್ಲೇ ಪಡಿತರ ನೀಡುವ ಮೂಲಕ ಎಲ್ಲರಿಗೂ ನೆರವಾಗುತ್ತಿದೆ. ನೂತನ ವರಿಷ್ಠರು ಸಂಸ್ಥೆಯನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿ ಎಂದು ಸಲಹೆ ನೀಡಿದರು.

ಮತ್ತೋರ್ವ ಮಾಜಿ ಅಧ್ಯಕ್ಷ ಗೋವಿಂದರಾಜು ಮಾತನಾಡಿ, ಬಳಕೆದಾರರ ಸಹಕಾರ ಸಂಘ ಈ ಬಡಾವಣೆಯ ನಾಗರಿಕರಿಗೆ ಸುಸಂದರ್ಭದಲ್ಲಿ ಪಡಿತರ ವಿತರಣೆ ಮಾಡುವ ಮೂಲಕ ಎಲ್ಲರಿಗೂ ನೆರವಾಗುತ್ತಿದೆ. ಸಹಕಾರ ಸಂಘ ಸ್ವಂತ ಜಾಗದಲ್ಲಿ ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಂತಾಗಲಿ ಎಂದು ಆಶಿಸಿದರು.

ಮಾಜಿ ಅಧ್ಯಕ್ಷ ಚಂದ್ರಮೌಳಿ, ನಿರ್ದೇಶಕರಾದ ಕೃಷ್ಣ ಅರಸ್, ಜವರಯ್ಯ, ಕೃಷ್ಣಮೂರ್ತಿ, ಬಿ.ಶ್ರೀಕಾಂತ್, ಸುನೀತಾ, ಪುಷ್ಪಲತಾ, ಎ.ಪಿ.ಭಾಸ್ಕರ್, ಶಿವಕುಮಾರ್, ಆಟೋ ರಾಜಣ್ಣ, ಡಾ.ಸೋಹನ್‌ಕುಮಾರ್, ಸೊಸೈಟಿ ಕಾರ್ಯದರ್ಶಿ ತ್ರಿವೇಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net