

ಆಂಧ್ರಪದೇಶ: ಪ್ಯಾನ್ ಇಂಡಿಯಾ(Pan India) ಸ್ಟಾರ್ ನಟ ಡಾರ್ಲಿಂಗ್ ಪ್ರಭಾಸ್(Darling Prabhas) ಇದೀಗ ಮತ್ತೊಂದು ದಾಖಲೆಯನ್ನು ಹೊಂದಿದ್ದು, ಈ ದಾಖಲೆ ಮಾಡಿದ ಏಕೈಕ ಟಾಲಿವುಡ್ ನಟ ಎಂಬ ಹೆಗ್ಗಳಿಕೆಗೆ ಪ್ರಭಾಸ್ ಪಾತ್ರರಾಗಿದ್ದಾರೆ.
ನಟ ಪ್ರಭಾಸ್ ಅಭಿನಯದ, ಓಂ ರಾವುತ್ ನಿರ್ದೇಶನದ ಆದಿಪುರುಷ್(Adipurush) ಚಿತ್ರ ಈಗಾಗಲೇ ಬಾಕ್ಸ್ ಆಫೀಸ್ನಲ್ಲಿ 400 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಟಾಲಿವುಡ್ ನಟರ ಪೈಕಿ ಪ್ರಭಾಸ್ ಅಭಿನಯದ ಬಾಹುಬಲಿ, ಬಾಹುಬಲಿ-2 ಮತ್ತು ಸಾಹೋ ಚಿತ್ರಗಳ ನಂತರ ಅಮೇರಿಕದಲ್ಲಿ 3 ಮಿಲಿಯನ್ ಡಾಲರ್ ಗಡಿ ದಾಟಿದ ನಾಲ್ಕನೇ ಚಿತ್ರ ಆದಿಪುರುಷ್ ಆಗಿದೆ! ಸದ್ಯ ತಾವು ನಟಿಸಿದ 3 ಚಿತ್ರಗಳ ನಂತರ 4ನೇ ಚಿತ್ರ ಆದಿಪುರುಷ್ ಆಗಿದ್ದು, ಇದು ಪ್ರಭಾಸ್ ಅವರಿಗೆ ವಿಶೇಷ ಗೌರವವನ್ನು ತಂದುಕೊಟ್ಟಿದೆ.
ಟಾಲಿವುಡ್ ನಟರಾದ ರಾಮ್ ಚರಣ್ ಅಭಿನಯದ 2 ಚಿತ್ರಗಳು, ಎನ್ಟಿಆರ್, ಅಲ್ಲು ಅರ್ಜುನ್ ಮತ್ತು ಮಹೇಶ್ ಬಾಬು ಅವರ ತಲಾ ಒಂದು ಸಿನಿಮಾಗಳು ಮೂರು ಮಿಲಿಯನ್ ಡಾಲರ್ ತಲುಪುವ ಮೂಲಕ ದಾಖಲೆ ನಿರ್ಮಿಸಿತ್ತು. ಆದ್ರೆ, ಈ ಟಾಪ್ ನಟರ ಪೈಕಿ ಪ್ರಭಾಸ್ ಅಭಿನಯದ ನಾಲ್ಕು ಚಿತ್ರಗಳು ಕೂಡ ಅಮೇರಿಕದಲ್ಲಿ 3 ಕೋಟಿ ಡಾಲರ್ ಗಳಿಕೆ ಮಾಡಿರುವುದು ಈ ದಾಖಲೆಗೆ ಪ್ರಮುಖ ಕಾರಣವಾಗಿದೆ,(ಏಜೆನ್ಸೀಸ್).