ಪ್ರಭಾಸ್ ಆದಿಪುರುಷ್ ಚಿತ್ರಕ್ಕೆ ಕೃತಿ

kruti
Published on

ಪ್ರಭಾಸ್ ನಾಯಕನಾಗಿ ನಟಿಸಲಿರುವ ‘ಆದಿಪುರುಷ್’ ಚಿತ್ರಕ್ಕೆ ನಾಯಕಿ ಯಾರು ಎಂಬ ಪ್ರಶ್ನೆ, ಸಿನಿಮಾ ಘೋಷಣೆ ಆದಾಗಿನಿಂದ ಕಾಡುತ್ತಲೇ ಇದೆ. ಸಾಕಷ್ಟು ನಟಿಯರ ಹೆಸರುಗಳು ಕೇಳಿಬಂದಿತ್ತಾದರೂ, ಅಧಿಕೃತವಾಗಿರಲಿಲ್ಲ. ಇದೀಗ ನಟಿ ಕೃತಿ ಸನೋನ್ ಪ್ರಭಾಸ್​ಗೆ ಜೋಡಿಯಾಗಲಿದ್ದಾರೆ ಎಂಬ ಮಾತು ಬಿಟೌನ್ ಅಂಗಳದಿಂದ ಕೇಳಿಬರುತ್ತಿದೆ.

ಈ ಮೊದಲು ಅನುಷ್ಕಾ ಶರ್ಮಾ ನಾಯಕಿ ಎನ್ನಲಾಗಿತ್ತು. ಅದಾದ ಬಳಿಕ ಕಿಯಾರಾ ಅಡ್ವಾಣಿ ಮತ್ತು ಶ್ರದ್ಧಾ ಕಪೂರ್ ಸಹ ಸರತಿಯಲ್ಲಿದ್ದರು. ಇದೀಗ ಚಿತ್ರದ ನಿರ್ವಪಕರು ಕೃತಿಯನ್ನು ಆಯ್ದುಕೊಂಡಿದ್ದಾರೆ ಎನ್ನಲಾಗಿದೆ. ಬಹುಭಾಷೆಯಲ್ಲಿ ನಿರ್ವಣವಾಗಲಿರುವ ಈ ಚಿತ್ರವನ್ನು ಓಂ ರಾವತ್ ನಿರ್ದೇಶನ ಮಾಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net