

ಕನ್ನಡದ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಈಗಲೂ ತುಂಬ ಎನಿರ್ಜಿಟಿಕ್. ವಯಸ್ಸು 45 ಆದರೂ, ಇಂದಿಗೂ ಚಾರ್ಮಿಂಗ್ ಮತ್ತು ಸದಾ ಆ್ಯಕ್ಟಿವ್. ಅದಕ್ಕೆ ಕಾರಣ ಅವರ ನಿತ್ಯದ ಜೀವನ ಶೈಲಿ. ಹೌದು, ಪುನೀತ್ ಅತ್ಯುತ್ತಮ ಡಾನ್ಸರ್ ಎಂಬುದು ಈಗಾಗಲೇ ಎಲ್ಲರಿಗೂ ಗೊತ್ತು. ಆ ಡಾನ್ಸ್ನಿಂದಲೇ ಪುನೀತ್ ಈಗಲೂ ಯಂಗ್ ಆಗಿದ್ದಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ ಅವರೇ ಈ ಸತ್ಯವನ್ನು ಬಾಯ್ಬಿಟ್ಟಿದ್ದರು. ನನ್ನ ಫಿಟ್ನೆಸ್ಗೆ ಡಾನ್ಸ್ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು. ಈಗಾಗಲೇ ಅವರ ವರ್ಕೌಟ್ ಸ್ಟೈಲ್ ಹೇಗಿರುತ್ತದೆ ಎಂಬುದಕ್ಕೆ ಹಲವು ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದರು. ಇದೀಗ ಇನ್ನೊಂದು ವಿಡಿಯೋ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಅಪ್ಪ-ಮಗಳಾಗಿ ಪ್ರಕಾಶ್ ರೈ, ಸಾಯಿ ಪಲ್ಲವಿ
ಪುನೀತ್ ಹೇಗೆಲ್ಲ ವರ್ಕೌಟ್ ಮಾಡ್ತಾರೆ? ಜಿಮ್ನಲ್ಲಿ ಅವರ ಇಷ್ಟದ ವ್ಯಾಯಾಮ ಯಾವುದು? ಅಭಿಮಾನಿ ವಲಯದಲ್ಲಿ ಹೀಗೆ ಬಗೆಬಗೆ ಪ್ರಶ್ನೆಗಳಿರುತ್ತವೆ. ಆ ಪ್ರಶ್ನೆಗಳಿಗೆ ಈ ವಿಡಿಯೋದಲ್ಲಿ ಉತ್ತರವಿದೆ. ಮನೆಯಲ್ಲಿಯೇ ಇರುವ ಜಿಮ್ನಲ್ಲಿ ಪುನೀತ್ ಬೆವರಿಳಿಸುತ್ತಿದ್ದಾರೆ. ಈ ಹಿಂದೆ ಕಿಕ್ ಬಾಕ್ಸಿಂಗ್, ಲೆಗ್ ಪಂಚಿಂಗ್, ಸ್ಕಿಪ್ಪಿಂಗ್, ಸಿಕ್ಸ್ ಪ್ಯಾಕ್ ವರ್ಕೌಟ್ ಮತ್ತು ಬೆಲ್ಲಿ ಫ್ಯಾಟ್ ಬರ್ನಿಂಗ್ ಹೇಗೆ ಎಂಬುದನ್ನು ಹೇಳಿಕೊಟ್ಟಿದ್ದರು. ಇದೀಗ ವಿಭಿನ್ನ ರೀತಿಯ ಪುಷ್ ಅಪ್ಸ್ ಟ್ರಿಕ್ಸ್ ಹೇಳಿಕೊಟ್ಟಿದ್ದಾರೆ.
ಈ ರೀತಿಯ ವಿಡಿಯೋ ಶೇರ್ ಮಾಡಿದ್ದಕ್ಕೆ, ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ನಿಮ್ಮ ಈ ವಿಡಿಯೋ ನಮಗೂ ಸ್ಫೂರ್ತಿಯಾಗಲಿದೆ ಎಂದು ಕೆಲವರು ಹೇಳಿದರೆ, ಪವರ್ ಆಫ್ ಫಿಟ್ನೆಸ್ ಎಂದು ಮತ್ತೊಂದಿಷ್ಟು ಮಂದಿ ಕಮೆಂಟಿಸಿದ್ದಾರೆ. ಸದ್ಯ ಲಾಕ್ಡೌನ್ ಹಿನ್ನೆಲೆಯಲ್ಲಿ ಪುನೀತ್ ಫಿಟ್ನೆಸ್ ಕುರಿತ ಇದ್ದ ಅಭಿಮಾನಿಗಳ ಕುತೂಹಲವನ್ನು ಪವರ್ಸ್ಟಾರ್ ತಣಿಸುತ್ತಿದ್ದಾರೆ. ಲಾಕ್ಡೌನ್ ತೆರವಾಗಿ ಶೂಟಿಂಗ್ಗೆ ಅನುಮತಿ ಸಿಗುತ್ತಿದ್ದಂತೆ ‘ಯುವರತ್ನ’ ಮತ್ತು ‘ಜೇಮ್ಸ್’ ಸಿನಿಮಾಗಳ ಕೆಲಸಗಳಲ್ಲಿಯೂ ಅವರು ಬಿಜಿಯಾಗಲಿದ್ದಾರೆ.