ಅರ್ಜೆಂಟೀನಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಸುನಾಮಿ ಎಚ್ಚರಿಕೆ! | Earthquake

dk - 2025-05-02T194013.996
Published on

Earthquake : ಚಿಲಿ ಮತ್ತು ಅರ್ಜೆಂಟೀನಾದ ದಕ್ಷಿಣ ಕರಾವಳಿಯಲ್ಲಿ 7.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ವರದಿ ಮಾಡಿದೆ.

ಭೂಕಂಪದ ಕೇಂದ್ರಬಿಂದು ಅರ್ಜೆಂಟೀನಾದ ಉಶುವಾಯಾ ನಗರದಿಂದ ದಕ್ಷಿಣಕ್ಕೆ 219 ಕಿಲೋಮೀಟರ್ (173 ಮೈಲುಗಳು) ಸಮುದ್ರದ ಕೆಳಗೆ ಇತ್ತು ಎಂದು ಯುಎಸ್‌ಜಿಎಸ್ ತಿಳಿಸಿದೆ.

ಅಲ್ಲದೆ, ಚಿಲಿಯ ಅಧಿಕಾರಿಗಳು ದೇಶದ ದಕ್ಷಿಣ ಭಾಗಕ್ಕೆ ಸುನಾಮಿ ಎಚ್ಚರಿಕೆ ನೀಡಿದ್ದಾರೆ ಎಂದು ಎಎಫ್‌ಪಿ ವರದಿ ಮಾಡಿದೆ.

ಚಿಲಿಯ ದಕ್ಷಿಣ ತುದಿಯಲ್ಲಿರುವ ಮಗಲ್ಲೇನ್ಸ್ ಪ್ರದೇಶದ ಕರಾವಳಿ ಪ್ರದೇಶವನ್ನು ಸುನಾಮಿಯ ಅಪಾಯದ ಕಾರಣ ಸ್ಥಳಾಂತರಿಸಬೇಕೆಂದು ರಾಷ್ಟ್ರೀಯ ವಿಪತ್ತು ನಿಯಂತ್ರಣಾಧಿಕಾರಿಗಳಳು ತಿಳಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಮಂಗಳವಾರ (ಏಪ್ರಿಲ್ 29) ಮ್ಯಾಕ್ವಾರಿ ದ್ವೀಪ ಪ್ರದೇಶದಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದ ಮೂರು ದಿನಗಳ ನಂತರ ಅರ್ಜೆಂಟೀನಾದಲ್ಲಿ ಭೂಕಂಪ ವರದಿಯಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net