ಇಂದು ವಿದ್ಯುತ್​ ಪೂರೈಕೆಯಲ್ಲಿ ವ್ಯತ್ಯಯ

Site inspection with officials, steps taken to beautify Taj Bawadi memorial
The Eightfold Path of Donation and Puja Festival
Published on

ವಿಜಯಪುರ : ಮುದ್ದೇಬಿಹಾಳ ತಾಲೂಕಿನ 220/ 110 ಕೆವಿ ವಿದ್ಯುತ್​ ಸ್ವೀಕರಣಾ ಕೇಂದ್ರದಲ್ಲಿ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆ. 21 ರಂದು ಸದರಿ ಉಪಕೇಂದ್ರದಿಂದ ಹೊರ ಹೋಗುವ ಎಲ್ಲ 11 ಕೆವ್ಹಿ ಮಾರ್ಗಗಳಲ್ಲಿನ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಕೃಷಿ ನೀರಾವರಿ ಮಾರ್ಗಗಳಲ್ಲಿ ವಿದ್ಯುತ್​ ವ್ಯತ್ಯಯವಾಗಲಿದೆ. ತಾಲೂಕಿನ ಬಸರಕೋಡದಿಂದ ಹಾಲಿ ಇರುವ 110 ಕೆವಿ ಹಿರೇಮುರಾಳವರೆಗೆ 20.836 ಕಿಮೀ.ಗಳ 110 ಕೆವಿ ದ್ವಿ ಮಾರ್ಗ ಗೋಪುರದ ಮೇಲೆ ಜೋಡಿ ವಿದ್ಯುತ್​ ಮಾರ್ಗ ಹೊಸದಾಗಿ ನಿರ್ಮಾಣ ಮಾಡುವುದು ಮತ್ತು ಹಾಲಿ ಇರುವ 110 ಕೆವಿ ಹಿರೇಮುರಾಳ ವಿದ್ಯುತ್​ ಉಪಕೇಂದ್ರದಲ್ಲಿ ಎರಡು ರ್ಟಮಿನಲ್​ ಬೇ ದಲ್ಲಿ ಬಸ್​ಬಾರ್​ ಫಾರ್ಮೆಶನ್​ ಮಾಡುವ ನಿಟ್ಟಿನಲ್ಲಿ 110 ಕೆವಿ ಹಿರೇಮುರಾಳ, ಕೆ.ಎನ್​. ಸೋಲಾಪುರ ಐಪಿಪಿ ಮಾರ್ಗದ ಮಧ್ಯೆ ಅಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಸದರಿ ಮಾರ್ಗಗಳಲ್ಲಿ ವಿದ್ಯುತ್​ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಬಸವನಬಾಗೇವಾಡಿ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net