

ಕಾಸರಗೋಡು: ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ನೆರವಿನೊಂದಿಗೆ ಕೆಎಸ್‌ಇಬಿ ಲಿಮಿಟೆಡ್ ಜಾರಿಗೆ ತರುತ್ತಿರುವ ವಿವಿಧ ಆರ್‌ಡಿಎಸ್ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜರುಗಿತು.
ಸಂಸದ ರಾಜಮೋಹನ್ ಉಣ್ಣಿತ್ತಾನ್ ಅಧ್ಯಕ್ಷತೆಯಲ್ಲಿ ಜಿಲ್ಲಾ ವಿದ್ಯುತ್ ಸಮಿತಿ ಸಭೆ ನಡೆಯಿತು. ಕೆಎಸ್‌ಇಬಿ ಲಿಮಿಟೆಡ್ ವತಿಯಿಂದ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವುದು ಅನಿವಾರ್ಯವಾಗಿದೆ. ಕೇಂದ್ರದ ಇಂತಹ ಯೋಜನೆಯ ಪ್ರಯೋಜನ ಸಮಾಜದ ಅತ್ಯಂತ ಕೆಳಸ್ತರಕ್ಕೂ ಲಭ್ಯವಾಗಬೇಕು ಎಂದು ಸಂಸದರು ತಿಳಿಸಿದರು.
ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಕೆಎಸ್‌ಇಬಿ ಲಿಮಿಟೆಡ್ ಡೆಪ್ಯುಟಿ ಚೀಫ್ ಇಂಜಿನಿಯರ್ ಎಸ್.ಬಿ.ಸುರೇಶ್ ಕುಮಾರ್, ಡೆಪ್ಯುಟಿ ಕಲೆಕ್ಟರ್ ಕೆ.ಅಜೀಶ್, ಕೆಎಸ್‌ಇಬಿ ಎಕ್ಸಿಕ್ಯೂಟಿವ್ ಇಂಜಿನಿಯರ್‌ಗಳಾದ ನಾಗರಾಜ್ ಭಟ್, ಟಿ.ಪಿ.ಆಶಾ, ಪ್ರಸರಣ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಂಜಿತ್ ಲಾಲ್ ಮತ್ತಿತರರು ಉಪಸ್ಥಿತರಿದ್ದರು.