More

    ಅಮೆಜಾನ್​ ಪ್ರೈಂನಲ್ಲಿ ಪವರ್​ ಪ್ಲೇ; ಕನ್ನಡಕ್ಕೆ ಡಬ್ ಆಗಿ ಪ್ರಸಾರ ಆರಂಭಿಸಿದ ಚಿತ್ರ

    ಬೆಂಗಳೂರು: ಅಮೆಜಾನ್ ಪ್ರೈಂನಲ್ಲಿ ಇದೀಗ ಪವರ್ ಪ್ಲೇ ಶುರುವಾಗಿದೆ. ಹಾಗಂತ ಇದೇನು ಕ್ರಿಕೆಟ್ ಇರಬಹುದಾ ಎಂದುಕೊಳ್ಳಬೇಡಿ. ಇದೊಂದು ಪಕ್ಕಾ ರೊಮ್ಯಾಂಟಿಕ್ ಕ್ರೈಂ ಥ್ರಿಲ್ಲರ್ ಸಿನಿಮಾ. ಮೂಲ ತೆಲುಗು ಸಿನಿಮಾವಾದರೂ, ಇದೀಗ ಕನ್ನಡದ ಪ್ರೇಕ್ಷಕರಿಗೂ ಹತ್ತಿರವಾಗುತ್ತಿದೆ. ಅಂದರೆ, ಅಮೆಜಾನ್ ಪ್ರೈಂನಲ್ಲಿ ಚಿತ್ರ ವೀಕ್ಷಣೆಗೆ ಲಭ್ಯವಿದೆ.

    ಇದನ್ನೂ ಓದಿ: ಸೆನ್ಸಾರ್ ಅನುಮತಿ ಕೊಟ್ಟರೂ, ಸ್ವಯಂಪ್ರೇರಿತವಾಗಿ 21 ಕಟ್ ಮಾಡಿದ `ರಾಧೆ’ ಚಿತ್ರತಂಡ

    ಕೊಂಡ ವಿಜಯ್ ಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ರಾಜ್ ತರುಣ್ ನಾಯಕನಾಗಿ ನಟಿಸಿದ್ದಾರೆ. ಅವರಿಗೆ ಹೇಮಲ್ ಇಂಗ್ಲೆ ಮತ್ತು ಪೂರ್ಣಾ ನಾಯಕಿಯರಾಗಿ ನಟಿಸಿದ್ದಾರೆ.ಮಹಿಧರ್ ಮತ್ತು ದೇವೇಶ್ ನಿರ್ಮಾಣ ಮಾಡಿರುವ ಈ ಚಿತ್ರ ಈಗಾಗಲೇ ಓಟಿಟಿನಲ್ಲಿ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದ್ದು, ಇದೀಗ ಕನ್ನಡಕ್ಕೂ ಡಬ್ ಆಗಿ ಅಮೆಜಾನ್​ನಲ್ಲಿ ಅದೇ ಹೆಸರಿನಲ್ಲಿ ಸ್ಟ್ರೀಮ್ ಆಗುತ್ತಿದೆ.

    ಇದನ್ನೂ ಓದಿ: ಫ್ರಾನ್ಸ್​​ನಿಂದ ಆಮ್ಲಜನಕ ಪ್ಲಾಂಟ್ ತರಿಸಲು ಸೋನು ಸೂದ್ ತಯಾರಿ

    ನಂದ್ಯಾಲ ರವಿ ಚಿತ್ರಕ್ಕೆ ಕಥೆ ಬರೆದು ಸಂಭಾಷಣೆಯನ್ನೂ ಬರೆದಿದ್ದಾರೆ. ಆ್ಯಂಡ್ರ್ಯೂ ಛಾಯಾಗ್ರಹಣ, ಸುರೇಶ್ ಬೊಬ್ಬಿಲಿ ಸಂಗೀತ, ಪ್ರವೀಣ್ ಪುಡಿ ಸಂಕಲನ, ಸಿವ ಅವರ ಕಲಾ ನಿರ್ದೇಶನ ಚಿತ್ರಕ್ಕಿದ್ದು, ವೇಣು ಕುರಪಾಟಿ ಸಹ ನಿರ್ದೇಶಕರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts