ಅಂಚೆ ಜನಸಂಪರ್ಕ ಅಭಿಯಾನ

abhiyana
ಡಾಕ್ ಸೇವಾ ಜನ್ ಸೇವಾ-ಒಂದೇ ಸೂರು ಸೇವೆ ಹಲವಾರು- ಅಂಚೆ ಜನ ಸಂಪರ್ಕ ಅಭಿಯಾನ ನಡೆಯಿತು
Published on

ಕುಂದಾಪುರ: ಭಾರತೀಯ ಅಂಚೆ ಇಲಾಖೆ ಕುಂದಾಪುರ ಉತ್ತರ ಉಪವಿಭಾಗ, ಮರವಂತೆ ಗ್ರಾಪಂ ಸಹಯೋಗದಲ್ಲಿ ಮರವಂತೆ ಗ್ರಾಪಂ ಸಭಾಭವನದಲ್ಲಿ ಡಾಕ್ ಸೇವಾ ಜನ್ ಸೇವಾ-ಒಂದೇ ಸೂರು ಸೇವೆ ಹಲವಾರು- ಅಂಚೆ ಜನ ಸಂಪರ್ಕ ಅಭಿಯಾನ ಬುಧವಾರ ನಡೆಯಿತು.

ಕುಂದಾಪುರ ಉತ್ತರ ಉಪ ಅಂಚೆ ವಿಭಾಗದ ಸಹಾಯಕ ಅಧೀಕ್ಷಕ ಕೃಷ್ಣರಾಜ ಭಟ್ಟರ ನೇತೃತ್ವ ವಹಿಸಿದ್ದರು. ವಿವಿಧ ಅಂಚೆ ಕ್ಷೇತ್ರಗಳಲ್ಲಿ ಸಾರ್ವಜನಿಕರಿಗೆ ಸೇವೆ ನೀಡಿ ಸಾಧನೆಗೈದ ಅಂಚೆ ಸಿಬ್ಬಂದಿಯನ್ನು ಗೌರವಿಸಲಾಯಿತು. ಡಾಕ್ ಸೇವಾ ಜನ್ ಸೇವಾ-ಒಂದೇ ಸೂರು ಸೇವೆ ಹಲವಾರು - ಅಂಚೆ ಜನ ಸಂಪರ್ಕ ಅಭಿಯಾನದಡಿ ನೂರಾರು ಗ್ರಾಮಸ್ಥರು ಪ್ರಯೋಜನ ಪಡೆದರು. ಆಧಾರ್-ಹೊಸ ನೋಂದಣಿ/ಪರಿಷ್ಕರಣೆ ಮತ್ತು ಎಲ್ಲ ರೀತಿಯ ತಿದ್ದುಪಡಿ, 18-65 ವರ್ಷದವರಿಗೆ ಅತ್ಯಲ್ಪ ವಾರ್ಷಿಕ ಪ್ರೀಮಿಯಂ ದರದಲ್ಲಿ 15 ಲಕ್ಷ /10 ಲಕ್ಷ ರೂ. ಆದಿತ್ಯ ಬಿರ್ಲಾ ಸಮಗ್ರ ರಕ್ಷಣಾ ಅಪಘಾತ ವಿಮಾ ಯೋಜನೆ ನೋಂದಣಿ, ಸರ್ಕಾರದ ವಿವಿಧ ಯೋಜನೆಗಳ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್ ಫಲಾನುಭವಿಗಳಿಗೆ ಐಪಿಪಿಬಿ ಅಂಚೆ ಆನ್‌ಲೈನ್ ಖಾತೆಗಳ ತೆರೆಯುವಿಕೆ, ಅಂಚೆ ಉಳಿತಾಯ/ವಿಮಾ ಸೌಲಭ್ಯಗಳ ಪ್ರಯೋಜನ ಹಾಗೂ ಇತರ ಎಲ್ಲ ಅಂಚೆ ಸೌಲಭ್ಯಗಳ ಮಾಹಿತಿ ಜನ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net