18 ವರ್ಷ ಆದವರಿಗೆ​ ಪೋಸ್ಟ್ ಆಫೀಸ್​ನಿಂದ ಸೂಪರ್​ ಯೋಜನೆ:​ ಪ್ರತಿ ತಿಂಗಳು ಸಿಗುತ್ತೆ 9,250 ರೂ!

Untitled design - 2025-10-10T124253.506
Published on

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (POMIS): 18 ವರ್ಷಕ್ಕಿಂತ ಹೆಚ್ಚು ವಯಸ್ಸಿನವರಿಗೆ ಉತ್ತಮ ಅವಕಾಶ ಇದೀಗ ಒದಗಿ ಬಂದಿದೆ. ಮಧ್ಯಮ ಮತ್ತು ಹಿಂದುಳಿದ ಜನರಿಗೆ ಅಂಚೆ ಕಚೇರಿಯ "ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (POMIS)" ಉತ್ತಮ ಮಾರ್ಗವಾಗಿದೆ. ಈ ಯೋಜನೆಯ ಮೂಲಕ, ನೀವು ಒಮ್ಮೆ ಹೂಡಿಕೆ ಮಾಡಬಹುದು ಮತ್ತು ಪ್ರತಿ ತಿಂಗಳು ಬಡ್ಡಿಯ ರೂಪದಲ್ಲಿ ನಿಗದಿತ ಮೊತ್ತವನ್ನು ಪಡೆಯಬಹುದು. ಸರ್ಕಾರದಿಂದ ಖಾತರಿಪಡಿಸಲ್ಪಟ್ಟಿರುವುದರಿಂದ ಇದು ತುಂಬಾ ಸುರಕ್ಷಿತ ಹೂಡಿಕೆ ಆಯ್ಕೆಯಾಗಿದೆ.

ಹೌದು ನೀವು 18 ವರ್ಷಕ್ಕಿಂತ ಹೆಚ್ಚು ವಯಸ್ಸಿನವರಾಗಿದ್ದರೆ, ಭಾರತೀಯ ಪೋಸ್ಟ್ ಆಫೀಸ್‌ನ ಮಾಸಿಕ ಆದಾಯ ಯೋಜನೆ (Post Office Monthly Income Scheme - POMIS) ಮೂಲಕ ತಿಂಗಳಿಗೆ 9,250 ರೂ.ಗಳ ಖಚಿತ ಆದಾಯ ಪಡೆಯಬಹುದು.(15 ಲಕ್ಷ ಹೂಡಿಕೆ ಮಾಡಿದ್ರೆ) ಇದು ಸರ್ಕಾರಿ ಬ್ಯಾಂಕ್​ನಿಂದ ರಕ್ಷಣೆಯುತವಾದ ಯೋಜನೆಯಾಗಿದೆ.

ಅರ್ಹತೆ (Eligibility)

ಭಾರತದ ನಿವಾಸಿಯಾಗಿರಬೇಕು. ವಯಸ್ಸು: 18 ವರ್ಷಕ್ಕಿಂತ ಹೆಚ್ಚು ವಯಸ್ಸಿನವರು ಸ್ವತಂತ್ರವಾಗಿ ಖಾತೆ ತೆರೆಯಬಹುದು. ಆದರೆ,10 ವರ್ಷಕ್ಕಿಂತ ಹೆಚ್ಚು ವಯಸ್ಸಿನವರು ಜಂಟಿ ಖಾತೆ(Joint Account) ತೆರೆಯಬಹದು. ಒಬ್ಬ ವ್ಯಕ್ತಿಯ ಒಟ್ಟು ಹೂಡಿಕೆ 9 ಲಕ್ಷಕ್ಕಿಂತ ಹೆಚ್ಚಾಗಿರಬಾರದು (ಒಂದೇ ಖಾತೆಯಲ್ಲಿ). ಸಹ-ಖಾತೆ (Joint Account) ಮೂಲಕ 15 ಲಕ್ಷದವರೆಗೆ ಹೂಡಿಕೆ ಮಾಡಬಹುದು.

ಆದಾಯ ಮತ್ತು ಹೂಡಿಕೆ (Income and Investment)

ವಾರ್ಷಿಕ 7.4ರಷ್ಟು ಬಡ್ಡಿ ಸಿಗುತ್ತೆ. 9 ಲಕ್ಷ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 5,550 ತಿಂಗಳು ಆದಾಯ ಪಡೆಯಬಹುದು. ಇದನ್ನು ಪ್ರತಿ ತಿಂಗಳು ನಿಮ್ಮ ಖಾತಗೆ ನೆರವಾಗಿ ಬರುತ್ತದೆ. ಇದರಿಂದ ದಿನನಿತ್ಯದ ಮನೆಯ ಖರ್ಚುಗಳಿಗೆ ನಿಗಲಿವೆ. ಇನ್ನು ಕನಿಷ್ಠ ಹೂಡಿಕೆ 1000 ರೂ ಇದೆ. ಅವಧಿ: 5 ವರ್ಷಗಳು (ಪೀಳಿಗೆ ಮುಗಿದ ನಂತರ ಹೂಡಿಕೆ ಮಾಡಿದ ಮೊತ್ತವನ್ನು ಮರಳಿ ಪಡೆಯಬಹುದು).

ಖಾತೆ ತೆರೆಯುವುದು: ಯಾವುದೇ ಪೋಸ್ಟ್ ಆಫೀಸ್‌ನಲ್ಲಿ ಆಧಾರ್, PAN ಮತ್ತು ಫೋಟೋದೊಂದಿಗೆ ತೆರೆಯಬಹುದು.

ಲಾಭ: ನಿವೃತ್ತಿ ನಂತರ ಅಥವಾ ಸ್ಥಿರ ಆದಾಯಕ್ಕಾಗಿ ಸೂಕ್ತ. ಆದರೆ, ಹೂಡಿಕೆ ಮೊದಲು ತೆರಿಗೆ ಸಲಹೆ ಪಡೆಯಿರಿ.

ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಪೋಸ್ಟ್ ಆಫೀಸ್‌ಗೆ ಭೇಟಿ ನೀಡಿ ಅಥವಾ ಅಧಿಕೃತ ವೆಬ್‌ಸೈಟ್ www.indiapost.gov.in ನಲ್ಲಿ ಪರಿಶೀಲಿಸಿ. ಹೂಡಿಕೆ ಮಾಡುವ ಮೊದಲು ನಿಮ್ಮ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ!

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net