

ಚೇತನ್ ನಾಡಿಗೇರ್
ಚೆನ್ನೈ: ಮಣಿರತ್ನಂ ನಿರ್ದೇಶನದ 'ಪೊನ್ನಿಯನ್ ಸೆಲ್ವನ್ 2' ಚಿತ್ರವು ಏ 28ರಂದು ಜಗತ್ತಿನಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ, ಬುಧವಾರ ರಾತ್ರಿ ಚೆನ್ನೈನ ನೆಹರು ಸ್ಟೇಡಿಯಂನಲ್ಲಿ ನಡೆದ ಭರ್ಜರಿ ಸಮಾರಂಭದಲ್ಲಿ ಕಮಲ್ ಹಾಸನ್ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.
ಈ ಸಮಾರಂಭದಲ್ಲಿ ಕಮಲ್ ಹಾಸನ್ ಅಲ್ಲದೆ, ವಿಕ್ರಮ್, ಐಶ್ವರ್ಯಾ ರೈ, ಸಿಂಬು, ಖುಷ್ಬೂ, ಶೋಭನಾ, ರೇವತಿ, ಸುಹಾಸಿನಿ ಮಣಿರತ್ನಂ, ಜಯಂ ರವಿ, ಕಾರ್ತಿ, ತ್ರಿಷಾ, ಶರತ್ ಕುಮಾರ್, ಪಾರ್ಥಿಬನ್, ಎ.ಆರ್. ರೆಹಮಾನ್, ಹಿರಿಯ ನಿರ್ದೇಶಕ ಭಾರತೀರಾಜ ಸೇರಿ ಹಲವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಖುಷ್ಬೂ, ‘ರೇವತಿ ಮತ್ತು ಶೋಭನಾ ಇಬ್ಬರೂ ಮಣಿರತ್ನಂ ಅವರ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದವರು. ಆ ಚಿತ್ರಗಳು ಅವರಿಬ್ಬರಿಗೂ ಸಾಕಷ್ಟು ಹೆಸರು ತಂದುಕೊಟ್ಟಿವೆ. ನಾನು ಮಣಿರತ್ನಂ ಅವರ "ಅಲೈಪಾಯುತೆ' ಚಿತ್ರದಲ್ಲಿ ನಟಿಸಿದ್ದೇನಾದರೂ, ನಾಯಕಿಯಾಗುವ ಅವಕಾಶ ಸಿಗಲಿಲ್ಲ ಎಂಬ ಬೇಸರವಿದೆ. ನನಗೆ ಅವರ ರೊಮ್ಯಾಂಟಿಕ್ ಚಿತ್ರಗಳೆಂದರೆ ಬಹಳ ಇಷ್ಟ ಮತ್ತು ಅವರು ತಮ್ಮ ಚಿತ್ರಗಳ ನಾಯಕಿಯರನ್ನು ಬಹಳ ಚೆನ್ನಾಗಿ ತೆರೆಯ ಮೇಲೆ ಚಿತ್ರಿಸುತ್ತಾರೆ' ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸುಹಾಸಿನಿ, ‘ಮಣಿರತ್ನಂ ಅವರ ರೊಮ್ಯಾಂಟಿಕ್ ಚಿತ್ರಗಳ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಅವರು ಬರೀ ತೆರೆಯ ಮೇಲಷ್ಟೇ ಅಲ್ಲ, ನಿಜಜೀವನದಲ್ಲೂ ಬಹಳ ರೊಮ್ಯಾಂಟಿಕ್’ ಎಂದು ಹೇಳಿದರು.
ಚಿತ್ರದಲ್ಲಿ ಚೋಳ ಸಾಮ್ರಾಜ್ಯದ ಗದ್ದುಗೆಗಾಗಿ ನಡೆಯುವ ಹೋರಾಟ, ಪಾಂಡ್ಯ ರಾಜರ ಕುತುಂತ್ರ ಮುಂತಾದ ಹಲವು ವಿಷಯಗಳನ್ನು ಒಳಗೊಂಡಿದೆ. ಈ ಟ್ರೇಲರ್ತನ್ನ ಅದ್ಧೂರಿ ಮೇಕಿಂಗ್, ಬೃಹತ್ ಸೆಟ್ಗಳಿಂದ ಗಮನ ಸೆಳೆಯುತ್ತಿದ್ದು, ಈಗಾಗಲೇ ನಾಲ್ಕು ಮಿಲಿಯನ್ಗೂ ಹೆಚ್ಚು ವೀಕ್ಷಣೆ ಕಂಡಿದೆ.
ಕಾಲಿವುಡ್, ಕಮಲ್ ಹಾಸನ್, ಪೊನ್ನಿಯನ್ ಸೆಲ್ವನ್ 2, ಮಣಿರತ್ನಂ, ವಿಕ್ರಮ್, ಐಶ್ವರ್ಯಾ ರೈ, ಸಿಂಬು, ಖುಷ್ಬೂ, ಶೋಭನಾ, ರೇವತಿ, ಸುಹಾಸಿನಿ ಮಣಿರತ್ನಂ, ಜಯಂ ರವಿ, ಕಾರ್ತಿ, ತ್ರಿಷಾ, ಶರತ್ ಕುಮಾರ್, ಪಾರ್ಥಿಬನ್, ಎ.ಆರ್. ರೆಹಮಾನ್, ಭಾರತೀರಾಜ, ಲೈಕಾ ಪ್ರೊಡಕ್ಷನ್ಸ್, ಮದರಾಸ್ ಟಾಕೀಸ್, ಟ್ರೇಲರ್