ರೇಪ್​ ಮಾಡಿ, ಬಸಿರು ಮಾಡಿದ ಪೊಲೀಸಪ್ಪ, ದಯವಿಟ್ಟು ಕ್ಷಮಿಸಿ ಬಿಡಮ್ಮಾ...!

rape
Published on

ಭುವನೇಶ್ವರ: ಇಲ್ಲಿಗೆ ಸಮೀಪದ ಬಿರ್​ಮಿತ್ರಾಪುರ ಪೊಲೀಸ್​ ಠಾಣೆಯ ಉಸ್ತುವಾರಿ ಹೊತ್ತಿದ್ದ ಇನ್​ಸ್ಪೆಕ್ಟರ್​ ಆನಂದ್​ ಚಂದ್ರ ಮಾಂಝಿ ತನ್ನ ನಾಲ್ವರು ಸಹಚರರ ಜತೆಗೂಡಿ 13 ವರ್ಷದ ಬಾಲೆಯ ಮೇಲೆ ನಾಲ್ಕು ತಿಂಗಳು ನಿರಂತರವಾಗಿ ಅತ್ಯಾಚಾರ ಎಸಗಿದ್ದರು. ಆಕೆ ಗರ್ಭ ಧರಿಸಿದ್ದ ವಿಷಯ ತಿಳಿದು ಗಭಪಾತವನ್ನೂ ಮಾಡಿಸಿದ್ದರು.

ಈ ವಿಷಯ ಬಹಿರಂಗಗೊಳ್ಳುತ್ತಲೇ ತಪ್ಪು ತಮ್ಮದಲ್ಲ ಎಂದು ಹೇಳಿಕೊಂಡು ಆನಂದ್​ ಚಂದ್ರ ಮಾಂಝಿ ಆರೋಪದಿಂದ ನುಣುಚಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ ಇದಾವುದನ್ನೂ ಪರಿಗಣಿಸದೆ ಒಡಿಶಾ ಡಿಜಿಪಿ ಅಭಯ್​ ಪ್ರಕರಣದ ತನಿಖೆಗೆ ಆದೇಶಿಸಿದ್ದರು.

ಈ ಹಿನ್ನೆಲೆಯಲ್ಲಿ ಸುಂದರ್​ಗಢ ಜಿಲ್ಲೆಯ ಬಿರ್​ಮಿತ್ರಾಪುರ ಮತ್ತು ರಾಯ್​ಬೋಗಾ ಪೊಲೀಸ್​ ಠಾಣೆಗಳಿಗೆ ನಾಲ್ವರು ಅಧಿಕಾರಿಗಳನ್ನು ಒಳಗೊಂಡ ಸಿಬಿ ತಂಡ ತನಿಖೆ ನಡೆಸಿತ್ತು. ಈ ಸಂದರ್ಭದಲ್ಲಿ ಆನಂದ್​ ಚಂದ್ರ ಮಾಂಝಿ ಮತ್ತು ಅವರ ನಾಲ್ಚರು ಸಹಚರರು ಬಾಲೆಯ ಮೇಲೆ ಅತ್ಯಾಚಾರ ಮಾಡಿ, ಆಕೆ ಗರ್ಭ ಧರಿಸಿದಾಗ ಗರ್ಭಪಾತ ಮಾಡಿಸಿದ್ದು ಖಚಿತವಾಯಿತು.

ಈ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಡಿಜಿಪಿ ಅಭಯ್​ ಇದೀಗ ಆನಂದ್​ ಚಂದ್ರ ಮಾಂಝಿ ಅವರನ್ನು ಕೆಲಸದಿಂದ ವಜಾಗೊಳಿಸಿದ್ದಾರೆ. ಜತೆಗೆ ಸಂತ್ರಸ್ತೆಯ ಬಳಿ ಕ್ಷಮೆ ಕೋರಿದ್ದಾರೆ. ಗರ್ಭಪಾತ ಮಾಡಿಸಿದ ಸರ್ಕಾರಿ ಆಸ್ಪತ್ರೆಯ ವೈದ್ಯರನ್ನೂ ಈ ಪ್ರಕರಣದಲ್ಲಿ ಆರೋಪಿಯನ್ನಾಗಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net