ಪೊಪೊಲೀಸ್ ಇಲಾಖೆಯಿಂದ ಪಬ್ಲಿಕ್ ಐ ಎಂಬ ಸಾರ್ವಜನಿಕ ದೂರು ವ್ಯವಸ್ಥೆ

Public eye
Published on

ಕಾರವಾರ: ಪಬ್ಲಿಕ್ ಐ ಎಂಬ ಪೊಲೀಸ್ ದೂರು ವ್ಯವಸ್ಥೆಯನ್ನು ಇಲಾಖೆಯಿಂದ ಆಯೋಜಿಸಿದ್ದು, ಸಾರ್ವಜನಿಕರು ಅದಕ್ಕೆ ದೂರು ನೀಡಬಹುದಾಗಿದೆ ಎಂದು ಎಸ್‌ಪಿ ಎಂ.ನಾರಾಯಣ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಕ್ಯುಆರ್ ಕೋಡ್ ಆಧಾರಿತ ದೂರು ವ್ಯವಸ್ಥೆ ಇದಾಗಿದೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ ಪೊಲೀಸ್ ಕಂಟ್ರೋಲ್ ರೂಂ.ನ ವಾಟ್ಸ್ ಆ್ಯಪ್ ನಂಬರ್‌ಗೆ ಸಂದೇಶ ಹೋಗುತ್ತದೆ. ಸಂಚಾರ ನಿಯಮ ಉಲ್ಲಂಘನೆ ಸೇರಿ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿಯನ್ನು ಅಲ್ಲಿ ಹಂಚಿಕೊಳ್ಳಬಹುದಾಗಿದೆ.

ಮಾಹಿತಿಯನ್ನು ಸಂಪೂರ್ಣ ಗೌಪ್ಯವಾಗಿಡಲಾಗುವುದು. ಮತ್ತು ಇಲ್ಲಿ ನೀಡಿದ ಮಾಹಿತಿಗೆ ಯಾವುದೇ ವಿವರಣೆಯನ್ನು, ಸಾಕ್ಷ್ಯ ವನ್ನು ನಾವು ಕೇಳುವುದಿಲ್ಲ. ವಿವರ ನಮ್ಮ ಸಾಮಾಜಿಕ ಜಾಲತಾಣ ವಿಭಾಗಕ್ಕೆ ಹೋಗಲಿದ್ದು, ಅಲ್ಲಿಂದ ಪೊಲೀಸ್ ಕಂಟ್ರೋಲ್ ರೂಂ.ಗೆ ರವಾನೆಯಾಗಲಿದೆ. 112 ವಾಹನವನ್ನು ಸ್ಥಳಕ್ಕೆ ಕಳಿಸಿ ದೂರಿನ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಕ್ರಮ ವಹಿಸಲಾಗುವುದು. ಕ್ರಮದ ಬಗ್ಗೆ ದೂರುದಾರರಿಗೆ ಮಾಹಿತಿಯನ್ನೂ ನೀಡಲಾಗುವುದು. ಸಾರ್ವಜನಿಕರು ಈ ವ್ಯವಸ್ಥೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net