ಆನ್ಲೈನ್ ವಂಚನೆ ಎಚ್ಚರಿಕೆ ಅಗತ್ಯ: ಚಿತ್ರಾ ಮಾಹಿತಿ

New Project (1)
Published on

ಮೂಲ್ಕಿ: ಇತ್ತೀಚಿನ ದಿನಗಳಲ್ಲಿ ಲೋನ್ ಕೊಡುತ್ತೇವೆ, ಇನ್ಶೂರೆನ್ಸ್ ಬೋನಸ್ ಬಂದಿದೆ, ಡಿಜಿಟಲ್ ಅರೆಸ್ಟ್, ಆನ್‌ಲೈನ್ ಆಟಗಳ ಮುಖಾಂತರ ಬಹಳಷ್ಟು ಜನರು ಮೋಸಕ್ಕೆ ಬಲಿಯಾಗಿ ಹಣ ಕಳೆದುಕೊಂಡಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಮೂಲ್ಕಿ ಪೊಲೀಸ್ ಸಿಬ್ಬಂದಿ ಚಿತ್ರಾ ಹೇಳಿದರು.

ಮೂಲ್ಕಿ ಪೊಲೀಸ್ ಠಾಣೆ ವತಿಯಿಂದ ಶಿಮಂತೂರು ಗ್ರಾಮದ ಅಂಗರಗುಡ್ಡೆಯಲ್ಲಿ ನಾಗರಿಕರೊಂದಿಗೆ ನಡೆದ ಸಭೆಯಲ್ಲಿ ಮಾಹಿತಿ ನೀಡಿದರು.

ಯುವಕರು ಹಾಗೂ ಮಕ್ಕಳು ಮೊಬೈಲ್, ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆಯಿಂದ ಇರಬೇಕು, ಮೊಬೈಲ್‌ನಲ್ಲಿ ಅಪರಿಚಿತರು ಡಿಜಿಟಲ್ ಅರೆಸ್ಟ್ ಎಂದು ಬೆದರಿಸಿ ಅಮಾಯಕರನ್ನು ವಂಚಿಸುತ್ತಿದ್ದಾರೆ. ವಂಚಕರ ಬಗ್ಗೆ ಆತಂಕ ಪಡದೆ ಕೂಡಲೇ ಪೊಲೀಸರನ್ನು ಸಂಪರ್ಕಿಸಬೇಕು. ಮಳೆಗಾಲದಲ್ಲಿ ಕಳ್ಳರ ಹಾವಳಿ ತಡೆಗಟ್ಟಲು ಮನೆಯ ಕಿಟಿಕಿ ಬಾಗಿಲುಗಳನ್ನು ಭದ್ರಪಡಿಸಿಕೊಳ್ಳಬೇಕು. ಪರಿಸರದಲ್ಲಿ ವ್ಯಾಪಾರ ಅಥವಾ ಅಮಾಯಕರಂತೆ ಓಡಾಡುವ ಅಪರಿಚಿತರ ಬಗ್ಗೆ ಠಾಣೆಗೆ ತಕ್ಷಣ ಮಾಹಿತಿ ನೀಡುವಂತೆ ವಿನಂತಿಸಿದರು. ಸ್ಥಳೀಯ ಹಿರಿಯ ನಾಗರಿಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net