ಆರು ತಿಂಗಳ ಹಿಂದಷ್ಟೇ ಬಡ್ತಿ ಹೊಂದಿದ್ದ ಪೊಲೀಸ್ ಅಧಿಕಾರಿ ಇನ್ನಿಲ್ಲ; ಇನ್​ಸ್ಪೆಕ್ಟರ್ ಪ್ರಾಣ ತೆಗೆದ ಕ್ಯಾನ್ಸರ್​

Dhananjay
Published on

ಬೆಂಗಳೂರು: ಆರು ತಿಂಗಳ ಹಿಂದಷ್ಟೇ ಬಡ್ತಿ ಪಡೆದ ಪೊಲೀಸ್ ಅಧಿಕಾರಿ ಜೀವನ್ಮರಣ ಹೋರಾಟ ನಡೆಸಿದರೂ ಕೊನೆಗೆ ಸಾವಿಗೆ ಶರಣಾಗುವಂತಾಗಿದೆ. ರಾಜಧಾನಿಯ ಪೊಲೀಸ್ ಇನ್​ಸ್ಪೆಕ್ಟರ್​ ಒಬ್ಬರನ್ನು ಕ್ಯಾನ್ಸರ್ ಬಲಿ ಪಡೆದಿದೆ.

ಬೆಂಗಳೂರಿನ ಪೊಲೀಸ್ ಇನ್​ಸ್ಪೆಕ್ಟರ್ ಧನಂಜಯ್​ ಸಾವಿಗೀಡಾದವರು. 2010ರ ಬ್ಯಾಚ್ ಸಬ್ ಇನ್​​ಸ್ಪೆಕ್ಟರ್ ನೇಮಕಾತಿಯಲ್ಲಿ ಆಯ್ಕೆಯಾಗಿದ್ದ ಧನಂಜಯ್​, ಆರು ತಿಂಗಳ ಹಿಂದಷ್ಟೇ ಇನ್​ಸ್ಪೆಕ್ಟರ್ ಆಗಿ ಬಡ್ತಿ ಹೊಂದಿದ್ದರು.

ಹಲಸೂರುಗೇಟ್, ಇಂದಿರಾನಗರ ಠಾಣೆಗಳಲ್ಲಿ ಸಬ್ ಇನ್​ಸ್ಪೆಕ್ಟರ್​ ಆಗಿ ಕೆಲಸ ನಿರ್ವಹಿಸಿದ್ದ ಇವರು, ಪ್ರಸ್ತುತ ವಿಧಾನಸೌಧ ಭದ್ರತಾ ವಿಭಾಗದಲ್ಲಿ ಇನ್​ಸ್ಪೆಕ್ಟರ್ ಆಗಿದ್ದರು. ಕ್ಯಾನ್ಸರ್​ಪೀಡಿತರಾದ್ದರಿಂದ ಕಳೆದ ಕೆಲ ತಿಂಗಳುಗಳಿಂದ ರಜೆಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಅದಾಗ್ಯೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net