Surprising Case: ಲಕ್ನೋ; ವಂಚನೆ ಆರೋಪದಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಯೊಬ್ಬ 5 ವರ್ಷದಗಳ ಹಿಂದೆ ಸತ್ತಿದೆನೆಂದು ಬಿಂಬಿಸಿ ಕಣ್ಮರೆಯಾಗಿದ್ದ ಇತನನ್ನು ಇದೀಗ ಪೊಲೀಸರು ಬಂಧಿಸುವ ಮೂಲಕ ಎಲ್ಲರೂ ಅಚ್ಚರಿಪಡುವಂತೆ ಮಾಡಿದ್ದಾರೆ.

ಹೌದು, 2019ರಲ್ಲಿ ತಾನು ಸತ್ತಿದ್ದಾನೆಂದು ಘೋಷಿಸಿಕೊಂಡಿದ್ದ ಆರೋಪಿಯನ್ನು ಲಕ್ನೋದ ಐಐಎಂ ಬಳಿ ಬಂಧಿಸಲಾಗಿದೆ. ಅಜಂಗಢದ ನಿವಾಸಿ ಅರವಿಂದ್ ಚೌಹಣ್ ಎಂದು ಗುರುತಿಸಲಾಗಿದೆ.
ಅಜಂಗಢದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಚೌಹಣ್, ಕಂಪನಿಯು ಜನರಿಂದ ಹಣ ಸಂಗ್ರಹಿಸುತ್ತಿತ್ತು(ಠೇವಣಿ ಇಡಲು) ಆದರೆ, ಈ ಕಂಪನಿಯು 2017 ರಲ್ಲಿ ತನ್ನ ಕಚೇರಿಯನ್ನು ಮುಚ್ಚಿತು. ಇದಾದ ನಂತರ, ಹಣವನ್ನು ಠೇವಣಿ ಇಟ್ಟ ಜನರು ತಮ್ಮ ಹಣವನ್ನು ಹಿಂತಿರುಗಿಸುವಂತೆ ಒತ್ತಡ ಹೇರಲು ಪ್ರಾರಂಭಿಸಿದರು. ಇದರಿಂದ ಬೇಸತ್ತ ಆರೋಪಿ ಚೌಹಣ್, ತನ್ನ ಮೊಬೈಲ್ ಅನ್ನು ತನ್ನ ಮನೆಯಲ್ಲಿಯೇ ಬಿಟ್ಟು 2019 ರಲ್ಲಿ ಲಕ್ನೋಗೆ ಹೋಗಿದ್ದ. ಇದಾದ ನಂತರ, ಅವನು ಲಕ್ನೋದ ಐಐಎಂ ಬಳಿ ಬಾಡಿಗೆಗೆ ಕೊಠಡಿ ತೆಗೆದುಕೊಂಡು ಆಟೋ ಓಡಿಸಲು ಪ್ರಾರಂಭಿಸಿದನು. ಆರೋಪಿಯ ಪತ್ನಿ ಸುನೀತಾ ಜಹಾಂಗಂಜ್ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು.
ಪೊಲೀಸರು ಪ್ರಕರಣ ಭೇದಿಸಿದ್ದೇಗೆ..?
ಪತ್ನಿ ನೀಡಿದ್ದ ಕೊಲೆ ಪ್ರಕರಣದಲ್ಲಿ ವಾಸುದೇವ್ ಚೌಹಾಣ್ ಮತ್ತು ಘರ್ಬರಣ್ ಚೌಹಾಣ್ ಅವರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ ಎಂದು ಹೇಳಲಾಗಿದೆ. ಕೊಲೆ ಪ್ರಕರಣ ದಾಖಲಿಸಿದ ನಂತರ, ತನಿಖೆಯ ಸಮಯದಲ್ಲಿ, ಪೊಲೀಸ್ ಕಣ್ಗಾವಲು ತಂಡವು ನಿರಂತರ ಕಾರ್ಯಚರಣೆಯ ಬಳಿಕ ಅರವಿಂದ್ ಚೌಹಣ್ ಸತ್ತಿಲ್ಲ ಎಂದು ಕಂಡುಹಿಡಿದಿದೆ. ಅವನು ತನ್ನ ಹೆಂಡತಿಯೊಂದಿಗೆ ವಾಟ್ಸಾಪ್ ಚಾಟ್ ಮೂಲಕ ನಿರಂತರ ಸಂಪರ್ಕದಲ್ಲಿದ್ದಾನೆ ಎಂದು ಅಧಿಕಾರಿಗಳು ಕಂಡುಕೊಂಡಿದ್ದಾರೆ. ಈ ಮಾಹಿತಿಯ ನಂತರ, ಪೊಲೀಸರು ಚುರುಕಾದರು ಮತ್ತು ಲಕ್ನೋದಲ್ಲಿ ಆತನನ್ನು ಬಂಧಿಸಿದ್ದಾರೆ. ವಂಚನೆ ಪ್ರಕರಣದಲ್ಲಿ ತಪ್ಪಿಸಿಕೊಳ್ಳಲು ನ್ಯಾಯಾಲಯದ ದಾರಿ ತಪ್ಪಿಸಲು ಪತ್ನಿ ಜತೆಗೂಡಿ ತಲೆಮರಿಸಿಕೊಳ್ಳಬೇಕಾಗಿ ಬಂದು ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.(ಏಜೆನ್ಸೀಸ್)
ಮಗು ಜನಿಸಿದ ಎಷ್ಟು ತಿಂಗಳ ಬಳಿಕ ಉಪ್ಪಿನ ಆಹಾರ ನೀಡಬೇಕು?; ತಜ್ಞರು ಹೇಳೊದೇನು? | Salty Food