ಕರೊನಾ ಪ್ರಚಾರದ ಸರಕಾಯ್ತು ರಕ್ಷಿತ್​ ಶೆಟ್ಟಿ ನಟನೆಯ ಈ ಸಿನಿಮಾ ಡೈಲಾಗ್​

EWRmqQkU8AAYWu4
Published on

ಬೆಂಗಳೂರು: ಕರೊನಾ ಹಾವಳಿ ಹಿನ್ನೆಲೆಯಲ್ಲಿ ಸರ್ಕಾರ ಒಂದಿಲ್ಲೊಂದು ರೀತಿಯಲ್ಲಿ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಸಿನಿಮಾ ಮಂದಿ ಕಡೆಗಳಿಂದಲೂ ಕರೊನಾ ಬಗ್ಗೆ ಕಾಳಜಿ ವಹಿಸಿ ಎಂದು ಹೇಳಿಸುತ್ತಿದೆ. ಸಿನಿಮಾಗಳ ಡೈಲಾಗ್​ಗಳನ್ನೂ ಬಳಸಿಕೊಳ್ಳುತ್ತಿದೆ. ಈಗ ರಕ್ಷಿತ್​ ಶೆಟ್ಟಿ ನಟನೆಯ ‘ಅವನೇ ಶ್ರೀಮನ್ನಾರಾಯಾಣ’ ಸಿನಿಮಾದ ಇದು ಚರಿತ್ರೆ ಸೃಷ್ಟಿಸೋ ಅವತಾರ ಡೈಲಾಗ್​ ಬಳಸಿಕೊಂಡು ಜಾಗೃತಿ ಮೂಡಿಸಿದೆ ಪೊಲೀಸ್​ ಇಲಾಖೆ. ಅಧಿಕೃತ ಟ್ವಿಟರ್​ ಖಾತೆಯಲ್ಲಿ, ‘ಇದು ಚರಿತ್ರೆ ಸೃಷ್ಟಿಸೋ ಅವತಾರ, ಮಾಸ್ಕ್​ ಅಪ್​ ಅದುವೆ ಸಿದ್ಧಾಂತ, ಹ್ಯಾಂಡ್​ ವಾಷ್​ ಈಗಿನ ವೇದಾಂತ‘ ಎಂದು ಬರೆಯಲಾಗಿದೆ. ‘ಕೇಳಿ ಕಾದಿರುವ ಬಾಂಧವರೇ, ಭುವಿಯಲ್ಲಿ ಕರೊನಾವನ್ನು ಅರಿತವರೇ, ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ, ಹೊರ ಬಂದರೇ ಅಷ್ಟೇ ಎಂಬುದನ್ನೂ ಪೋಸ್ಟರ್​ ಮೂಲಕ ಜಾಗೃತಿ ಮೂಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net