ಆನ್​ಲೈನ್ ಆಟಕ್ಕಾಗಿ ಮಾಡಿಕೊಂಡಿದ್ದ ಸಾಲದ ಬಾಧೆಯಿಂದ ಮನನೊಂದ ಪೊಲೀಸ್ ಕಾನ್​ಸ್ಟೇಬಲ್ ನೇಣಿಗೆ ಶರಣು!

ಸಾವು
Published on

ಉತ್ತರಕನ್ನಡ: ಹೊನ್ನಾವರದ ಕಾಸರಕೋಡ ಇಕೋ ಬೀಚ್ ಬಳಿ ಪೊಲೀಸ್ ಸಿಬ್ಬಂದಿಯೊಬ್ಬರು ಆತ್ಮಹತ್ಯೆ‌ ಮಾಡಿಕೊಂಡಿದ್ದಾರೆ. ರಾಮ ನಾಗೇಶ ಗೌಡ(32) ಮೃತ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಸಿಬ್ಬಂದಿ.

ಆತ್ಮಹತ್ಯೆ ಮಾಡಿಕೊಂಡಿರುವ ರಾಮ ನಾಗೇಶ್​ ಗೌಡ ಕುಮಟಾ ತಾಲೂಕಿನ ನಾಡುಮಾಸ್ಕೇರಿ ಮೂಲದವರಾಗಿದ್ದ, ಕುಂದಾಪುರ ಪೊಲೀಸ್ ಠಾಣೆಯ ಕರ್ತವ್ಯ ನಿರ್ವಹಿಸುತ್ತಿದ್ದರು.

ಮೃತ ರಾಮ ನಾಗೇಶ್ ಗೌಡ ಆನ್​ಲೈನ್​ ಜೂಜಾಟ ಆಡುತ್ತಿದ್ದು, ಸಾಲವನ್ನೂ ಮಾಡಿಕೊಂಡಿದ್ದರು. ಹೀಗಾಗಿ ಸಾಲದ ಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅಂದಾಜಿಸಲಾಗಿದೆ.‘

ಕಳೆದ ಐದು ದಿನಗಳಿಂದ ರಾಮ ನಾಗೇಶ್ ಗೌಡ ಮನೆಯಲ್ಲೂ ಇರದೇ ಕರ್ತವ್ಯಕ್ಕೂ ಹಾಜರಾಗಿರಲಿಲ್ಲ. ಹೀಗಾಗಿ ಎಲ್ಲರೂ ಹುಡುಕಾಟ ಆರಂಭಿಸಿದ್ದರು. ಈ ವೇಳೆ ಹೊನ್ನಾವರದ ಕಾಸರಕೋಡ ಇಕೋ ಬೀಚ್​ ಪರಿಸರದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net