ಬೇರೆ ಜಿಲ್ಲೆಗೆ ವರ್ಗಾವಣೆ; ಮೊಬೈಲ್​ಫೋನ್​ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಪೊಲೀಸ್ ಕಾನ್​ಸ್ಟೆಬಲ್!

Police Constable on Mobile Phone tower
Published on

ಹೊಸೂರು: ವರ್ಗಾವಣೆ ಸಂಬಂಧ ಪೊಲೀಸ್ ಪೇದೆಯೊಬ್ಬರು ಮೊಬೈಲ್​ಫೋನ್​ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೃಷ್ಣಗಿರಿಯಲ್ಲಿ ಬುಧವಾರ ನಡೆದಿದೆ.

ಮಣಿವೇಲ್ ಎಂಬುವವರು ಕೃಷ್ಣಗಿರಿ ಸಶಸ್ತ್ರ ಪಡೆಯಲ್ಲಿ ಕಾನ್​ಸ್ಟೆಬಲ್​ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇಲಾಖೆಯಲ್ಲಿ ಇವರ ಜತೆಗೆ ಕೆಲಸ ನಿರ್ವಹಿಸುತ್ತಿರುವವರನ್ನು ಅವರವರ ಸ್ವಂತ ಜಿಲ್ಲೆಗೆ ವರ್ಗಾವಣೆ ಮಾಡಿದ್ದು, ನನ್ನನ್ನೂ ಸ್ವಂತ ಜಿಲ್ಲೆಗೆ ವರ್ಗಾವಣೆ ಮಾಡುವುದಾಗಿ ಉನ್ನತ ಅಧಿಕಾರಿಗಳು ಭರವಸೆ ನೀಡಿ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಟವರ್ ಏರಿದ್ದರು.

ಅಲ್ಲದೆ ಇಲಾಖೆಯಲ್ಲಿ ಅಧಿಕಾರಿಗಳು ಗೌರವ ಕೊಡುತ್ತಿಲ್ಲ, ಹಿರಿಯ ಹಿರಿಯ ಅಧಿಕಾರಿಗಳು ಖುದ್ದಾಗಿ ಬಂದು ಅಹವಾಲು ಆಲಿಸಬೇಕು ಎಂದು ಒತ್ತಾಯಿಸಿದಾಗ ಸ್ಥಳಕ್ಕೆ ಬಂದ ಕೃಷ್ಣಗಿರಿ ಪೊಲೀಸ್ ವರಿಷ್ಠಾಧಿಕಾರಿ ಜತೆ ವಾಗ್ವಾದ ನಡೆಸಿದ್ದಾರೆ. ಖುದ್ದಾಗಿ ವಿಚಾರಣೆ ನಡೆಸುವುದಾಗಿ ಹಿರಿಯ ಅಧಿಕಾರಿ ಭರವಸೆ ನೀಡಿದ ನಂತರ ಒಪ್ಪಿದ ಅವರನ್ನು ಅಗ್ನಿಶಾಮಕ ದಳ ಸಿಬ್ಬಂದಿ ಕೆಳಗಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net