ಮತಾಂತರಗೊಂಡು ಮದುವೆಯಾದವಳಿಗೆ ಪತಿಯಿಂದಲೂ ಕಿರುಕುಳ, ಸ್ನೇಹಿತನಿಂದಲೂ ತೊಂದರೆ...

Arrest
Published on

ಮಂಗಳೂರು: ಗಂಡನಿಂದ ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸುವ ನೆಪದಲ್ಲಿ ಮತಾಂತರಗೊಂಡ ಮಹಿಳೆಯ ಸ್ನೇಹ ಸಂಪಾದಿಸಿ ಆಕೆ ಮತ್ತು ಆಕೆಯ ಅಪ್ರಾಪ್ತ ವಯಸ್ಸಿನ ಪುತ್ರಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಸಿದ್ದೀಕ್‌ನನ್ನು ಉಳ್ಳಾಲ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಈತ ಎಸ್‌ಡಿಪಿಐ ಮುಖಂಡ ಎಂದು ಹೇಳಲಾಗಿದೆ. 15 ವರ್ಷಗಳ ಹಿಂದೆ ಇಸ್ಲಾಂಗೆ ಮತಾಂತರಗೊಂಡಿದ್ದ ಮಹಿಳೆಯನ್ನು ಗಂಡ ತೊರೆದಿದ್ದ. ಆಕೆ ಅಪ್ರಾಪ್ತ ವಯಸ್ಸಿನ ಮಕ್ಕಳ ಜತೆ ಉಳ್ಳಾಲದ ಒಂಬತ್ತುಕೆರೆ ಎಂಬಲ್ಲಿ ವಾಸವಿದ್ದರು.

ಗಂಡನಿಂದ ನ್ಯಾಯ ದೊರಕಿಸಿ ಕೊಡುವ ನೆಪದಲ್ಲಿ ಮಹಿಳೆ ಜತೆ ಆರೋಪಿ ಸಲುಗೆ ಬೆಳೆಸಿಕೊಂಡು, ಅತ್ಯಾಚಾರ ಎಸಗಿ, ಪುತ್ರಿಯರಿಗೂ ಕಿರುಕುಳ ನೀಡಿದ್ದ. ಈ ಬಗ್ಗೆ ಮಹಿಳೆ ಜ.16ರಂದು ಉಳ್ಳಾಲ ಠಾಣೆಗೆ ದೂರು ನೀಡಿದ್ದರು. ಆರೋಪಿ ವಿರುದ್ಧ ಅತ್ಯಾಚಾರ ಹಾಗೂ ಪೋಕ್ಸೋ ಪ್ರಕರಣ ದಾಖಲಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net