More

    ವ್ಯಾಪಾರದ ಸೋಗಲ್ಲಿ ಮನೆಗೆ ಬಂದು ಬಟ್ಟೆ ಬಿಚ್ಚಿಸಿ ಯುವತಿ ಜತೆ ಕೂರಿಸಿದ್ದಲ್ಲದೆ ವಿಡಿಯೋ ಮಾಡಿ ಬೆದರಿಸಿ ದರೋಡೆ; 6 ಜನರ ಬಂಧನ

    ಬೆಂಗಳೂರು: ಸೌಂದರ್ಯವರ್ಧಕ ಸಾಮಗ್ರಿಗಳನ್ನು ಕೊಳ್ಳುವವರ ಸೋಗಿನಲ್ಲಿ ಮನೆಗೆ ಬಂದು, ಬಟ್ಟೆ ಬಿಚ್ಚಿಸಿ ಯುವತಿ ಜೊತೆ ಕೂರಿಸಿದ್ದಲ್ಲದೆ, ವಿಡಿಯೋ ಮಾಡಿ ಬೆದರಿಸಿ ದರೋಡೆ ಮಾಡಿಕೊಂಡು ಹೋಗಿದ್ದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅನಿತಾ, ದೀಪಾ, ವಿಜಯ್, ನವೀನ್, ಮಹಾಲಿಂಗಯ್ಯ, ಚಂದ್ರಶೇಖರ್ ಬಂಧಿತ ಆರೋಪಿಗಳು. ಬಂಧಿತರಿಂದ 9.5 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣ, ಒಂದು ಬೈಕ್, 63 ಸಾವಿರ ರೂ. ನಗದು, ಮೊಬೈಲ್ ಪೋನ್ ವಶಪಡಿಸಿಕೊಳ್ಳಲಾಗಿದೆ.

    ಬಟ್ಟೆ ಮತ್ತು ಕಾಸ್ಮೆಟಿಕ್ ವ್ಯಾಪಾರ ಮಾಡುತ್ತಿದ್ದ ಬಸವೇಶ್ವರನಗರ ನಿವಾಸಿ ಅಂಜು ಜೇಸ್ವಾನಿ ಎಂಬವರ ಮನೆಗೆ ನುಗ್ಗಿ ಈ ಗ್ಯಾಂಗ್ ದರೋಡೆ ಮಾಡಿತ್ತು. ವ್ಯಾಪಾರದ ಸೋಗಲ್ಲಿ ಮನೆಗೆ ಬಂದಿದ್ದ ಈ ಗ್ಯಾಂಗ್ ಬಳಿಕ ಬೆದರಿಕೆ ಹಾಕಿ ದರೋಡೆ ಮಾಡಿಕೊಂಡು ಹೋಗಿತ್ತು.

    ಇದನ್ನೂ ಓದಿ: ಭಾವಿ ಪತಿ ತನ್ನ ಕರೆ ಸ್ವೀಕರಿಸಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಯುವತಿ!

    ಅಂಜು ಮನೆಗೆ ಕಾಸ್ಮೆಟಿಕ್ ಖರೀದಿಗೆಂದು ದೀಪಾ ಎಂಬಾಕೆ ಮೊದಲು ಪ್ರವೇಶಿಸಿದ್ದಳು. ಅವಳ ಹಿಂದೆಯೇ ಇನ್ನೊಬ್ಬ ವ್ಯಕ್ತಿ ಬಂದಿದ್ದ. ಆತನ ಬೆನ್ನಿಗೆ ಉಳಿದ ಆರೋಪಿಗಳು ಬಂದಿದ್ದರು. ಮನೆಯಲ್ಲಿದ್ದ ವ್ಯಕ್ತಿಯ ಬಟ್ಟೆ ಬಿಚ್ಚಿಸಿ ದೀಪಾಳನ್ನು ಆತನ ಜತೆ ಕೂರಿಸಿ ವಿಡಿಯೋ ಮಾಡಿಕೊಂಡಿದ್ದ ಗ್ಯಾಂಗ್​, ಕೊನೆಗೆ ವೇಶ್ಯಾವಾಟಿಕೆ ನಡೆಸುತ್ತಿದ್ದೀರಿ ಎಂದು ಮನೆಯವರನ್ನು ಬೆದರಿಸಿತ್ತು.

    ಇದನ್ನೂ ಓದಿ: ಕುಡಿಯಬೇಡ ಎಂದಿದ್ದಕ್ಕೆ ಮನೆ ಬಿಟ್ಟ ಗಂಡ; ಮನನೊಂದು ವಿಷ ಸೇವಿಸಿದ ಪತ್ನಿ-ಪುತ್ರಿ; ಸತಿಯ ಸಾವಿನ ಸುದ್ದಿ ಕೇಳಿ ಪತಿಯೂ ಆತ್ಮಹತ್ಯೆ

    ಅಲ್ಲದೆ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದು, ಕೊಡಲು ನಿರಾಕರಿಸಿದಾಗ, ನಾವು ಸಂಘಟನೆಯವರು, ಹಣ ಕೊಡದಿದ್ದರೆ ಪೊಲೀಸರನ್ನು ಕರೆಸಿ ನಿನ್ನ ಬಣ್ಣ ಬಯಲು ಮಾಡುವುದಾಗಿ ಬೆದರಿಸಿದ್ದರು. ಹಣ ಕೊಡದಿದ್ದಾಗ ಅಂಜು ಫೋನ್​ನಿಂದ ಫೋನ್​ ಪೇ ಮೂಲಕ ತಮ್ಮ ನಂಬರ್​ಗೆ 63 ಸಾವಿರ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಜೊತೆಗೆ ಮನೆಯಲ್ಲಿದ 152 ಗ್ರಾಂ ಚಿನ್ನಾಭರಣ ಹಾಗೂ ಮೊಬೈಲ್​ಫೋನ್​ ಕೂಡ ಕಿತ್ತುಕೊಂಡು ಪರಾರಿಯಾಗಿದ್ದಾರೆ.

    ಇದನ್ನೂ ಓದಿ: ತಪ್ಪಿತು ಭಾರಿ ದುರಂತ: ಎಕ್ಸ್​ಪ್ರೆಸ್​ ರೈಲು ಚಲಿಸುತ್ತಿರುವಾಗಲೇ ಕಳಚಿಕೊಂಡವು ಎರಡು ಬೋಗಿ…

    ಈ ಸಂಬಂಧ ಭಾನುವಾರ ಮಧ್ಯಾಹ್ನ ಬಸವೇಶ್ವರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಕಾರ್ಯಾಚರಣೆಗಿಳಿದ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಈ ಹಿಂದೆ ಆರೋಪಿ ಜತೆ ದೂರುದಾರರಿಗೆ ಸಂಪರ್ಕವಿತ್ತು. ಹೀಗಾಗಿ ಆರೋಪಿಗಳು ಸೀದಾ ಮನೆಗೆ ಬಂದಿದ್ದಾರೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.

    ಅಂದು ನಿಧಿ ಸುಬ್ಬಯ್ಯ, ಇಂದು ಆವಂತಿಕಾ ಶೆಟ್ಟಿ; ಇಬ್ಬರದ್ದೂ ಬಹುತೇಕ ಒಂದೇ ಥರ ಬೇಸರ!

    ಇದು ‘ಎಣ್ಣೆ-ಏಟು’: ಪಾನಮತ್ತ ಚಾಲಕ, ಕೋಪೋದ್ರಿಕ್ತ ಮಾಲೀಕ; ಮುಂದಾಗಿದ್ದೆಲ್ಲ ವೈರಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts